ಫ್ಯಾಷನ್ ರಾಂಪ್ ಮೇಲೆ ಮಿನುಗುತ್ತಿರುವ ಮಂಗಳೂರಿನ ಉಪನ್ಯಾಸಕಿ

ಮಂಗಳೂರು, ಸೆಪ್ಟೆಂಬರ್ 30: ಮಂಗಳೂರಿನ ಉಪನ್ಯಾಸಕಿಯೊಬ್ಬರು ಫ್ಯಾಷನ್ ಲೋಕದ ಸ್ಟಾರ್ ಆಗಿ ರಾಂಪ್ ಮೇಲೆ ಮಿಂಚುಹರಿಸಿದ್ದಾರೆ. ಮಂಗಳೂರಿನ ಗೀತಾ ಬಂಗೇರ ನಗರದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕಿ. ಮಕ್ಕಳಿಗೆ ಪಾಠ ಹೇಳುತ್ತಾ ಗೀತಾ ಬಂಗೇರ ಫ್ಯಾಶನ್ ರಾಂಪ್ ಮೇಲೂ ಹೆಜ್ಜೆ ಹಾಕುತ್ತಿದ್ದಾರೆ. ಈಗಾಗಲೇ ಗೀತಾ ಬಂಗೇರಾ ಅಂತಾರಾಷ್ಟ್ರೀಯ ಮಟ್ಟದವರೆಗೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಮಂಗಳೂರಿನ ತೊಕ್ಕೊಟ್ಟು ನಿವಾಸಿ ಗೀತಾ ಬಂಗೇರ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ಖಾಸಗಿ ಸಂಸ್ಥೆಯೊಂದರಲ್ಲಿ ಹಿಂದಿ ಉಪನ್ಯಾಕರಾಗಿ ಗೀತಾ ಕಾರ್ಯನಿರ್ವಹಿಸುತ್ತಿದ್ದಾರೆ.

Lecturer creating sparks on ramp in Mangaluru

ಗೀತಾ ಬಂಗೇರ ಈಗ ಫ್ಯಾಶನ್ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಕಿಂಗ್ ಆ್ಯಂಡ್ ಆಫ್ ಓಶಿಯನ್ ಸಮ್ಮರ್ ಸ್ಯಾಂಡ್ನಲ್ಲಿ ಮೊದಲ ರನ್ನರ್ ಅಪ್ ಆಗಿ ಮೊದಲ ಬಾರಿ ಸ್ವೀಕರಿಸಿದ ಗೀತಾ ಮಿಸ್ ಕರ್ನಾಟಕ ಇಂಟರ್ನ್ಯಶನಲ್ಲಿ 2017ನಲ್ಲಿ ಮಿಸ್ ಕರ್ನಾಟಕ ರ್ಯಾಂಪ್ವಾಕ್ ಪ್ರಶಸ್ತಿ, ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಅಫ್ ಪರ್ಲ್ ಸಿಟಿ ಸ್ಪರ್ಧೆಯಲ್ಲಿ ದ್ವಿತೀಯ ರನ್ನರ್ ಅಪ್ ಆಗಿ ಪ್ರಶಸ್ತಿ ಪಡೆದುಕೊಂಡರು.

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಮಿಸ್ ಇಂಡಿಯಾ ಸುಪರ್ ಟ್ಯಾಲೆಂಟ್ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮಿಸ್ ಟ್ಯಾಲೆಂಟ್ ಆಗಿ ಮಿಂಚಿದರು. ಗೀತ್ ಈಗಾಗಲೇ 13 ಕಾರ್ಯಕ್ರಮಗಳಲ್ಲಿ ರ್ಯಾಂಪ್ ವಾಕ್ ಮಾಡಿ ತೀರ್ಪುಗಾರರ ಮನಗೆದ್ದಿದ್ದಾರೆ.

Lecturer creating sparks on ramp in Mangaluru

ಗೀತಾ, ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದ ಗೀತಾ ಕಲಿಕೆಯಲ್ಲೂ ಪ್ರತಿಭಾವಂತೆ. ಜ್ಞಾನ ದೊಂದಿಗೆ ಶಿಸ್ತನ್ನು ಮೈಗೂಡಿಸಿಕೊಂಡಿರುವ ಗೀತಾ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆಯಲು ಹೊರಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+