ವಿಶ್ವ ಸೂಪರ್ ಮಾಡೆಲ್ ಟೀನ್ ಸ್ಪರ್ಧೆಗೆ ಕರಾವಳಿ ಬೆಡಗಿ ಜೊಸಿಟಾ
ಮಂಗಳೂರು, ಮೇ 04 : ವಿಶ್ವ ಸೂಪರ್ ಮಾಡೆಲ್ ಟೀನ್ ಸ್ಪರ್ಧೆಗೆ ಕರಾವಳಿಯ ಸುಂದರಿ ಜೊಸಿಟಾ ಅನೋಲಾ ರಾಡ್ರಿಗಸ್ ಅವರು ದಕ್ಷಿಣ ಏಷ್ಯಾವನ್ನು ಪ್ರತಿನಿಧಿಸಲಿದ್ದಾರೆ.
ಈ ಸ್ಪರ್ಧೆ ಇದೇ ಮೇ 20 ಮತ್ತು 28 ರಂದು ಚೀನಾದ ಮಕಾವುನಲ್ಲಿ ನಡೆಯಲಿಯಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆಡಿಶನ್ ನಲ್ಲಿ ಭಾಗವಹಿಸಿದ್ದ 150 ಸ್ಪರ್ಧಿಯ ಪೈಕಿ ಮಂಗಳೂರಿನ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿಯಾದ ಜೊಸಿಟಾ ಅನೋಲಾ ರಾಡ್ರಿಗಸ್ ಅವರನ್ನು ವರ್ಲ್ಡ್ ಸೂಪರ್ ಮಾಡೆಲ್ ಟೀನ್ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.[ದ. ಕೊರಿಯಾದ ಸೌಂದರ್ಯ ಸ್ಪರ್ಧೆಗೆ ಕರಾವಳಿ ಬೆಡಗಿ ನಿಮಿಕಾ]

ಈ ಸ್ಪರ್ಧೆಯ ವಿಜೇತರಿಗೆ 'ಟ್ರಂಪ್ ಮಾಡೆಲ್ ಏಜೆನ್ಸಿ' ಜತೆ ಮಾಡೆಲಿಂಗ್ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶ ದೊರೆಯಲಿದ್ದು, ಈ ಏಜೆನ್ಸಿಯನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುಟುಂಬದವರು ನಡೆಸುತ್ತಿದ್ದಾರೆ.

ಜೊಸಿಟಾ ರೊಡ್ರಿಗಸ್ ಕೊಡಿಯಾಲ್ ಬೈಲ್ ನ ನಿವಾಸಿ ಅನಿತಾ ಲೋಬೋ ಅವರ ಪುತ್ರಿ ಜೊಸಿಟಾ, ಶಾರದಾ ಪಿಯು ಕಾಲೇಜ್ ನಲ್ಲಿ ಮೊದಲ ವರ್ಷ ಪಿಯುಸಿ ಪೂರ್ಣಗೊಳಿಸಿದ್ದು ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಕಾಲಿಡಲಿದ್ದಾರೆ.

ಜೊಸಿಟಾ ಅವರು ಅನುಪಮ ಸುವರ್ಣ ನೇತೃತ್ವದಲ್ಲಿ ಫ್ಯಾಶನ್ ಎಬಿಸಿಡಿ ಎಂಬಲ್ಲಿ ಮಾಡಲಿಂಗ್ ತರಬೇತಿ ಪಡೆದಿದ್ದಾರೆ. ಇದಲ್ಲದೆ ಜೊಸಿಟಾ ಸಿಜ್ಲಿಂಗ್ ಗೈಸ್ ಡ್ಯಾನ್ಸ್ ಸ್ಟುಡಿಯೊದ ಶುಭಕಿರಣ್ ಅವರ ಮಾರ್ಗದರ್ಶನದಡಿ ವೃತ್ತಿಪರ ನೃತ್ಯ ತರಬೇತಿ ಕೂಡಾ ಪಡೆದಿದ್ದಾರೆ.

ಮೇ 20 ಮತ್ತು 28 ರಂದು ಚೀನಾದ ಮಕಾವುನಲ್ಲಿ ನಡೆಯಲಿರುವ ವರ್ಲ್ಡ್ ಸೂಪರ್ ಮಾಡೆಲ್ ಟೀನ್ ಸ್ಪರ್ಧೆಯಲ್ಲಿ ಸ್ಪರ್ಧಿಸಲಿರುವ ಜೊಸಿಟಾ ಅನೋಲಾ ರಾಡ್ರಿಗಸ್ ಜಯಶಾಲಿಯಾಗಿ ಬರಲಿ ಎಂದು ಶುಭ ಹಾರಿಸೋಣ. ಆಲ್ ದಿ ಬೆಸ್ಟ್ ಜೊಸಿಟಾ..
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications