ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ

ಮಂಗಳೂರು, ಸೆಪ್ಟೆಂಬರ್ 24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಹಾರಾಷ್ಟ್ರದ ಮುಂಬೈಗೆ ಗುರುವಾರದಿಂದ ಬಸ್ ಸೇವೆ ಆರಂಭಿಸಲಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ನಗರಗಳಿಗೆ ಬಸ್ ಸಂಚಾರ ನಡೆಸಲಿದೆ.

ಮಂಗಳೂರು ನಗರದಿಂದ ಮುಂಬೈಗೆ ಮಲ್ಟಿ ಆಕ್ಸೆಲ್ ಮತ್ತು ಹವಾನಿಯಂತ್ರಣ ರಹಿತ ಬಸ್‌ಗಳು ಗುರುವಾರದಿಂದ ಸಂಚಾರ ನಡೆಸಲಿವೆ. ಸರ್ಕಾರದ ಕೋವಿಡ್ ಮಾರ್ಗಸೂಚಿ ಅನ್ವಯ ಪ್ರಯಾಣಿಕರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಗುರುವಾರ ಮಧ್ಯಾಹ್ನ 12 ಗಂಟೆಗೆ ಮಂಗಳೂರು ನಗರದಿಂದ ಬಸ್ ಹೊರಡಲಿದ್ದು, ಮರುದಿನ ಬೆಳಗ್ಗೆ 7.30ಕ್ಕೆ ಮುಂಬೈಗೆ ತಲುಪಲಿದೆ. ಮುಂಬೈನಿಂದ 11 ಗಂಟೆಗೆ ಹೊರಡಲಿರುವ ಬಸ್, ಮರುದಿನ ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪಲಿದೆ. ಪ್ರಯಾಣ ದರ 1,600 ರೂ.ಗಳು.

KSRTC Bus Service To Mumbai From September 24

ಮಲ್ಟಿ ಆಕ್ಸೆಲ್ ಬಸ್‌ಗಳು ಮಂಗಳೂರಿನಿಂದ 1 ಗಂಟೆಗೆ ಹೊರಡಲಿದ್ದು, 7 ಗಂಟೆಗೆ ಮುಂಬೈ ತಲುಪಲಿವೆ. ಮುಂಬೈನಿಂದ 1 ಗಂಟೆಗೆ ಹೊರಡಲಿರುವ ಬಸ್, 7 ಗಂಟೆಗೆ ಮಂಗಳೂರು ತಲುಪಲಿದೆ.

ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ. ಒಟ್ಟು ಸೋಂಕಿತರ ಸಂಖ್ಯೆ 12,63,799. ಮುಂಬೈನಲ್ಲಿ ಒಟ್ಟು ಸೋಂಕಿತರು 1,90,264.

ಕೋವಿಡ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಮುಂಬೈ ಮತ್ತು ಮಂಗಳೂರು ನಗರದ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಈಗ ಕೆಎಸ್ಆಅರ್‌ಟಿಸಿ ಪುನಃ ಸಂಚಾರ ಆರಂಭಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+