Mangaluru-Madgaon Train: ಮಂಗಳೂರು-ಮಡಗಾಂವ್ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ದರ ಇಳಿಕೆ

ಮಂಗಳೂರು, ಮಾರ್ಚ್ 01: ಕರ್ನಾಟಕದ ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ಮಂಗಳೂರು ಸೆಂಟ್ರಲ್-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ದರವನ್ನು ಕಡಿಮೆ ಮಾಡಲಾಗಿದೆ. ಮಾರ್ಚ್‌ 1ರಿಂದಲೇ ಜಾರಿಗೆ ಬರುವಂತೆ ಈ ರೈಲು ಕಾಯ್ದಿರಿಸದ ರೈಲಾಗಿ ಸಂಚಾರವನ್ನು ನಡೆಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ದರ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಹ ಸಂಚಾರವನ್ನು ನಡೆಸುತ್ತಿದೆ.

ಮಾರ್ಚ್‌ 1 ರಿಂದ ಅನ್ವಯವಾಗುವಂತೆ ಮಂಗಳೂರು ಸೆಂಟ್ರಲ್-ಮಡಗಾಂವ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 56616/ 615 ಸಂಪೂರ್ಣ ಕಾಯ್ದಿರಿಸದ ರೈಲಾಗಿ ಸಂಚಾರವನ್ನು ನಡೆಸುತ್ತದೆ. ಇದರಿಂದಾಗಿ ದರಗಳು ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Mangaluru Madgaon Express Special To Run As Unreserved Passenger Train Schedule And Fare

ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಜಂಟಿಯಾಗಿ ಮಂಗಳೂರು-ಮಡಗಾಂವ್ ರೈಲನ್ನು ಸಂಪೂರ್ಣ ಕಾಯ್ದಿರಿಸದ ರೈಲಾಗಿ ಓಡಿಸಲು ಒಪ್ಪಿಗೆ ಕೊಟ್ಟಿವೆ. ಇದರಿಂದಾಗಿ ರೈಲಿನ ದರಗಳು ಶೇ 40ರಷ್ಟು ಕಡಿಮೆಯಾಗಲಿದೆ. ಈ ರೈಲು 18 ಬೋಗಿಯನ್ನು ಹೊಂದಿದೆ. ಗೋವಾ-ಮಂಗಳೂರು ಸಂಪರ್ಕಿಸುವ ಪ್ರಮುಖ ರೈಲು ಇದಾಗಿದೆ.

ಕಾಯ್ದರಿಸಿದ ರೈಲಾಗಿ ಸಂಚಾರ: ಕೋವಿಡ್ ಸಮಯದಲ್ಲಿ ಎಲ್ಲಾ ಕಾಯ್ದಿರಿಸದ ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆ ರದ್ದುಗೊಳಿಸಿತ್ತು. ರೈಲುಗಳನ್ನು ಕಾಯ್ದಿರಿಸುವ ವಿಶೇಷ ಸೂಪರ್ ಫಾಸ್ಟ್ ರೈಲಾಗಿ ಪರಿವರ್ತನೆ ಮಾಡಿತ್ತು. ಇದರಿಂದಾಗಿ ದರಗಳು ಹೆಚ್ಚಾಗಿ, ಜನರಿಗೆ ತೊಂದರೆ ಆಗಿತ್ತು. ಕೋವಿಡ್ ಮುಗಿದು ಪರಿಸ್ಥಿತಿ ಸಹಜ ಸ್ಥಿತಿಗೆ ಬಂದರೂ ಸಹ ರೈಲ್ವೆ ಇಲಾಖೆ ಹಲವು ರೈಲುಗಳನ್ನು ಇನ್ನೂ ಕಾಯ್ದಿರಿಸದ ರೈಲಾಗಿ ಪರಿವರ್ತನೆ ಮಾಡಿಲ್ಲ.

ಪ್ರಯಾಣಿಕರು ರೈಲನ್ನು ಕಾಯ್ದರಿಸದ ರೈಲಾಗಿ ಪರಿವರ್ತನೆ ಮಾಡಬೇಕು ಎಂದು ಬೇಡಿಕೆ ಇಡುತ್ತಲೇ ಇದ್ದರು. ಈಗ ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಿರುವ ಕಾರಣ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಕಾಯ್ದಿರಿಸದ ರೈಲಾಗಿ ಪರಿವರ್ತನೆ ಮಾಡಲಾಗಿದೆ.

ವಿಶೇಷ ಎಕ್ಸ್‌ಪ್ರೆಸ್ ರೈಲು ಕಾಯ್ದರಿಸಿದ ರೈಲಾಗಿ ಪರಿವರ್ತನೆ ಆದರೆ ಆಗುವ ಒಂದೇ ಬದಲಾವಣೆ ದರಗಳ ಇಳಿಕೆ. ನಿಲ್ದಾಣ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ವಿಶೇಷ ಎಕ್ಸ್‌ಪ್ರೆಸ್ ರೈಲಿನಲ್ಲಿ ಕನಿಷ್ಠ ಪ್ರಯಾಣ ದರ 30 ರೂ. ಇದ್ದರೆ, ಪ್ಯಾಸೆಂಜರ್ ರೈಲಿನಲ್ಲಿ ಅದು 10 ರೂ. ಆಗುತ್ತದೆ.

ಮಾರ್ಚ್ 1ರಿಂದ ಅನ್ವಯವಾಗುವಂತೆ ಮಂಗಳೂರು ಸೆಂಟ್ರಲ್-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾಯ್ದಿರಿಸದ ರೈಲಾಗಿ ಸಂಚಾರ ನಡೆಸಲಿದೆ. ಇದರಿಂದ ರೈಲಿನ ದರ ಇಳಿಕೆಯಾಗಲಿದೆ. ಫೆಬ್ರವರಿ 28ರ ತನಕ ಮಂಗಳೂರು ಸೆಂಟ್ರಲ್-ಮಡಗಾಂವ್ ನಡುವಿನ ಪ್ರಯಾಣ ದರ 150 ರೂ. ಇತ್ತು, ಇದು 85 ರೂ.ಗಳಿಗೆ ಇಳಿಕೆಯಾಗಲಿದೆ.

ಮಂಗಳೂರು-ಕಾರವಾರ ನಡುವಿನ ದರ 125 ರೂ. ನಿಂದ 75 ರೂ.ಗಳಿಗೆ ಇಳಿಕೆಯಾಗಲಿದೆ. ಮಂಗಳೂರು-ಭಟ್ಕಳ ದರ 75 ರೂ. ನಿಂದ 45 ರೂ.ಗೆ ಇಳಿಕೆ, ಮಂಗಳೂರು-ಕುಂದಾಪುರ ದರ 60 ರೂ. ನಿಂದ 30 ರೂ.. ಮಂಗಳೂರು ಸೆಂಟ್ರಲ್-ಉಡುಪಿ ನಡುವಿನ ದರ 45 ರೂ. ನಿಂದ 25 ರೂ.ಗೆ ಇಳಿಕೆಯಾಗುತ್ತಿದೆ.

ರೈಲು ನಂಬರ್ 56616 ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 5.30ಕ್ಕೆ ಹೊರಡಲಿದ್ದು ಮಡಗಾಂವ್‌ಗೆ 1.30ಕ್ಕೆ ತಲುಪಲಿದೆ. ರೈಲು ನಂಬರ್ 56615 ಮಂಡಗಾಂವ್‌ನಿಂದ 1.50ಕ್ಕೆ ಹೊರಟು, ಮಂಗಳೂರು ಸೆಂಟ್ರಲ್‌ಗೆ ರಾತ್ರಿ 11.05ಕ್ಕೆ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+