ಮಂಗಳೂರಿನಲ್ಲಿ ನಿಷೇಧಿತ ಮತ್ತುಕಾರಕ ಮಾತ್ರೆ ಮಾರಾಟ, ಬಂಧನ

ಮಂಗಳೂರು, ಡಿಸೆಂಬರ್ 26: ನಿಷೇದಿತ ಮಾದಕ ವಸ್ತಗಳಾದ ಎಲ್.ಎಸ್.ಡಿ, ಎಂ.ಡಿ.ಎಂ.ಎ ಮತ್ತು ಎಂ.ಡಿ.ಎಂ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗೆ ಈ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ 2 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಅವರಿಂದ ಅಪಾರ ಪ್ರಮಾಣದಲ್ಲಿ ಎಲ್ ಎಸ್ ಡಿ ಗಳನ್ನು ವಶಪಡಿಸಿಕೊಂಡಿದ್ದಾರೆ.

Mangalore Anti-rowdy Squad busts Drug Racket, 2 Peddlers Arrested

ಮಂಗಳೂರು ದಕ್ಷಿಣ ಉಪವಿಬಾಗದ ರೌಡಿ ನಿಗ್ರಹ ದಳದ ಪೊಲೀಸರಿಗೆ ನಗರದಲ್ಲಿ ನಿಷೇದಿತ ಮಾದಕ ವಸ್ತಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ವಿವಿದೆಡೆ ದಾಳಿನಡೆಸಿದ ರೌಡಿ ನಿಗ್ರಹ ದಳದ ಪೊಲೀಸರು ಹಂಪನಕಟ್ಟೆ ಯ ಬ್ರೈಟನ್ ಮ್ಯಾನರ್ ಅಪಾರ್ಟ್‌ಮೆಂಟ್ ನಿವಾಸಿ ಕಾರ್ಲ್.ಡಿ.ಕುನ್ಹ (29), ಕುಲಶೇಖರ ಸಿಲ್ವರ್ ಗೇಟ್ ನಿವಾಸಿ ಅನೂಪ್.ಡಿ.ಅಲ್ಮೇಡಾ (26) ಎಂಬವರನ್ನು ಬಂಧಿಸಿದ್ದಾರೆ.

Mangalore Anti-rowdy Squad busts Drug Racket, 2 Peddlers Arrested

ಬಂಧಿತರಿಂದ 93 ಎಂ.ಎಲ್.ಡಿ ಪಿಲ್ಸ್ (ಮಾದಕ ಮಾತ್ರೆ) , 1 ಹುಂಡೈ ಇಯಾನ್ ಕಾರು, 3 ಮೊಬೈಲ್ ಪೋನ್ ಗಳು ಸೇರಿದಂತೆ 30,850 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ 2,36,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಹಿಂದೆ ನಿಷೇಧಿತ ಮಾದಕ ವಸ್ತಗಳಾದ ಎಲ್.ಎಸ್.ಡಿ , ಎಂ.ಡಿ.ಎಂ.ಎ ಮತ್ತು ಎಂ.ಡಿ.ಎಂ ಟ್ಯಾಬ್ಲೆಟ್ ಗಳ ಮಾರಾಟ ಜಾಲಕ್ಕೆ ಸಂಬಂಧೀಸಿದಂತೆ 3 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+