ಸ್ವರ್ಗಕ್ಕೆ ಕಿಚ್ಚಿಡುವ ಮಂಗಳೂರು ಜೈಲಲ್ಲಿ ಕೈದಿಗಳಿಂದ ಬಾಡೂಟ ಪಾರ್ಟಿ

ಮಂಗಳೂರು, ಜುಲೈ 19: ಜೈಲಿನೊಳಗೆ ತೆಗೆದ ಈ ಫೋಟೋ ನೋಡಿದರೆ ಎಂಥ ಆನಂದ ಆಗುತ್ತದೆ ಅಂದರೆ, ಅಣ್ಣ-ತಮ್ಮಂದಿರ ರೀತಿ ಒಬ್ಬರ ಬಾಯಿಗೆ ಮತ್ತೊಬ್ಬರು ತುತ್ತು ಇಡುವುದೇನು, ಪಾರ್ಟಿ ಮಾಡುವುದೇನು, ಆ ಫೋಟೋ ಫೇಸ್ ಬುಕ್ ಗೆ ಅಪ್ ಲೋಡ್ ಮಾಡುವುದೇನು?

ಅಬ್ಬ ಅಬ್ಬಾ ಅಬ್ಬಾ, ಕರ್ನಾಟಕದ ಜೈಲುಗಳೆಂದರೆ, ಬಿಡ್ತು-ಬಿಡ್ತು ಜೈಲು ಅನ್ನೋದೇ ಪಾಪ ಬಿಡ್ರೀ. ಮಂಗಳೂರು ಜೈಲಿನಲ್ಲಿ ಪಾರ್ಟಿ ಮಾಡಿ, ಬಾಡೂಟ ಜಡಾಯಿಸಿ, ಆ ದೃಶ್ಯವನ್ನು ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಹಾಕಲಾಗಿದೆ.

Mangaluru Jail has become a heaven for prisoners

ಹೌದು, ಹಣವೊಂದಿದ್ದರೆ ಜೈಲಿನಲ್ಲೂ ಮನೆಯಂತೆ ಇರಬಹುದು ಎಂಬುದು ಸಾಬೀತಾಗಿದೆ. ಮೊನ್ನೆಯಷ್ಟೆ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಶಶಿಕಲಾ ನಟರಾಜನ್ ತಮಗೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು.

ರೌಡಿ ಕಲಿಯಾ ರಫೀಕ್​​ ಕೊಲೆ ಪ್ರಕರಣ ಅರೋಪಿಗಳು ಜೈಲಿನ ಒಳಗೆ ಗುಂಡು-ತುಂಡಿನ ಪಾರ್ಟಿ ನಡೆದಿದೆ. ಇಂಥ ಪಾರ್ಟಿಗಳ ಹಿಂದೆ ಯಾರ ಆಶೀರ್ವಾದ ಇರುತ್ತದೆ ಅನ್ನೋದನ್ನು ಬಿಡಿಸಿ ಹೇಳುವ ಅಗತ್ಯವಿದೆಯಾ?

ಕೊಲೆ ಪ್ರಕರಣವೊಂದರ ಆರೇಳು ಮಂದಿ ವಿಚಾರಣಾಧೀನ ಕೈದಿಗಳು ಹಳೆ ಜೈಲಿನ ಕೊಠಡಿಯೊಳಗೆ ಬಾಗಿಲಿಗೆ ಕರ್ಟನ್ ಹಾಕಿ ಪಾರ್ಟಿ ಮಾಡುತ್ತಿದ್ದರು. ಹೊರಗಿನಿಂದಲೇ ಊಟ ತರಿಸಿಕೊಂಡು ಮಜಾ ಮಾಡುತ್ತಿರುವುದಕ್ಕೆ ಅಲ್ಲಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿರುವ ತಿನಿಸುಗಳು, ಬಾಟಲಿಗಳೇ ಸಾಕ್ಷಿಯಾಗಿವೆ.

Mangaluru Jail has become a heaven for prisoners

ಕಾರಾಗೃಹದಲ್ಲೂ ಇಂಥದ್ದೊಂದು ಜೀವನ ಸಾಗಿಸಬೇಕೆಂದರೆ ಇದಕ್ಕೆ ಜೈಲು ಸಿಬ್ಬಂದಿ ಸಹಕಾರವಿಲ್ಲದೆ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಿದೆ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅಂಥದ್ದೇನೂ ನಡೆದೇ ಇಲ್ಲ ಎನ್ನುತ್ತಾರೆ. ಈ ಹಿಂದೆ ಮಲಬಾರಿ ರಶೀದ್ ಜೈಲಿನಲ್ಲಿದ್ದಾಗಂತೂ ಬಾಡೂಟದ ಪಾರ್ಟಿ ಆಗಾಗ ನಡೆಯುತ್ತಲೇ ಇದ್ದವು. ಸಹಕೈದಿಗಳಿಂದಲೇ ಹಫ್ತಾ ವಸೂಲಿ ಮಾಡಿ ಪಾರ್ಟಿ ಮಾಡಲಾಗುತ್ತಿತ್ತು.

ಕೈದಿಗಳ ಸ್ವರ್ಗವೆಂದೇ ಕರೆಸಿಕೊಂಡಿರುವ ಈ ಜೈಲು ಹಲವು ಆವಾಂತರಗಳಿಗೆ ಸಾಕ್ಷಿಯಾಗಿದ್ದಿದೆ. ಜೈಲಿನಲ್ಲಿ ನಿರಂತರವಾಗಿ ಸರಬರಾಜಾಗುವ ಗಾಂಜಾ, ಆಗಾಗ ಕೈದಿಗಳ ಮಧ್ಯೆ ನಡೆಯುವ ಹೊಡೆದಾಟ, ಬಾಡೂಟದ ಮೋಜು ಮಸ್ತಿ ಎಲ್ಲವೂ ಸುದ್ದಿ ಮಾಡಿದರೂ ಸರಕಾರ ಗಂಭೀರವಾಗಿ ತೆಗೆದುಕೊಳ್ಳುವಂತೆ ಕಾಣುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+