ಮಂಗಳೂರಿಗೂ ಕಾಲಿಟ್ಟ ಕಿರಿಕ್ ಕಿಕಿ ಹುಚ್ಚು, ವೈರಲ್ ಆದ ವಿಡಿಯೋಗಳು
ಮಂಗಳೂರು, ಆಗಸ್ಟ್ 12: ವಿಶ್ವದಾದ್ಯಂತ ಕಿರಿಕಿರಿ ಸೃಷ್ಠಿಸಿರುವ ಕಿಕಿ ಚಾಲೆಂಜ್ ಕ್ರೇಜ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಲಿರಿಸಿದೆ. ಚಲಿಸುವ ಕಾರಿನಿಂದಲೇ ಹೊರಗೆ ಜಿಗಿದು, ಕಾರಿನ ನಿಧಾನ ವೇಗಕ್ಕೆ ತಕ್ಕಂತೆ ನೃತ್ಯ ಮಾಡಿಕೊಂಡು ಹೋಗುವ 'ಕಿಕಿ ಚಾಲೆಂಜ್' ಕ್ರೇಜ್ ಮಂಗಳೂರಿನ ಯುವಕರಲ್ಲಿ ಕಂಡು ಬಂದಿದೆ.
ವಿದೇಶದಲ್ಲಿ ಆರಂಭವಾದ ಈ ಕಿಕಿ ಚಾಲೆಂಜ್ ಭಾರತದಲ್ಲೂ ಸದ್ದು ಮಾಡುತ್ತಿದೆ. ಈ ಕಿಕಿ ಚಾಲೆಂಜ್ ಗೆ ಬಾಲಿವುಡ್ ನಟ- ನಟಿಯರಿಂದ ಆರಂಭಗೊಂಡು ಕಾಲೇಜು ಯುವಕ ಯುವತಿಯರಲ್ಲಿ ಕಿಚ್ಚು ಹಚ್ಚಿಸಿದೆ. ಈ ಚಾಲೆಂಜ್ ಸ್ವೀಕರಿಸಿ ಹಲವಾರು ಮಂದಿ ಅಪಾಯಕ್ಕೆ ಸಿಲುಕಿದ ಸನ್ನಿವೇಶಗಳು ಬೆಳಕಿಗೆ ಬಂದಿವೆ.
ಈ ಕಿರಿಕ್ ಕಿಕಿ ಹುಚ್ಚು ಮಂಗಳೂರಿಗೂ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಆದರೆ ಮಂಗಳೂರಿನಲ್ಲಿ ಈ ಕಿಕಿ ಚಾಲೆಂಜ್ ಅನ್ನು ವಿಡಂಬಣೆ ಮಾಡುವ ಮತ್ತೊಂದು ರೀತಿಯ ಟ್ರೆಂಡ್ ಆರಂಭವಾಗಿದೆ. ಮಂಗಳೂರಿನ ಯುವಕರ ಗುಂಪೊಂದು ರಾತ್ರಿ ಸಮಯ ಕಿಕಿ ಚಾಲೆಂಜ್ ಸ್ವೀಕರಿಸಿ ಚಲಿಸುತ್ತಿರುವ ಕಾರಿನಿಂದ ಜಿಗಿದು ನೃತ್ಯ ಮಾಡಿದ್ದು, ನಂತರ ಅದನ್ನು ಕುಡ್ಲ ವರ್ಶನ್ ಎಂದು ಹುಲಿ ಕುಣಿತದ ತಾಸೆಯ ಬಡಿತಕ್ಕೆ ಯುವಕರ ತಂಡ ಹೆಜ್ಜೆ ಹಾಕಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೇ ರೀತಿ ಇನ್ನೊಂದು ಯುವಕರ ಗುಂಪು ಗ್ರಾಮೀಣ ಪ್ರದೇಶದ ನಡು ರಸ್ತೆಯಲ್ಲಿ ಕಿಕಿ ಚಾಲೆಂಜ್ ನ ಹಾಸ್ಯ ಪ್ರಸಂಗದ ರೀತಿಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದೆ. ಆದರೆ ಇದರಲ್ಲಿ ಚಲಿಸುತ್ತಿರುವ ಕಾರಿನ ಬದಲು ಕಾರಿನ ಡೋರ್ ಕಿತ್ತು ಅದರ ಪಕ್ಕದಲ್ಲಿ ಕಿಕಿ ಚಾಲೆಂಜನ್ನು ವಿಡಂಬಣೆ ಮಾಡುವ ರೀತಿಯಲ್ಲಿ ಚಿತ್ರೀಕರಿಸಲಾಗಿದೆ.
ಇದೇ ರೀತಿ ಯುವಕರ ಗುಂಪು ಕಿಕಿ ಚಾಲೆಂಜ್ ಕಾರಿನ ಬದಲು ನದಿಯಲ್ಲಿ ದೋಣಿಯ ಪಕ್ಕ ಕಿಕಿ ಚಾಲೆಂಜ್ ಸ್ವೀಕರಿಸುವ ಸವಾಲು ಹಾಕಿ ವ್ಯಂಗ್ಯ ಮಾಡಿದೆ. ಈ ವಿಡಿಯೋ ಕೂಡ ವೈರಲ್ ಆಗಿದೆ . ಈ ನಡುವೆ ಮಂಗಳೂರಿನಲ್ಲಿ ಕಿಕಿ ಚಾಲೆಂಜ್ ಗೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದು ಪೊಲೀಸ್ ಇಲಾಖೆ ಎಚ್ಚರಿಸಿದೆ .

ಶುಕ್ರವಾರ ಮಂಗಳೂರು ನಗರದಲ್ಲಿ ಕಿಕಿ ಚಾಲೆಂಜ್ ಸ್ವೀಕರಿಸಿ ಹಾಡಿಗೆ ಹೆಜ್ಜೆ ಹಾಕಿದ ಯುವಕರ ತಂಡದ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications