ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ ದೀಪೋತ್ಸವ, ವೀರೇಂದ್ರ ಹೆಗ್ಗಡೆ ಜನ್ಮದಿನ, ಧರ್ಮಸ್ಥಳದಲ್ಲಿ ಎರೆಡೆರಡು ಸಂಭ್ರಮ

|
Google Oneindia Kannada News

ಮಂಗಳೂರು, ನವೆಂಬರ್ 25: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏಕಕಾಲಕ್ಕೆ ಎರೆಡೆರಡು ಸಂಭ್ರಮ ನಡೆಯಲಿದೆ. ಒಂದು ಕಡೆ ಲಕ್ಷ ದೀಪೋತ್ಸವ ಮತ್ತೊಂದು ಕಡೆ ಹೆಗ್ಗಡೆಯವರ ಜನ್ನ ದಿನ ಸಂಭ್ರಮ. ಶ್ರೀ ಕ್ಷೇತ್ರವು ಪ್ರಮುಖವಾಗಿ ಎರಡು ಕಾರಣಗಳಿಂದ ಪ್ರಸಿದ್ಧಿ ಪಡೆದಿದೆ. ಒಂದು ಶಿವನ ರೂಪವಾದ ಮಂಜುನಾಥ ಸ್ವಾಮಿ, ಇನ್ನೊಂದು ಧರ್ಮಾಧಿಕಾರಿ. ಭಕ್ತಿ, ಭಾವ ಮತ್ತು ಅನ್ನ ಪ್ರಸಾದದಿಂದ ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ 71ನೇ ಜನ್ಮ ದಿನವಾಗಿದೆ. ಸುಮಾರು ವರ್ಷಗಳಿಂದ ಶ್ರೀ ಕ್ಷೇತ್ರದ ಏಳಿಗೆಗಾಗಿ ಶ್ರಮಿಸಿದವರು. ಹೆಗ್ಡೆಯವರು ದೂರದೃಷ್ಟಿಯುಳ್ಳವರು. ಜನಪರವಾದ ಮತ್ತ ಜನಪಯೋಗಿ ಕಾರ್ಯಗಳಿಂದ ಜನಮಾನಸದಲ್ಲಿ ಸ್ಥಾನ ಪಡೆದವರು. ಶ್ರೀ ಕ್ಷೇತ್ರದಿಂದ ಕನ್ನಡ ನಾಡಿಗೆ ತನ್ನದೇ ಆದ ಕೊಡುಗೆ ಯನ್ನು ನೀಡುತ್ತಾ ಬಂದಿದೆ.

ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಎಲ್ಲರ ಲಕ್ಷ್ಯ ನೈಸರ್ಗಿಕ ಐಸ್‌ಕ್ರೀಂ ಕಡೆಗೆ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಎಲ್ಲರ ಲಕ್ಷ್ಯ ನೈಸರ್ಗಿಕ ಐಸ್‌ಕ್ರೀಂ ಕಡೆಗೆ

ವೀರೇಂದ್ರ ಹೆಗ್ಗಡೆಯವರು ಜನರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸಲು ಗ್ರಾಮೀಣಾಭಿವೃದ್ಧಿ ಸ್ಚ ಸಹಾಯ ಸಂಘ ಸ್ಥಾಪಿಸಿ ಅನೇಕ ಜನರ ಮನೆ ಬೆಳಕಾಗಿದ್ದಾರೆ. ಲಕ್ಷಾಂತರ ಜನರು ಇದರ ಸೌಲಭ್ಯ ಪಡೆದು ಸ್ವಂತ ಶಕ್ತಿಯ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಅತೀ ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲ ನೀಡಿ, ಅವರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣಎಲ್ಲರಿಗೂ ದೊರೆಯಲು ಕ್ಷೇತ್ರದ ವತಿಯಿಂದ ಶಿಕ್ಷಣ ಸಂಸ್ಥೆಗಳನ್ನು ತರೆದು ಬಡವರಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲಾಗುತ್ತದೆ.

Laksha Deepotsava And Virendra Hegde Birthday Celebrated In Dharmasthala

ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹವನ್ನು ಆರಂಭಿಸಿ ಸರಳ ಜೀವನ ನಡೆಸುವುದರ ಪಾಠ ಹೇಳಿಕೊಟ್ಟಿದ್ದಾರೆ. ಈ ವ್ಯೆವಸ್ಥೆಯಲ್ಲಿ ಅದೆಷ್ಟೋ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಪ್ರಾಚೀನಕಾಲದಲ್ಲಿ ನಿರ್ಮಾಣವಾಗಿ, ಈಗ ಹಾಳಾಗಿರು ಸಾವಿರಾರು ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ವಿಶ್ವದಲ್ಲಿಯೇ ಪ್ರಕೃತಿ ಚಿಕಿತ್ಸಾಲಯ ತೆರೆದು ಕಡಿಮೆ ವೆಚ್ಚದಲ್ಲಿ ಪ್ರಕೃತಿ ಆರೋಗ್ಯ ನೀಡಲಾಗುತ್ತದೆ.

ಧರ್ಮಸ್ಥಳದಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿ ಪ್ರಸಾದ ವ್ಯೆವಸ್ಥೆ ಶ್ರೇಷ್ಟವಾಗಿದೆ. ನಿತ್ಯ ಲಕ್ಷಾಂತರ ಹೊಟ್ಟೆಗಳಿಗೆ ಅನ್ನ ನೀಡುವ ಕಾರ್ಯ ಶ್ಲಾಘನೀಯ. ಹಸಿದವರಿಗೆ ಅನ್ನ ಹಾಕಿ ಅವರ ಹೊಟ್ಟೆ ತಣಿಸುವುದು ಇಲ್ಲಿ ನಿತ್ಯ ಕಾಯಕ. ಧರ್ಮಾಧಿಕಾರಿಯವರ ಸನ್ನಿಧಿಯಲ್ಲಿ ಕೋರ್ಟ್ ಗಳಲ್ಲಿ ಬಗೆಹರಿಯದ ಸಮಸ್ಯೆಗಳು ಇಲ್ಲಿ ಮಂಗಳ ಹಾಡಿವೆ.

Laksha Deepotsava And Virendra Hegde Birthday Celebrated In Dharmasthala

ಡಾ,ವೀರೇಂದ್ರ ಹೆಗ್ಗಡೆಯವರ ಜನ್ಮದಿನ ಮತ್ತು ಕಾರ್ತಿಕ ಮಾಸದ ಲಕ್ಷ ದೀಪೋತ್ಸವಗಳಲು ಒಮ್ಮೆಲೆ ಬಂದಿರುವುದು ಕ್ಷೇತ್ರದ ಭಕ್ತಾಧಿಗಳ ಸಂತೋಷವನ್ನು ಹಿಮ್ಮಡಿಗೊಳಿಸಿದೆ. ಹೆಗ್ಗಡೆಯವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎನ್ನುವುದು ಭಕ್ತರ ಆಶಯ.

English summary
Two Celebrations Will Be Held Simultaneously At Sri Kshetra Dharamsthala. One Is Laksha Deepotsava And Another One Is Celebration Of Hegde 71st birthday. Sri Kshetra is Famous For Main Reasons, Manjunatha Swamy, A Form Of Shiva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X