ಮಂಗಳೂರಿನಲ್ಲಿ ಅನಾವರಣಗೊಂಡಿದೆ 'ನಮೋ ಕಿರು ಜಗತ್ತು'

ಮಂಗಳೂರು, ಫೆಬ್ರವರಿ 23: ನರೇಂದ್ರ ಮೋದಿ ಅವರನ್ನು ಮತ್ತೇ ಪ್ರಧಾನಿ ಆಗಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಚಟುವಟಿಕೆಗಳು ಭರದಿಂದ ಸಾಗಿವೆ. ಒಂದೆಡೆ ನರೇಂದ್ರ ಮೋದಿ ಅವರಿಗಾಗಿ ಯಜ್ಞಯಾಗಾಧಿಗಳು ನಡೆಯುತ್ತಿದ್ದರೆ ಇನ್ನೊಂಡೆದೆ ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಿ ಯಾಗಲು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ.

ಈ ನುವೆ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಸಮಗ್ರ ವಿವರ ಇರುವ ನಮೋ ವರ್ಲ್ಡ್ ಕಚೇರಿಯೊಂದು ಮಂಗಳೂರಿನಲ್ಲಿ ಆರಂಭಗೊಂಡಿದೆ. ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯ ಮಿಸ್‌ಚೀಫ್ ಮಾಲ್‌ನಲ್ಲಿ ಉದ್ಘಾಟನೆಗೊಂಡಿದೆ.

Lok Sabha elections 2019: Namo world in Mangaluru

ಈ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿವರಗಳನ್ನು ಒಳಗೊಂಡ ಕಿರು ಮೋದಿ ಜಗತ್ತೆ ತೆರೆದು ಕೊಂಡಿದೆ. ಜಗತ್ತಿನಾದ್ಯಂತ ಮೋದಿ ತಮ್ಮ ದಿಟ್ಟ ನಿರ್ಧಾರ , ದೂರದೃಷ್ಟಿ ಯೋಜನೆಗಳಿಂದ ಪ್ರಖ್ಯಾತರಾಗಿದ್ದರೆ. ಅವರು ಮಾಡಿರುವ ಕೆಲಸಕಾರ್ಯಗಳನ್ನು ಒಂದೇ ಸೂರಿನಡಿ ಮಾಹಿತಿ ಕೊಡುವ ಉದ್ಧೇಶದಿಂದ ಈ ಕಚೇರಿ ಆರಂಭಿಸಲಾಗಿದೆ.

Lok Sabha elections 2019: Namo world in Mangaluru

ಇಲ್ಲಿ ಕೇವಲ ನರೇಂದ್ರ ಮೋದಿ ಅವರ ಬಗ್ಗೆ ವಿವರಗಳು ಮಾತ್ರ ವಲ್ಲದೇ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮತದಾರ ಪಟ್ಟಿಗೆ ಹೊಸ ಹೆಸರು ಸೇರ್ಪಡೆ, ಮೋದಿ 5 ವರ್ಷಗಳ ಸಾಧನೆ ಕುರಿತ ಮಾಹಿತಿ ಮತ್ತು ಪುಸ್ತಕ. 55 ವರ್ಷಗಳ ಕಾಂಗ್ರೆಸ್ ಮತ್ತು 55 ತಿಂಗಳ ಮೋದಿ ಸರ್ಕಾರದ ಸಾಧನೆಗಳ ಅವಲೋಕನ ದ ಕಿರು ಹೊತ್ತಗೆ, ಮೋದಿ ಸಾಧನೆ ಕುರಿತ ಫ್ಲೆಕ್ಸ್ ಡಿಸೈನ್ , ಮೋದಿ ಕುರಿತ ಹಾಡುಗಳು, ಮೋದಿ ಕುರಿತು ಕಾರ್ಯಕ್ರಮ ಮಾಡುವುದಾದರೆ ಭಾಷಣಕಾರರ ಸಂಪರ್ಕ ಮತ್ತು ಮಾರ್ಗದರ್ಶನ.

Lok Sabha elections 2019: Namo world in Mangaluru

ಮೋದಿ ಅವರನ್ನು ಮತ್ತೇ ಪ್ರಧಾನಿ ಯಾಗಿಸುವ ನಿಟ್ಟಿನಲ್ಲಿ ಮೋದಿಗಾಗಿ ಸಮಯ ಕೊಡಲು ಇಚ್ಚಿಸುವುದಾದರೆ ಅವರ ಅನುಕೂಲಕ್ಕೆ ತಕ್ಕಂತೆ ಮಾರ್ಗದರ್ಶನ. ಮೋದಿಯ ಮುಂದಿನ ದಿನಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ. ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳ ಮಾಹಿತಿ ಇಲ್ಲಿ ಲಭ್ಯವಾಗಲಿದೆ. ಅದಲ್ಲದೇ ನಮೋ ಟಿ ಶರ್ಟ್, ಕೀ ಪಂಚ್, ಕ್ಯಾಪ್, ಹೂಡಿ, ಸೇರದಂತೆ ನಮೋ ಮರ್ಚಂಡೈಸ್ ಪರಿಕರಗಳು ಇಲ್ಲಿ ಲಭ್ಯವಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+