Get Updates
Get notified of breaking news, exclusive insights, and must-see stories!

ಐವತ್ತು ರುಪಾಯಿ ಖರ್ಚು ಮಾಡಿ, ಐದು ಪೈಸೆಯ ಚೆಕ್ ಕಳಿಸಿದ ವೊಡಾಫೋನ್

ಮಂಗಳೂರು, ಜುಲೈ 6: ಚೆಕ್ ಪುಸ್ತಕ ತೆಗೆದುಕೊಳ್ಳುವಾಗ ಒಂದೊಂದು ಬ್ಯಾಂಕ್ ಗಳು ಒಂದೊಂದು ರೀತಿ ಶುಲ್ಕ ವಿಧಿಸುತ್ತವೆ. ಕೆಲವು ಯಾವುದೇ ಶುಲ್ಕ ಹಾಕದಿರಬಹುದು. ಆದರೆ ಒಂದು ಚೆಕ್ ಹಾಳೆಗೆ ಕನಿಷ್ಠ ಒಂದು ರುಪಾಯಿ ಶುಲ್ಕ ಆಗೇ ಆಗುತ್ತದೆ. ಆದರೆ ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಮೊಬೈಲ್ ಕಂಪೆನಿಯಿಂದ 5 ಪೈಸೆಯ ಚೆಕ್ ಬಂದಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಶರೀಫ್ ಅಬ್ಬಾಸ್ ವಳಾಲ್ ಅವರು ಈ ಐದು ಪೈಸೆಯ ಚೆಕ್ ಪಡೆದವರು. ಮುಂಬಯಿಯಲ್ಲಿ ಉದ್ಯಮಿಯಾಗಿರುವ ಶರೀಫ್ ಅಬ್ಬಾಸ್ ವಳಾಲ್ ಅವರಿಗೆ ವೊಡಾಪೋನ್ ಕಂಪೆನಿ ಐದು ಪೈಸೆಯ ಚೆಕ್ ಕಳುಹಿಸಿಕೊಟ್ಟಿದೆ.

Mangaluru person receives 5 paisa cheque from Vodafone

ಸುಮಾರು ವರ್ಷಗಳಿಂದ ಶರೀಫ್ ಅವರು ವೊಡಾಪೋನ್ ಸಿಮ್ ಉಪಯೋಗಿಸುತ್ತಿದ್ದರು. ಪೋಸ್ಟ್ ಪೇಯ್ಡ್ ಕನೆಕ್ಷನ್ ಹೊಂದಿದ್ದ ಅವರು ನಾಲ್ಕು ತಿಂಗಳ ಹಿಂದೆ ಬೇರೆ ಕಂಪೆನಿಯ ಸಿಮ್ ಪಡೆದುಕೊಂಡಿದ್ದರು.

ಆಗ ಬಾಕಿ ಮೊತ್ತವನ್ನು ಇಂಟರ್ ನೆಟ್ ಮೂಲಕ ವೊಡಾಪೋನ್ ಗೆ ಪಾವತಿಸಿದ್ದರು. ಇದೀಗ ವೊಡಾಪೋನ್ ನಿಂದ ಇವರ ಖಾತೆಯಲ್ಲಿದ್ದ ಹೆಚ್ಚುವರಿ ಹಣವೆಂದು 5 ಪೈಸೆಯನ್ನು ಕಳುಹಿಸಿಕೊಟ್ಟಿದೆ. ಈ ಐದು ಪೈಸೆಯ ಚೆಕ್ ಕಳುಹಿಸಲು ವೊಡಾಪೋನ್ ಕಂಪೆನಿ ಸುಮಾರು 50 ರೂಪಾಯಿಯಷ್ಟು ಖರ್ಷು ಮಾಡಿದೆ.

ಅದೇ ರೀತಿ ಈ ಚೆಕ್ ಅನ್ನು ಬ್ಯಾಂಕಿಗೆ ಹಾಕಲು ಶರೀಫ್ ಅವರಿಗೂ ಖರ್ಚಿದೆ. ಈ ಮೂಲಕ ಕಂಪೆನಿ ಪ್ರಾಮಾಣಿಕತೆ ಮೆರೆದರೆ, 5 ಪೈಸೆ ಚೆಕ್ ಪಡೆದುಕೊಂಡ ಗ್ರಾಹಕ ಮಾತ್ರ ಚೆಕ್ ಅನ್ನು ಏನು ಮಾಡುವುದೆಂದೆ ತೋಚದಂತಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+