ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನೈಕ್ ಜೊತೆ ಮಂಗಳೂರು ಶಾಸಕ!
ಸುರತ್ಕಲ್, ನವೆಂಬರ್, 05 : ಮಂಗಳೂರು ಶಾಸಕ ಮೊಯ್ದಿನ್ ಬಾವ ಅವರು ಹಿಂದೂ ವಿರೋಧಿ, ಮುಸ್ಲಿಂ ಧರ್ಮಪ್ರಚಾರಕರ ಜೊತೆ ತೆಗೆಸಿಕೊಂಡಿದ್ದ ಫೋಟೋ ಬ್ಯಾನರನ್ನು ತೆರವುಗೊಳಿಸಿದ ಶಾಸಕರು ಬ್ಯಾನರ್ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಪೀಸ್ ಚಾನೆಲ್ ನ ಕಾರ್ಯಕ್ರಮದಲ್ಲಿ ಪ್ರತಿ ನಿತ್ಯ ಹಿಂದೂ ದೇವರುಗಳ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನೈಕ್ ಮತ್ತು ಸಂಸದ ಅಕ್ಬರುದ್ದೀನ್ ಒವೈಸಿ ಜೊತೆ ಶಾಸಕ ಮೊಯ್ದಿನ್ ಬಾವಾ ಇರುವ ಫೋಟೋ ಹಿಂದೂ ಭಾಂದವರಿಗೆ ಲಭ್ಯವಾಗಿದೆ. ತಕ್ಷಣ ಅವರು ಬ್ಯಾನರ್ ಮಾಡಿಸಿ ನಗರದಲ್ಲಿ ಅಳವಡಿಸಿದ್ದಾರೆ.[ಮಂಗಳವಾರ ಕ್ಷೌರದಂಗಡಿ ಮುಚ್ಚದ್ದಕ್ಕೆ ಭುಗಿಲೆದ್ದ ಹಿಂಸಾಚಾರ]

ಆ ಪೋಟೋಗಳನ್ನು ಪಡೆದುಕೊಂಡ ಕೆಲವು ಹಿಂದೂ ಬಾಂದವರು, 'ಹಿಂದೂ ಧರ್ಮ, ಹಿಂದೂ ದೇವರುಗಳನ್ನು ಪೀಸ್ ಚಾನೆಲ್ ಗಳಲ್ಲಿ ಗಂಟೆಗಟ್ಟಲೆ ಹೀಯಾಳಿಸಿ ತನ್ನ ಇಸ್ಲಾಂ ಮಾತ್ರ ಶ್ರೇಷ್ಠ ಎಂದು ಬೊಬ್ಬೆ ಇಡುವ ಬೊಗಳೆ ಪಂಡಿತ ಹಿಂದೂ ವಿರೋಧಿ ಝಾಕೀರ್ ಜೊತೆ ಶಾಸಕ ಮೊಯ್ದಿನ್ ಬಾವಾ' ಎಂದು ಫ್ಲೆಕ್ಸ್ ಮಾಡಿ ಅಳವಡಿಸಿ ಇಂತಹ ಹಿಂದೂ ವಿರೋಧಿ ಕೋಮುವಾದಿ ಶಾಸಕರು ನಮಗೆ ಬೇಕೇ? ಎನ್ನುವುದನ್ನು ಬರೆದಿದ್ದರು.
ಬಾನ್ಯರ್ ಬಿದ್ದ ಕೆಲವೇ ಕ್ಷಣದಲ್ಲಿ ಈ ಸುದ್ದಿ ಶಾಸಕರನ್ನು ಮುಟ್ಟಿದೆ. ತಕ್ಷಣ ಎಚ್ಚೆತ್ತ ಶಾಸಕರು ಕೂಡಲೇ ಬಾನ್ಯರ್ ತೆರವುಗೊಳಿಸಿದ್ದಾರೆ. ಬ್ಯಾನರ್ ಅಳವಡಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರು ಬ್ಯಾನರ್ ಅಳವಡಿಸಿದವರ ಬೇಟೆ ಆರಂಭಿಸಿದ್ದಾರೆ.












Click it and Unblock the Notifications