Get Updates
Get notified of breaking news, exclusive insights, and must-see stories!

ಪುತ್ತೂರು; ಸರ್ಕಾರಿ ಬಸ್‌ನಲ್ಲಿ ಕೋಳಿಗೂ 50 ರೂ. ಟಿಕೆಟ್!

ಮಂಗಳೂರು, ಫೆಬ್ರವರಿ 11: ಅಗೇಲು ಸೇವೆ ಸಲ್ಲಿಸಲು ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು 50 ರೂ. ನೀಡಿ ಕೋಳಿಗೂ ಟಿಕೆಟ್ ಪಡೆದುಕೊಂಡಿದ್ದಾರೆ. ಪ್ರಾಣಿಗಳಿಗಳ ಪ್ರಯಾಣಕ್ಕೆ ಹಣ ನೀಡಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಚೀಲದಲ್ಲಿ ಕೋಳಿ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಕಂಡಕ್ಟರ್ 50 ರೂ. ಪಡೆದು ಟಕೆಟ್ ನೀಡಿದ್ದಾರೆ. ಕೆಎಸ್ಆರ್‌ಟಿಸಿಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗದಲ್ಲಿ ಈ ಘಟನೆ ನಡೆದಿದೆ.

ಬುಧವಾರ ಪುತ್ತೂರಿನಲ್ಲಿ ಸಾರಿಗೆ ಅದಾಲತ್ ನಡೆಯಿತು. ಆಗ ಪುತ್ತೂರು ಶಾಸಕ ಸಂಜೀವ ಮಠಂದೂರು ಈ ಕುರಿತು ವಿಷಯವನ್ನು ಪ್ರಸ್ತಾಪಿಸಿ ಎಲ್ಲರಿಗೂ ಮಾಹಿತಿ ನೀಡಿದರು.

KSRTC bus

ಅದಾಲತ್‌ನಲ್ಲಿ ಪುತ್ತೂರು ವಿಭಾಗೀಯ ಸಂಚಾಲನಾಧಿಕಾರಿ ಮುರಳೀಧರ್ ಸಹ ಪಾಲ್ಗೊಂಡಿದ್ದರು. "ಸರ್ಕಾರದ ಸುತ್ತೋಲೆಯಂತೆ ಬಸ್‌ನಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಪ್ರಾಣಿ, ಪಕ್ಷಿ ಒಯ್ಯುವಂತಿಲ್ಲ" ಎಂದು ಹೇಳಿದರು.

"ಕೋಳಿ ಆದರೂ ಸರಿಯೇ ಒಂದು ಕೋಳಿಗೆ ಒಬ್ಬ ಪ್ರಯಾಣಿಕನಿಗೆ ಇರುವಷ್ಟು ಟಿಕೆಟ್ ದರ ನೀಡಬೇಕು. 50 ರೂ. ಟಿಕೆಟ್ ನೀಡಿದ್ದಾರೆ ಎಂದರೆ 3 ಕೋಳಿ ಇರಬೇಕು. ಸರ್ಕಾರದ ಆದೇಶವೇ ಹಾಗಿದೆ" ಎಂದು ಸ್ಪಷ್ಟಪಡಿಸಿದರು.

"ಶಾಸಕರ ಪತ್ರದ ಮೂಲಕ ಕೋಳಿ ವಿಚಾರದಲ್ಲಿ ವಿನಾಯಿತಿ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಬಹುದು. ನಾವು ಸುತ್ತೋಲೆಯನ್ನು ಪಾಲನೆ ಮಾಡುತ್ತಿದ್ದೇವೆ" ಎಂದು ಮುರಳೀಧರ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+