ಹಳೇ ವಿದ್ಯಾರ್ಥಿಗಳಿಗೆ ಬೆಳ್ಳಿ ಉಂಗುರ ನೀಡಿದ ಎನ್‍ಐಟಿಕೆ ಸುರತ್ಕಲ್‍!

ಮಂಗಳೂರು : ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಮರಳುವಾಗ ತಾವು ಕಲಿತ ಶಾಲೆಗೆ ಏನಾದರೂ ಉಡುಗೊರೆ ನೀಡುತ್ತಾರೆ. ಆದರೆ ಮಂಗಳೂರಿನ ಎನ್‍ಐಟಿಕೆ ಸುರತ್ಕಲ್‍ನಲ್ಲಿ ಕಲಿತು ಹೊರತೆರಳುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯೇ ಬೆಳ್ಳಿ ಉಂಗುರ ಉಡುಗೊರೆ ನೀಡುತ್ತಿದೆ.

ಶಿಕ್ಷಣ ಸಂಸ್ಥೆಯ ಮೊಹರು ಇರುವ ಬೆಳ್ಳಿ ಉಂಗುರ ಧರಿಸುವ ಅವರ ಮನಸ್ಸು ಸದಾ ಕಾಲೇಜಿನ್ನು ಸ್ಮರಿಸುತ್ತಲೇ ಇರುತ್ತದೆ ಅನ್ನುವ ಯೋಚನೆ ಆಡಳಿತ ಮಂಡಳಿಯದ್ದು.

Magaluru NITK College decides to present silver ring to its past students

ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜ್ (ಕೆಆರ್‍ಇಸಿ) ಇದ್ದ ಪ್ರಾರಂಭದ ದಿನಗಳಲ್ಲಿಯೇ ಇಂತಹದ್ದೊಂದು ಸಂಪ್ರದಾಯ ಹುಟ್ಟುಹಾಕಲಾಗಿತ್ತು. ಅಂದು ಕೆಆರ್‍ಇಸಿಯ ಪ್ರಥಮ ಪ್ರಾಂಶುಪಾಲರಾಗಿದ್ದ ಅಪ್ಪಾ ಸಾಹೇಬ್ ಅಡ್ಕ ಅವರು ಹುಟ್ಟುಹಾಕಿದ್ದ ಈ ಸಂಪ್ರದಾಯ ಈಗಲೂ ಮುಂದುವರಿದುಕೊಂಡು ಬಂದಿದೆ ಅಂತಾರೆ ಪ್ರಸ್ತುತ ಜೈಪುರಿನ ಮಾಲವೀಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕರಾಗಿರುವ ಉದಯಕುಮಾರ್ ಆರ್ ಯರಗಟ್ಟಿ.

ಅಡ್ಕ ಅವರು ವಿದೇಶದ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ಲ್ಯಾಟಿನಂ ಉಂಗುರಗಳನ್ನು ಕಾಲೇಜಿನ ಲೋಗೋದೊಂದಿಗೆ ನೀಡುವುದನ್ನು ನೋಡಿದ್ದರು. ಅವರು ಮರಳಿ ಬಂದ ಬಳಿಕ 1960ರಿಂದ ಎನ್‍ಐಟಿಕೆಯನಲ್ಲೂ ಪ್ರಾರಂಭಿಸಿದರು ಎನ್ನತ್ತಾರೆ ಉದಯಕುಮಾರ್.

ಒಮ್ಮೆ ಕ್ಯಾಂಪಸ್ ಬಿಟ್ಟು ತೆರಳಿದರೆಂದರೆ ಅವರಿಗೆ ಕಾಲೇಜಿನ ನೆನಪು ಇರುವುದಿಲ್ಲ. ಆದರೆ ಈ ಬೆಳ್ಳಿ ಉಂಗುರ ಅವರ ಕಾಲೇಜು ನೆನಪನ್ನು ಸದಾ ಹಸಿರಾಗಿರಿಸುತ್ತೆ ಅಂತಾರೆ ಯರಗಟ್ಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+