ಮಂಗಳೂರು ವಿಮಾನ ನಿಲ್ದಾಣಕ್ಕೆ ಸರ್ಕಾರಿ ಬಸ್ ಸೇವೆ, ವೇಳಾಪಟ್ಟಿ

ಮಂಗಳೂರು, ಅಕ್ಟೋಬರ್ 27; ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರ್ಕಾರಿ ಬಸ್ ಸೇವೆ ಆರಂಭಿಸಲಾಗುತ್ತದೆ. ಈ ಮೂಲಕ ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಆರಂಭಿಸಿ ಎಂಬ ಹಲವು ವರ್ಷಗಳ ಬೇಡಿಕೆ ಈಡೇರಲಿದೆ.

ಅಕ್ಟೋಬರ್ 27ರಿಂದಲೇ ಮಂಗಳೂರು ನಗರದ ಬಿಜೈ ಸರ್ಕಾರಿ ಬಸ್ ನಿಲ್ದಾಣ ಮತ್ತು ಮಣಿಪಾಲದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸರ್ಕಾರಿ ವೋಲ್ವೊ ಬಸ್ ಸೇವೆ ಆರಂಭಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದ್ದವು.

ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಆರಂಭಿಸುವಂತೆ ಸೂಚನೆ ನೀಡಿದ್ದರು. ಮೈಸೂರು ಕೆಎಸ್ಆರ್‌ಟಿಸಿ ವಿಭಾಗದಿಂದ 4 ವೊಲ್ವೋ ಬಸ್‌ಗಳನ್ನು ತಂದು ವಿಮಾನ ನಿಲ್ದಾಣಕ್ಕೆ ಸಂಚಾರ ಪ್ರಾರಂಭಿಸಲಾಗುತ್ತಿದೆ.

KSRTC Volvo Bus Service Launched To Mangaluru Airport

ಬಸ್ ದರ, ವೇಳಾಪಟ್ಟಿ; ಮಂಗಳೂರು ನಗರದ ಬಿಜೈ ಸರ್ಕಾರಿ ಬಸ್ ನಿಲ್ದಾಣದಿಂದ ಸ್ಟೇಟ್‌ ಬ್ಯಾಂಕ್, ಸೆಂಟ್ರಲ್ ರೈಲು ನಿಲ್ದಾಣ, ಲಾಲ್‌ಬಾಗ್, ಕುಂಟಿಕಾನ, ಕಾವೂರು ಮೂಲಕ ಬೆಳಗ್ಗೆ 6.30ಕ್ಕೆ ಬಸ್ ಸಂಚಾರ ನಡೆಸಲಿದೆ. ಈ ಮಾರ್ಗದ ಪ್ರಯಾಣ ದರ 100 ರೂ.ಗಳು.

ಉಡುಪಿಯ ಮಣಿಪಾಲದಿಂದ ಆಗಮಿಸುವ ಬಸ್ ಕಾವೂರು ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಈ ಮಾರ್ಗದ ಪ್ರಯಾಣ ದರ 300 ರೂ. ಎಂದು ನಿಗದಿ ಮಾಡಲಾಗಿದೆ.

KSRTC Volvo Bus Service Launched To Mangaluru Airport

ಈ ಬಸ್‌ಗಳಲ್ಲಿ ಕೇವಲ ವಿಮಾನ ನಿಲ್ದಾಣದ ಪ್ರಯಾಣಿಕರು, ಸಿಬ್ಬಂದಿ ಮಾತ್ರವಲ್ಲ ಇತರ ಪ್ರಯಾಣಿಕರ ಸಂಚಾರಕ್ಕೆ ಸಹ ಅವಕಾಶ ನೀಡಲಾಗಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಸ್ ಸಂಚಾರ ಸ್ಥಗಿತಗೊಂಡಿತ್ತು; ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಆರಂಭಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಈ ಹಿಂದೆ ಸರ್ಕಾರಿ ಬಸ್ ಸಂಚಾರ ಆರಂಭಿಸಲಾಗಿತ್ತು. ಆದರೆ ನಷ್ಟದ ನೆಪವೊಡ್ಡಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಬಸ್ ಸಂಚಾರ ಇಲ್ಲದ ಕಾರಣ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಜನರು ಖಾಸಗಿ ವಾಹನಗಳನ್ನು ಅವಲಂಬಿಸಬೇಕಿತ್ತು. ಇದಕ್ಕಾಗಿ ಹೆಚ್ಚುವರಿ ಹಣ ವ್ಯಯವಾಗುತ್ತಿತ್ತು. ಈಗ ಬಸ್ ಸೇವೆ ಮತ್ತೆ ಆರಂಭವಾಗುತ್ತಿದೆ.

ಬಸ್ ಸೇವೆ ಆರಂಭಿಸುವ ಕುರಿತು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ, "ಮಂಗಳೂರು ನಗರದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಸಚಿವರು ವಿಷಯ ಪ್ರಸ್ತಾಪ ಮಾಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.

ಮಂಗಳೂರು ಕೆಎಸ್ಆರ್‌ಟಿಸಿ ವಿಭಾಗದ ನಿಯಂತ್ರಣಾಧಿಕಾರಿ ರಾಜೇಶ್ ಮಾತನಾಡಿ, "ಮಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಮಂಗಳೂರು ವಿಭಾಗಕ್ಕೆ ಈ ತನಕ ಯಾವುದೇ ಸೂಚನೆ ಬಂದಿಲ್ಲ. ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರಿಗೆ ಶುಲ್ಕದ ಹೊರೆ; ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳುತ್ತಿರುವ ಅದಾನಿ ಗ್ರೂಪ್ ನಿಲ್ದಾಣಕ್ಕೆ ಆಗಮಿಸುವ, ನಿರ್ಗಮಿಸುವ ಎಲ್ಲಾ ಪ್ರಯಾಣಿಕರಿಗೆ ಯುಡಿಎಫ್ ಶುಲ್ಕವನ್ನು ಏರಿಕೆ ಮಾಡಲು ಮುಂದಾಗಿದೆ. ಇದಕ್ಕಾಗಿ ಒಪ್ಪಿಗೆ ಕೇಳಿದೆ.

ಪ್ರಸ್ತುತ ದೇಶಿಯ ಪ್ರಯಾಣಿಕರಿಗೆ 150 ರೂ., ವಿದೇಶಿ ಪ್ರಯಾಣಿಕರಿಗೆ 825 ರೂ. ಶುಲ್ಕವಿದೆ. ಬಳಕೆದಾರರ ಶುಲ್ಕ (ಯುಡಿಎಫ್) ಅನ್ನು 100 ರೂ. ಏರಿಕೆ ಮಾಡಲು ಅನುಮತಿ ಕೇಳಲಾಗಿದೆ. ಅನುಮತಿ ಸಿಕ್ಕಿದರೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಶುಲ್ಕ ಏರಿಕೆಯಾಗಲಿದೆ.

ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಶುಲ್ಕ ಏರಿಕೆಗೆ ಒಪ್ಪಿಗೆ ನೀಡುವ ಕುರಿತು ಪರಿಶೀಲನೆ ನಡೆಸುತ್ತಿದೆ. 2020ರ ಅಕ್ಟೋಬರ್ 31ರಿಂದ ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+