ಮಂಗಳೂರಿನಲ್ಲಿ ಕಿಯೋನಿಕ್ಸ್‌ನಿಂದ ಸೈಬರ್ ತರಬೇತಿ ಸಂಸ್ಥೆ

ಮಂಗಳೂರು, ಮೇ 26 : ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಸೈಬರ್ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತದೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಯು.ಬಿ.ವೆಂಕಟೇಶ್ ಹೇಳಿದ್ದಾರೆ. ಕಿಯೋನಿಕ್ಸ್ ಮತ್ತು ಜಪಾನಿನ ಎನ್‌ಇಸಿ ಜಂಟಿಯಾಗಿ ಈ ಕೇಂದ್ರವನ್ನು ಆರಂಭಿಸಲಿವೆ.

ಮಂಗಳೂರಿನ ಕಿಯೋನಿಕ್ಸ್‌ಗೆ ಸೋಮವಾರ ಭೇಟಿ ನೀಡಿದ್ದ ಯು.ಬಿ.ವೆಂಕಟೇಶ್ ಅವರು, ಮಂಗಳೂರು, ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯಾಚರಣೆ ಮಾಡುತ್ತಿರುವ ಸೈಬರ್ ಪ್ರಯೋಗಾಲಯಗಳನ್ನು ಆಧುನೀಕರಣಗೊಳಿಸಿ, ಸೈಬರ್ ತರಬೇತಿ ಕೇಂದ್ರ ಮಾಡಲು ಉದ್ದೇಶಿಸಲಾಗಿದೆ ಎಂದರು. [ಅಶ್ಲೀಲ ಫೋಟೋ ಕಳಿಸಿದವನಿಗೆ 2 ವರ್ಷದ ಜೈಲು ಶಿಕ್ಷೆ]

ub venkatesh

ಜಪಾನ್ ಎನ್‌ಇಸಿ ಜೊತೆಗೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಪ್ರಾಯೋಗಿಕವಾಗಿ ದೇಶದಲ್ಲೇ ಮೊದಲ ಬಾರಿಗೆ ಮಂಗಳೂರು ಮತ್ತು ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ಆರಂಭವಾಗಲಿದೆ ಎಂದು ವೆಂಕಟೇಶ್ ತಿಳಿಸಿದರು. [ಮಂಗಳೂರಿಗೆ ಬಂತು ಸೈಬರ್ ಕ್ರೈಂ ಪೊಲೀಸ್ ಠಾಣೆ]

ಎಚ್‌ಪಿ ಜತೆ ಒಪ್ಪಂದ : ಕಾಲೇಜಿನ ಕ್ಯಾಂಪಸ್‌ಗಳಲ್ಲಿ ಸೆಲೆಕ್ಷನ್ ಆಗದ ವಿದ್ಯಾರ್ಥಿಗಳಿಗೆ ಸಂವಹನ ಮುಂತಾದ ತರಬೇತಿ ನೀಡಲು ಎಚ್‌ಪಿ ಸಂಸ್ಥೆ ಜತೆಗೆ ಕಿಯೋನಿಕ್ಸ್ ಒಪ್ಪಂದ ಮಾಡಿಕೊಳ್ಳಲಿದೆ. 6 ರಿಂದ 12 ವಾರಗಳ ತರಬೇತಿ ಇದಾಗಿದ್ದು, ಐಟಿ ಕಂಪನಿಗಳ ಸಂದರ್ಶನ ಎದುರಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಕಿಯೋನಿಕ್ಸ್ ರಾಜ್ಯಾದ್ಯಂತ 310 ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ನಡೆಸುತ್ತಿದೆ. ಸುಮಾರು 10 ಸಾವಿರದಷ್ಟು ಸಿಬ್ಬಂದಿಗಳಿದ್ದಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಕಲಿತವರಿಗೆ ಕಂಪ್ಯೂಟರ್ ತರಬೇತಿ ನೀಡಿ, ಸರ್ಕಾರಿ ಕಚೇರಿಗಳಿಗೆ ನೇಮಕ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+