• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತ್ ಸಾವಿನಲ್ಲಿ ವಿಕೃತಿ: ಯಾಕೆ ತಪ್ಪು ಒಪ್ಪಿಕೊಳ್ಳಬೇಕು ಎಂದ ಮಂಗಳೂರು ಮುಸ್ಲಿಂ ಪೇಜ್

|

ಮಂಗಳೂರು, ನ 13: ಕೇಂದ್ರ ಸಚಿವ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರ ಬಗ್ಗೆ ಕೀಳು ಮಟ್ಟದ ಪೋಸ್ಟ್ ಹಾಕಿದ್ದ, ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್, ತನ್ನ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿದೆ.

ಯಾಕಾಗಿ ತಪ್ಪು ಒಪ್ಪಿಕೊಳ್ಲಬೇಕು ಎನ್ನುವ ಅಡಿಬರಹದೊಂದಿಗೆ ಮತ್ತೊಂದು ಪೋಸ್ಟ್ ಹಾಕಿರುವ ಈ ಪೇಜ್ ನಲ್ಲಿ, ' ಸಾಯಿಸಿ ಸಂತೋಷ ಪಡುವ ಸಂಘಿಗಳಿಗಿಂತ ಕೋಮುವಾದಿ ಸಂಘಿಗಳ ಸಾವಲ್ಲಿ ಅವರ ಕರಾಳ ಮುಖ ಅರ್ಥ ಆಗುವಂತೆ ಬರೆಯುವ ಮಂಗಳೂರು ಮುಸ್ಲಿಂ ಪೇಜ್ ಸಾವಿರ ಪಟ್ಟು ಮೇಲು' ಎಂದು ಹೇಳಿಕೊಂಡಿದೆ.

ಅನಂತ್ ಕುಮಾರ್ ಸಾವು ಸಂಭ್ರಮಿಸಿದ 'ಮಂಗಳೂರು ಮುಸ್ಲಿಮ್ಸ್: ತಿರುಗೇಟು ಕೊಟ್ಟ ನೆಟ್ಟಿಗರು

'ಜಾತಿ ರಾಜಕಾರಣ ಕುತಂತ್ರಿ ಬ್ರಾಹ್ಮಣ ಅನಂತ್ ಕುಮಾರ್, ಮೇಲೆ ಹೋಗಿಯೂ ವಿಷಬೀಜ ಬಿತ್ತಬೇಡ, ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿಬರಬೇಡ' ಎಂದು ಸೋಮವಾರ (ನ 12), ಮಂಗಳೂರು ಮುಸ್ಲಿಂ ಅಕೌಂಟ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಹಾಕಿಕೊಂಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮಂಗಳೂರು ದಕ್ಷಿಣದ ಪಾಂಡೇಶ್ವರ ಠಾಣೆ ಪೊಲೀಸರು 'ಮಂಗಳೂರು ಮುಸ್ಲಿಮ್ಸ್‌' ಫೇಸ್‌ಬುಕ್ ಪೇಜ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಅನಂತ್‌ ಕುಮಾರ್ ಬಗ್ಗೆ ಕೀಳು ಪೋಸ್ಟ್: ಫೇಸ್‌ಬುಕ್‌ ಪೇಜ್‌ ಮೇಲೆ ದೂರು

ಇದಕ್ಕೆ ಪ್ರತಿಕ್ರಿಯಿಸಿರುವ ಮಂಗಳೂರು ಮುಸ್ಲಿಂ ಪೇಜ್ ಅಡ್ಮಿನ್, ' ಅಧಿಕಾರಕ್ಕಾಗಿ ಕಾನೂನನ್ನು ಮೀರಿ ಬಾಬರಿ ಮಸೀದಿ ಧ್ವಂಸ ಮಾಡಿದ ಸಂಘಿಗಳ ಸಾವಿಗೆ #ಕ್ಷಮೆ_ಕೇಳುವ_ಪ್ರಶ್ನೆಯೇ_ಇಲ್ಲ. ರಥಯಾತ್ರೆ ಮಾಡಿ ಬಾಬರಿ ಮಸೀದಿ ಧ್ವಂಸ ಮಾಡಿದ ಕ್ರಿಮಿನಲ್ ಗಳಿಗೆ ಶಿಕ್ಷೆ ಆಗದೆ ಆ ವಿಷಯಕ್ಕೆ ಸಂಬಂಧಿಸಿ ಮಡಿದ ಅಮಾಯಕರ ಆತ್ಮಕ್ಕೆ ಶಾಂತಿ ಸಿಗದೆ ಇರುವಷ್ಟು ದಿನ ಸ್ವಚ್ಛಂದವಾಗಿ ತಿರುಗಿ ಕಾಯಿಲೆ ಬಂದು ಸಾಯುವ ಸಂಘಿಗಳ ಆತ್ಮಕ್ಕೆ ಶಾಂತಿ ಬಯಸುದು ತಪ್ಪು. ಅವರಿಗೆ ದೇವರ ಆಸ್ಥಾನದಲ್ಲಿ ತಕ್ಕ ಶಿಕ್ಷೆ ಆಗಲಿ' ಎಂದು ಬರೆದುಕೊಂಡಿದ್ದಾರೆ. ಈ ಫೇಸ್ ಬುಕ್ ಪೇಜಿನ ಆವಾಂತರ ಇಂದು, ನಿನ್ನೆಯದಲ್ಲ.. ಮುಂದೆ ಓದಿ

{document1}

ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್

ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್

ಸದಾ ವಿವಾದಿತ ಪೋಸ್ಟ್ ಹಾಕುವ ಮೂಲಕ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಸದಾ ಸುದ್ದಿಯಲ್ಲಿರುತ್ತದೆ. ಈ ಪೇಜಿಗೆ ಹೆಸರು ಮಾತ್ರ 'ಮಂಗಳೂರು ಮುಸ್ಲಿಂ' ಎಂದು. ಆದರೆ, ಇದು ಕಾರ್ಯನಿರ್ವಹಿಸುತ್ತಿರುವುದು ಕೊಲ್ಲಿ ರಾಷ್ಟ್ರದಿಂದ ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆ ಕೂಡಾ ಹಲವಾರು ಈ ರೀತಿಯ ಪೋಸ್ಟುಗಳನ್ನು ಇಲ್ಲಿ ಹಾಕಲಾಗಿತ್ತು. ಪೊಲೀಸರು ದೂರು ದಾಖಲಿಸಿಕೊಂಡಿದ್ದರೂ, ಮುಂದೇನಾಯಿತು ಎನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ.

ಸದಾ ಹಿಂದೂ ಮತ್ತು ಬಿಜೆಪಿ ವಿರೋಧಿ ಪೋಸ್ಟ್

ಸದಾ ಹಿಂದೂ ಮತ್ತು ಬಿಜೆಪಿ ವಿರೋಧಿ ಪೋಸ್ಟ್

ಸದಾ ಹಿಂದೂ ಮತ್ತು ಬಿಜೆಪಿ ವಿರೋಧಿ ಪೋಸ್ಟ್ ಅನ್ನು ಹಾಕುವ ಈ ಪೇಜಿನಲ್ಲಿ, ಸಾಕಷ್ಟು ವಿರೋಧವೂ ವ್ಯಕ್ತವಾಗುತ್ತದೆ. "ಮಂಗಳೂರು ಮುಸ್ಲಿಂ" ಪೇಜ್ ಸದಾ ಸಂಘಪರಿವಾರದ ನೆರವಿಗೆ ಬರುತ್ತದೆ. ಯಾವುದಾದರೂ ಗಂಭೀರ ಸಂದರ್ಭದಲ್ಲಿ ಪ್ರಚೋದಕ, ಅಸಭ್ಯ ಪೋಸ್ಟ್ ಹಾಕಿ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ನೆರವಾಗುತ್ತದೆ. ಕೆಲವು ಅತಿರೇಕಿ ಮುಸ್ಲಿಂ ಪಡ್ಡೆಗಳು ಈ ಪೇಜ್ ಬೆಂಬಲಿಸುವ ಅರಿವುಗೇಡಿ ಕೆಲಸ ಮಾಡುತ್ತವೆ. ಈ ಎಕೌಂಟ್ ಕುರಿತು ನಾನೇ ಹಲವು ಬಾರಿ ಮಾಧ್ಯಮದ, ಪೊಲೀಸ್ ಇಲಾಖೆಯ ಗಮನ ಸೆಳೆದಿದ್ದೇನೆ. ಆದರೆ ಪರಿಣಾಮಶೂನ್ಯ. ನಮ್ಮಂತವರ ಎಕೌಂಟ್ ಗಳ ಮೇಲೆ ಹಗಲು‌ರಾತ್ರಿ ರಿಪೋರ್ಟ್ ಮಾಡುವ ಬಿಜೆಪಿಯ ಐಟಿ ಸೆಲ್ ತಂಡ ಇಂತಹ ಎಕೌಂಟುಗಳ ತಂಟೆಗೆ ಹೋಗುವುದಿಲ್ಲ. ಏನಿದರ ರಹಸ್ಯ?' ಎನ್ನುವ ಕಾಮೆಂಟುಗಳೂ ಬರುತ್ತವೆ.

ಸಿದ್ಧರಾಮಯ್ಯನವರ ಪುತ್ರ

ಸಿದ್ಧರಾಮಯ್ಯನವರ ಪುತ್ರ

ಗೌರಿ ಲಂಕೇಶ್, ಅನಂತಮೂತಿ೯, ಸಿದ್ಧರಾಮಯ್ಯನವರ ಪುತ್ರ ಸೇರಿದಂತೆ ಹಲವು ಬಿಜೆಪಿಯೇತರರು ಸತ್ತಾಗ ಇಲ್ಲಿ ಹಲವು ಫೇಸ್ ಬುಕ್ ಪೇಜುಗಳು ಅಕೌಂಟುಗಳು ನಿನ್ನೆ ತಾನೇ ಜೈಲು ಪಾಲಾದ ರೆಡ್ಡಿಯಂತ ರಾಜಕಾರಣಿಗಳು ಸಂಭ್ರಮಿಸಿದ್ದರು. ಇಲ್ಲಿನ ಮುಖ್ಯಧಾರೆಯ ಯಾವ ಮಾಧ್ಯಮಗಳೂ ಸಹ ಅವನ್ನು ಸುದ್ದಿ ಮಾಡಿರಲಿಲ್ಲ ಎಂದು ಮಂಗಳೂರು ಮುಸ್ಲಿಂ ಪೇಜ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಏನು ಗೊತ್ತಿಲ್ಲದ ಅಮಾಯಕರಿಗೆ ಧರ್ಮದ ಅಮಲು ಬಿತ್ತುವುದು

ಏನು ಗೊತ್ತಿಲ್ಲದ ಅಮಾಯಕರಿಗೆ ಧರ್ಮದ ಅಮಲು ಬಿತ್ತುವುದು

'ಏನು ಗೊತ್ತಿಲ್ಲದ ಅಮಾಯಕರಿಗೆ ಧರ್ಮದ ಅಮಲು ಬಿತ್ತಿ ಮುಸ್ಲಿಮರನ್ನು ರಾಜಕೀಯ ಕಾರಣಕ್ಕೆ ರಾಮನನ್ನು ಎದುರು ಹಾಕಿ ಕೊಲ್ಲಲು ಹೊರಟಿದ್ದ ನಾಯಿಗಳಾದ ಅಡ್ವಾಣಿ ಸೇರಿ ಆತನ ಚಮಚ ಇಂದು ಸತ್ತ ಅನಂತ್ ಕುಮಾರ್ ಸಾವಿನಲ್ಲಿ ಸಂಭ್ರಮಿಸಬಾರದು ನಿಜ.. ಆದರೆ ಬಾಬರೀ ಮಸೀದಿ ಧ್ವಂಸಕ್ಕೆ ಕಾರಣವಾದ ಹಾಗು ಸಾವಿರಾರು ಅಮಾಯಕ ಮನುಷ್ಯರ ಹತ್ಯೆಗೆ ಮುಹೂರ್ಥ ಕಲ್ಪಿಸಿದ ರಥಯಾತ್ರೆಯ ಸೂತ್ರದಾರರಲ್ಲಿ ಒಬ್ಬನಾದ ಅನಂತಕುಮಾರ್ ನನ್ನ ಮುಸ್ಲಿಮರು ಸೇರಿ ಮನುಷತ್ವ ಇರುವ ಜನರು ಕ್ಷಮಿಸಲು ಹೇಗೆ ಸಾಧ್ಯ' ತಮ್ಮ ಪೇಜಿನಲ್ಲಿ ತೀಕ್ಷ್ಣವಾದ ಪೋಸ್ಟ್

 ಭೂರಿ ಭೋಜನ ರಾಗಿ ಮುದ್ದೆ ಸವಿಯಿರಿ

ಭೂರಿ ಭೋಜನ ರಾಗಿ ಮುದ್ದೆ ಸವಿಯಿರಿ

ಜನಾರ್ದನ ರೆಡ್ಡಿ ಬಂಧನದ ಬಗ್ಗೆ , 'ಪಾಪ . ಲೂಟಿ ಮಾಡಿ ಕರೆದಿದ್ದಕ್ಕೂ ಅವರು ಬಂದಿದ್ದಕ್ಕೂ. ಭೂರಿ ಭೋಜನ ರಾಗಿ ಮುದ್ದೆ ಸವಿಯಿರಿ' ಎಂದು ಮಂಗಳೂರು ಮುಸ್ಲಿಂ ಪೇಜ್ ಪೋಸ್ಟ್ ಮಾಡಿದೆ. ಇದಕ್ಕೆ ಜನಾರ್ದನ ರೆಡ್ಡಿ ಕುಟುಂಬ ಸಮೇತ ತಮ್ಮ ಮಗಳ ಮದುವೆಗೆ ಆಮಂತ್ರಣ ನೀಡುವ ಮತ್ತು ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ಅವರ ಫೋಟೋ ಬಳಸಿಕೊಂಡಿತ್ತು.

English summary
Mangalore Muslim Facebook account admin, justified their stand on Union Minister Ananth Kumar death releated post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X