ಸುರತ್ಕಲ್ ನಲ್ಲಿ ಮಗಳ ಮೇಲೆಯೇ ತಂದೆಯಿಂದ ಅತ್ಯಾಚಾರ
ತನ್ನ ಮಗಳ ಮೇಲೆ ತಂದೆಯೇ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಯ ಸಸಿಹಿತ್ಲು ಎಂಬಲ್ಲಿ ನಡೆದಿದೆ. ಪರಿಣಾಮ ಅಪ್ರಾಪ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಮಂಗಳೂರು, ಏಪ್ರಿಲ್ 3: ತನ್ನ ಮಗಳ ಮೇಲೆ ತಂದೆಯೇ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಯ ಸಸಿಹಿತ್ಲು ಎಂಬಲ್ಲಿ ನಡೆದಿದೆ. ಪರಿಣಾಮ ಅಪ್ರಾಪ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಪ್ರಕರಣದ ಆರೋಪಿ ವಾಮನ ಬಂಗೇರಾ ತಲೆಮರೆಸಿಕೊಂಡಿದ್ದಾನೆ. ಈತ ಕಳೆದ ಏಳೆಂಟು ತಿಂಗಳಿನಿಂದ ಬೆದರಿಸಿ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ . ಮಗಳು ಗರ್ಭಿಣಿಯಾಗಿದ್ದರೂ ಮನೆಮಂದಿಯ ಗಮನಕ್ಕೆ ಬಂದಿರಲಿಲ್ಲ. ಎರಡು ದಿನದ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಈ ಸಮಯದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.[ಉಳ್ಳಾಲ ಹೆಡ್‌ಕಾನ್‌ಸ್ಟೇಬಲ್ ರವಿಚಂದ್ರ ನಾಯಕ್ ಗೆ ಮುಖ್ಯಮಂತ್ರಿ ಪದಕ]

ಈ ಸಂದರ್ಭದಲ್ಲಿ ವೈದ್ಯರು ವಿಚಾರಿಸಿದರೂ ಬಾಲಕಿ ಭಯದಿಂದ ವಿಷಯ ಬಾಯಿ ಬಿಟ್ಟಿರಲಿಲ್ಲ. ಬಳಿಕ ಪೊಲೀಸರು ಆಗಮಿಸಿ ಬಾಲಕಿ ಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂದರ್ಭ ಆಕೆ ತಂದೆಯೇ ತನ್ನನ್ನು ಅತ್ಯಾಚಾರ ನಡೆಸಿರುವ ವಿಷಯ ತಿಳಿಸಿದ್ದಳು.[ಮಂಗಳೂರು: ಜೈಲು ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕೈದಿ ಬಲಿ? & ಇತರ ಸುದ್ದಿ]
ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ವಾಮನ ಬಂಗೇರಾ ತಲೆಮರೆಸಿಕೊಂಡಿದ್ದಾನೆ. ಸುರತ್ಕಲ್ ಠಾಣಾ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.












Click it and Unblock the Notifications