ಮೂಡುಬಿದಿರೆ: ಉದ್ಯೋಗ ಮೇಳ ಜೂ. 14, 15ರಂದು
ಮಂಗಳೂರು, ಜೂ.11: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ 5ನೇ ವರ್ಷದ 'ಆಳ್ವಾಸ್ ಪ್ರಗತಿ-2014' ಉದ್ಯೋಗ ಮೇಳ ಜೂನ್ 14, 15ರಂದು ವಿದ್ಯಾಗಿರಿಯ ಆಳ್ವಾಸ್ ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಸುಮಾರು 200ಕ್ಕೂ ಹೆಚ್ಚಿನ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ಪ್ರತಿಷ್ಠಿತ ಕಂಪೆನಿಗಳಾದ ಟೈಟಾನ್, ವೀಡಿಯೋಕಾನ್, ಓರ್ಯಾಕಲ್, ಐಬಿಎಂ, ಯುಎಇ ಎಕ್ಸ್‌ಚೇಂಜ್, ಎನ್‌ಎಂಸಿ, ನಾರಾಯಣ ಹೃದಯಾಲಯ, ಬಯೋಕಾನ್, ಆದಿತ್ಯ ಬಿರ್ಲಾ ಗ್ರೂಪ್, ಟೆಕ್‌ಮಹೀಂದ್ರ, ಗೋದ್ರೆಜ್, ಐಟಿಸಿ, ಕಿರ್ಲೋಸ್ಕರ್ ಇಲೆಕ್ಟ್ರಿಕ್ಸ್, ಎಲ್ ಆ್ಯಂಡ್ ಟಿ, ತಾಜ್ ಗ್ರೂಪ್, ಐಸಿಐಸಿಐ ಬ್ಯಾಂಕ್, ವಿಪ್ರೋ, ಟಿಸಿಎಸ್, ಆಲ್‌ಕಾರ್ಗೋ, ಎಕ್ಸ್‌ಚೇಂಜಿಂಗ್, ಏಜೀಸ್ ಸೇರಿದಂತೆ ಮತ್ತಿತರರ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.

ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಪಾಸ್‌ಪೋರ್ಟ್ ಸೈಜ್‌ನ ಭಾವಚಿತ್ರ ಮತ್ತು ಸ್ವವಿವರಗಳಿರುವ 5ರಿಂದ 10 ಪ್ರತಿಗಳು, ಎಲ್ಲಾ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿ, ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದ್ದರೆ ಅದರ ಸಂಖ್ಯೆಯೊಂದಿಗೆ ಜೂ.14, 15ರಂದು ಬೆಳಗ್ಗೆ 8.30ರೊಳಗೆ ವಿದ್ಯಾಗಿರಿಯ ಆಳ್ವಾಸ್ ಪದವಿ ಕ್ಯಾಂಪಸ್‌ನಲ್ಲಿ ಹಾಜರಿರಬೇಕು.
ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು:www.alvaspragati.com
ಮೊಬೈಲ್ ಸಂಖ್ಯೆ: 9611686148, 9844667337, 9902625932, 9008907716












Click it and Unblock the Notifications