ಮಂಗಳೂರು : ಕೆಎಂಸಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಸೇವೆ

ಮಂಗಳೂರು, ಜೂ.25 : ಮಂಗಳೂರಿನ ಕೆಎಂಸಿ ಆಸ್ಪತ್ರೆ 24 ಗಂಟೆಗಳ ಆಂಬ್ಯುಲೆನ್ಸ್ ಸೇವೆ ಮತ್ತು ತುರ್ತು ಸಹಾಯವಾಣಿಯನ್ನು ಆರಂಭಿಸಲಿದೆ. 'ಮಾರ್ಸ್' ಎಂಬ ಹೆಸರಿನಲ್ಲಿ ಈ ಸೇವೆಯನ್ನು ಜಾರಿಗೆ ತರಲಾಗುತ್ತಿದ್ದು, ಜೂನ್ 26ರಂದು ಈ ಸೇವೆಗಳಿಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಈ ನೂತನ ಸೇವೆಗಳು ಎಲ್ಲಾ ವೈದ್ಯಕೀಯ ತುರ್ತು ಅಗತ್ಯಗಳನ್ನು ಪೂರೈಸುವ ಸೌಲಭ್ಯಗಳನ್ನು ಹೊಂದಿವೆ. ಜೂನ್ 26ರ ಶುಕ್ರವಾರ ಆರೋಗ್ಯ ಸಚಿವ ಯು.ಟಿ. ಖಾದರ್ ಈ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ತುರ್ತು ಸಂದರ್ಭದಲ್ಲಿ ಜನರು 2222227 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

 ambulance

ಮಣಿಪಾಲ್ ಎಂಟರ್‌ಪ್ರೈಸಸ್‌ನ ಅಂಗವಾದ ಕೆಎಂಸಿ ಆಸ್ಪತ್ರೆ ಮಣಿಪಾಲ್ ಆಂಬ್ಯುಲೆನ್ಸ್ ರೆಸ್ಪಾನ್ಸ್ ಸರ್ವೀಸ್ (ಮಾರ್ಸ್) ಎಂಬ ಹೆಸರಿನಲ್ಲಿ ಈ ಸೇವೆಯನ್ನು ಜಾರಿಗೆ ತರುತ್ತಿದೆ. ಕೆಎಂಸಿ ಆಸ್ಪತ್ರೆಯ ತರಬೇತಿ ಹೊಂದಿದ ವೈದ್ಯಕೀಯ ಪ್ರತಿನಿಧಿಗಳು ಈ ಯೋಜನೆಯ ಭಾಗವಾಗಿದ್ದು, ಉತ್ತಮ ಚಿಕಿತ್ಸೆ ನೀಡಲಿದ್ದಾರೆ. [ಬೈಕ್ ಆಂಬುಲೆನ್ಸ್: ಏನಿದು, ಬಳಸುವುದು ಹೇಗೆ?]

ಕೆಎಂಸಿ ಆಸ್ಪತ್ರೆಯ 4 ಆಂಬ್ಯುಲೆನ್ಸ್‌ಗಳ ಜೊತೆಗೆ ಕೆಎಂಸಿ ಚಿಕ್ಕಮಗಳೂರು, ಮಡಿಕೇರಿ, ಉಡ್ಡಾನೆ, ಕುಂಬ್ಳೆ, ಕಾಸರಗೋಡು, ಕಾನಂಗಡ್, ಪರಿಯಾರಂ, ಥಲ್ಲಿಪರಂಬ, ಕಣ್ಣೂರ್ ಮುಂತಾದ ಕಡೆಗಳಲ್ಲಿನ 13 ಇತರೆ ಆಂಬ್ಯುಲೆನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಮಾರ್ಸ್ ಕನೆಕ್ಟ್ ಎಂಬ ಸೇವೆಯಡಿ ಹೆಚ್ಚಿನ ಸೇವೆಯನ್ನು ನೀಡಲಾಗುತ್ತದೆ. [ಅಕ್ಟೋಬರ್ ನಿಂದ ಏರ್ ಆಂಬ್ಯುಲೆನ್ಸ್ ಸೇವೆ]

ದಿನದ 24 ಗಂಟೆ ವಾರದ 7 ದಿನಗಳೂ ಕಾರ್ಯನಿರ್ವಹಿಸುವ ಸಹಾಯವಾಣಿ ಮತ್ತು ಉತ್ತಮವಾದ ತರಬೇತಿ ಹೊಂದಿರುವ ತುರ್ತು ಪ್ರತಿಕ್ರಿಯಾ ಕೇಂದ್ರದ ವೈದ್ಯರು ತುರ್ತು ಕರೆಗಳಿಗೆ ಉತ್ತರಿಸಲಿದ್ದಾರೆ. ಅಗತ್ಯವಿದ್ದರೆ ಸ್ಥಳಕ್ಕೆ ತಜ್ಞ ವೈದ್ಯರನ್ನು ರವಾನಿಸಲಾಗುತ್ತದೆ.

ಮಾರ್ಸ್ ವಿಭಿನ್ನ ಹೇಗೆ : ಮಾರ್ಸ್‌ ಸೇವೆಯಲ್ಲಿ ಕೇಂದ್ರೀಕೃತ 24/7 ಕಾಲ್ ಸೆಂಟರ್ ಮತ್ತು ಉತ್ತಮ ತರಬೇತಿ ಹೊಂದಿರುವ ವೈದ್ಯರು ತುರ್ತು ಕರೆಗಳಿಗೆ ಉತ್ತರ ನೀಡುತ್ತಾರೆ. ಆಬ್ಯುಲೆನ್ಸ್ ಚಾಲಕರಿಗೆ ತರಬೇತಿ ನೀಡಲಾಗಿದ್ದು, ವಯಸ್ಕರು, ಮಕ್ಕಳು ಮತ್ತು ನವಜಾತ ಶಿಶುಗಳ ತುರ್ತು ಸ್ಥಿತಿಗಳನ್ನು ನಿಭಾಯಿಸಬಲ್ಲರು.

ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಹಮಾನಿಯಂತ್ರಿನ ಅಂಬ್ಯುಲೆನ್ಸ್‌ಗಳು ಕಾರ್ಯ ನಿರ್ವಹಿಸಲಿವೆ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ನಿಂದ ರೋಗಿಯ ಸ್ಥಿತಿಯ ಕುರಿತು ಸ್ಥಿರ ಚಿತ್ರಗಳನ್ನು ರವಾನಿಸಲು ವ್ಯವಸ್ಥೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+