ಮೂಡುಬಿದಿರೆಯಲ್ಲಿ ಜು 6 ಮತ್ತು 7 ರಂದು ಉದ್ಯೋಗ ಮೇಳ
ಮೂಡುಬಿದಿರೆ, ಜೂನ್ 18 : ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನ 10 ನೇ ವರ್ಷದ 'ಆಳ್ವಾಸ್ ಪ್ರಗತಿ' ಉದ್ಯೋಗ ಮೇಳದ ದಿನಾಂಕವನ್ನು ಘೋಷಣೆ ಮಾಡಿದೆ. ಜುಲೈ 6 ಮತ್ತು 7ರಂದು ಉದ್ಯೋಗ ಮೇಳ ನಡೆಯಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಈ ಕುರಿತು ಮಾಹಿತಿ ನೀಡಿದ್ದಾರೆ. 'ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ 10 ನೇ ವರ್ಷದ 'ಆಳ್ವಾಸ್ ಪ್ರಗತಿ' ಉದ್ಯೋಗ ಮೇಳ ನಡೆಸಲಾಗುತ್ತಿದೆ' ಎಂದರು.
ಎರಡು ದಿನದ ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ. ವಿಜ್ಞಾನ, ವಾಣಿಜ್ಯ, ಮ್ಯಾನೇಜ್‌ಮೆಂಟ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಮುಂತಾದ ವಿಷಯಗಳಲ್ಲಿ ವ್ಯಾಸಂಗ ಮಾಡಿದವರು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಟೊಯೋಟಾ ಕಿರ್ಲೋಸ್ಕರ್, ಓರಾಕಲ್, ಕೆಫೆ ಕಾಫಿ ಡೇ, ವೋಡಾಪೋನ್, ರಿಲಾಯನ್ಸ್ ಕಮ್ಯುನಿಕೇಶನ್ ಮುಂತಾದ ಕಂಪನಿಗಳು ಎಂಬಿಎ, ಬಿಕಾಂ, ಬಿಬಿಎ ವ್ಯಾಸಂ ಮಾಡಿದವರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತನ್ನ ಹೆಸರನ್ನು ರಿಜಿಸ್ಟರ್ ಮಾಡಿಸಬೇಕಾಗಿದೆ. ಆಳ್ವಾಸ್ ಪ್ರಗತಿ ವೆಬ್‌ಸೈಟ್‌ನಲ್ಲಿ ಉದ್ಯೋಗ ಮೇಳದ ವಿವರಗಳು ಲಭ್ಯವಿದೆ.












Click it and Unblock the Notifications