ಪೊಲೀಸ್ ಅಧಿಕಾರಿಗೆ ಸಂಸದ ನಳಿನ್ ಧಮಕಿಯ ವಿಡಿಯೋ ವೈರಲ್

ಮಂಗಳೂರು, ಸೆಪ್ಟೆಂಬರ್ 7: 'ಮಂಗಳೂರು ಚಲೋ' ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಧಮಕಿ ಹಾಕಿದ ವಿಡಿಯೋ ಈಗ ವೈರಲ್ ಆಗಿದೆ. ನಳಿನ್ ಕುಮಾರ್ ಕಟೀಲ್ ಧಮಕಿ ಹಾಕಿದ್ದು ಯಾಕೆ? ಧಮಕಿ ಹಾಕಲು ಕಾರಣವೇನು? ಈ ವಿವರಗಳು ಇಲ್ಲಿವೆ.

In Pics : ಕಾಂಗ್ರೆಸ್ ವಿರುದ್ಧ ಬಿಜೆಪಿಯ 'ಮಂಗಳೂರು ಚಲೋ'

ಮುಂಜಾನೆ 'ಮಂಗಳೂರು ಚಲೋ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜ್ಯೋತಿ ವೃತ್ತದತ್ತ ತೆರಳುತ್ತಿದ್ದಂತೆ ಪೊಲೀಸರು ದಕ್ಷಿಣ ಕನ್ನಡ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂಜಾ ಪೈ ಸೇರಿದಂತೆ ಇತರ ಬಿಜೆಪಿಯ ಮಹಿಳಾ ಕಾರ್ಯಕರ್ತರನ್ನು ವಶಕ್ಕೆ ಪಡೆದು ಹಾಲ್ ಒಂದರಲ್ಲಿ ಕೂಡಿ ಹಾಕಿದ್ದರು .

Mangaluru Chalo: MP Nalin Kumar Kateel’s angry video goes viral

ಇದನ್ನರಿತ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗು ಶೋಭಾ ಕರಂದ್ಲಾಜೆ ಸ್ಥಳಕ್ಕೆ ಧಾವಿಸಿ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಿಡುಗಡೆಗೆ ಒಪ್ಪದ ಕದ್ರಿ ಠಾಣೆಯ ಇನ್ಸ್ ಪೆಕ್ಟರ್ ಮಾರುತಿ ನಾಯ್ಕ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲ್ ಸಿಟ್ಟಿಗೆದ್ದಿದ್ದರು.

ಇನ್ಸ್ ಪೆಕ್ಟರ್ ಮಾರುತಿ ನಾಯ್ಕ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ನಳಿನ್ ರೌದ್ರಾವತಾರ ತಾಳಿದ್ದರು. ಮೇಜಿನ ಮೇಲೆ ಕುಟ್ಟುತ್ತಾ ಧಮಕಿ ಹಾಕುತ್ತಿದ್ದ ನಳಿನ್ ಒಂದು ಹಂತದಲ್ಲಿ ಪೊಲೀಸ್ ಅಧಿಕಾರಿ ಫೋನನ್ನು ಕಿತ್ತುಕೊಳ್ಳಲು ಮುಂದಾಗಿದ್ದೂ ವಿಡಿಯೋದಲ್ಲಿ ದಾಖಲಾಗಿದೆ.

Mangaluru Chalo: MP Nalin Kumar Kateel’s angry video goes viral

ನಳಿನ್ ಕುಮಾರ್ ಹೀಗೆ ರೌದ್ರಾವತಾರ ತಾಳಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಳಿನ್ ರೌದ್ರಾವತಾರ ತಾಳಿದ ನಂತರ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಕುಮಾರ್ ಆದೇಶದ ಮೇರೆಗೆ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂಜಾ ಪೈ ಸೇರಿದಂತೆ ಇತರ ಮಹಿಳಾ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಯಿತು .

ಈ ನಡುವೆ ಅಧಿಕಾರಿಯೊಬ್ಬರನ್ನು ಹಿಗ್ಗಾಮುಗ್ಗಾ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಸಂಸದ ನಳಿನ್ ಕುಮಾರ್ ಕಟೀಲ್ ವರ್ತನೆಯ ಬಗ್ಗೆಯೂ ಸಾರ್ವಜನಿಕರಿಂದ ಟೀಕೆಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+