ಫಾರಿನ್ ಹೆಂಡ್ತಿ ಆಸೆಗೆ 11ಲಕ್ಷ ರೂ. ಕಳೆದು ಕೊಂಡ ಮಂಗಳೂರು ಯುವಕ

ಮಂಗಳೂರು, ಅಕ್ಟೋಬರ್ 17: ಮದುವೆಯಾಗುವುದಾಗಿ ನಂಬಿಸಿ ಯುವಕನೋರ್ವನಿಗೆ ವಿದೇಶಿ ಯುವತಿಯೊಬ್ಬಳು ಪಂಗನಾಮ ಹಾಕಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ವಿವರ ಸಲ್ಲಿಸಿದ ಮಂಗಳೂರು ಹೊರವಲಯದ ಮೂಲ್ಕಿಯ ಯುವಕನಿಗೆ ಇಂಗ್ಲೆಂಡ್ ನ ಯುವತಿಯೊಬ್ಬಳು ವಿವಾಹವಾಗುವುದಾಗಿ ನಂಬಿಸಿದ್ದಳು . ವಿದೇಶಿ ಯುವತಿಯ ಜಾಲದಲ್ಲಿ ಬಿದ್ದ ಯುವಕ ಈಗ ಸರಿ ಸುಮಾರು 11.39 ಲಕ್ಷ ರೂಪಾಯಿ ಕಳೆದು ಕೊಂಡಿದ್ದಾನೆ.

Man cheated by a foreign girl in the name of Marriage

2017 ರ ಜೂನಿನಲ್ಲಿ ಮೂಲ್ಕಿಯ ಯುವಕ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ತನ್ನ ವಿವರ ಸಲ್ಲಿಸಿದ್ದ . ಈ ಹಿಂದೆ ಸಿಂಗಾಪುರದಲ್ಲಿ ಉದ್ಯೋಗದಲ್ಲಿದ್ದ ಯುವಕನಿಗೆ ಈಗಾಗಲೇ ಒಂದು ಮದುವೆಯಾಗಿದೆ . ಆದರೆ ಕೆಲವು ಕಾರಣಾಂತರಗಳಿಂದ ಕೆಲವು ಸಮಯದ ಹಿಂದೆ ಹೆಂಡತಿಗೆ ವಿಚ್ಛೇದನ ನೀಡಿದ್ದ. ಈಗ ಎರಡನೇ ಮದುವೆಗೆ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ವಿವರ ನೀಡಿದ್ದ.

ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿರುವ ಯುವಕನ ವಿವರಕ್ಕೆ ಇಂಗ್ಲೆಂಡ್ ನ ಸ್ಟೆಲ್ಲಾ ಮಾರೀಸ್ ಎಂಬ ಯುವತಿ ಪ್ರತಿಕ್ರಿಯಿಸಿದ್ದಳು. ಮೂಲ್ಕಿಯ ಯುವಕರನ್ನು ಸ್ಟೆಲ್ಲಾ ಮದುವೆಯಾಗುವ ಆಸಕ್ತಿ ತೋರಿದ್ದಳು. ಈ ಹಿನ್ನೆಲೆಯಲ್ಲಿ ಮೂಲ್ಕಿಯ ಯುವಕನ ಮೊಬೈಲ್ ಗೆ ವಾಟ್ಸಪ್ ಮೂಲಕ ಸಂದೇಶ ಕಳಿಸಿದ ಇಂಗ್ಲೆಂಡ್ ಸ್ಟೆಲ್ಲಾ, ಇಂಗ್ಲೆಂಡಿಗೆ ಬರುವಂತೆ ಯುವಕನನ್ನು ಆಹ್ವಾನಿಸಿದ್ದಳು.

ಭಾರತದಲ್ಲಿರುವ ಮೈಕಲ್ ಅಂಟೋನಿ ಎಂಬುವರ ಸಂಪರ್ಕವನ್ನು ಸ್ಟೆಲ್ಲಾ ನೀಡಿದ್ದಳು. ಯುವಕ ಆತನನ್ನು ಸಂಪರ್ಕಿಸಿದಾಗ ವೀಸಾ ವೆಚ್ಚ 26,560 ರೂಪಾಯಿ ಕಳಿಸುವಂತೆ ಆತ ಸೂಚನೆ ನೀಡಿದ್ದ. ಅದರಂತೆ ಮಂಗಳೂರು ಹೊರವಲಯದ ಕಿನ್ನಿಗೋಳಿಯ ಬ್ಯಾಂಕ್ ವೊಂದರ ತನ್ನ ಖಾತೆಯಿಂದ ಯುವಕ ನೆಫ್ಟ್ ಮೂಲಕ ಹಣ ಕಳುಹಿಸಿದ್ದ.

ಆ ಬಳಿಕ ಮೈಕಲ್ ಆ್ಯಂಟನಿ ಮತ್ತು ಜೇಮ್ಸ್ ಬೆವನ್ ಇ-ಮೇಲ್ ಮುಖೇನ ಭಯೋತ್ಪಾದನೆ ಚಟುವಟಿಕೆಗೆ ಸಂಬಂಧವಿಲ್ಲ ಎಂಬ ಭದ್ರತಾ ಪ್ರಮಾಣಪತ್ರಕ್ಕೆ 83,000 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಅದಕ್ಕೂ ಸಮ್ಮತಿಸಿದ್ದ ಯುವಕ ಹಣ ರವಾನಿಸಿದ್ದಾನೆ.

ಇದೇ ರೀತಿ ಸ್ಟೆಲ್ಲಾ ಮಾರೀಸ್, ಮೈಕೆಲ್ ಆ್ಯಂಟನಿ ಮತ್ತು ಜೇಮ್ಸ್ ಬೆವೇನ್ ಮದುವೆ, ಕೆಲಸ, ವೀಸಾ ನೆಪವೊಡ್ಡಿ ಸುಮಾರು 11.39 ರೂಪಾಯಿ ವಂಚಿಸಿದ್ದಾರೆ. ವಂಚನೆಗೊಳಗಾದ ವಿಚಾರ ಗೊತ್ತಾಗುತ್ತಿದ್ದಂತೆ ಯುವಕ ಮಂಗಳೂರಿನ ಸೈಬರ್ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾನೆ. ದೂರು ಆಧರಿಸಿ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+