ಚಿನ್ನ ಕಳ್ಳಸಾಗಣೆ: ಮಂಗಳೂರಿನಲ್ಲಿ ಜೆಟ್ ಏರ್‌ವೇಸ್ ಸಿಬ್ಬಂದಿ ಬಂಧನ

ಮಂಗಳೂರು, ಜುಲೈ 26 : ಗಲ್ಫ್ ರಾಷ್ಟ್ರದಿಂದ ಮಂಗಳೂರಿಗೆ ಬರುವ ವಿಮಾನದ ಶೌಚಾಲಯಲ್ಲಿ ಚಿನ್ನವನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಜೆಟ್ ಏರ್‌ವೇಸ್ ನಿರ್ವಹಣೆಯ ತಾಂತ್ರಿಕ ಸಿಬ್ಬಂದಿಯೊಬ್ಬ ಸಿಕ್ಕಿಬಿದ್ದಿದ್ದಾನೆ.

ಇಲ್ಲಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್‌ವೇಸ್ ನ ಲಾಲ್‌ಬೀನ್ ಜೀನ್ ಏರ್‌ಕ್ರಾಫ್ಟ್ ನಿರ್ವಹಣೆಯ ತಾಂತ್ರಿಕ ಸಿಬ್ಬಂದಿ 1166.5 ಗ್ರಾಂ ತೂಕದ 34.41 ಲಕ್ಷ ಮೌಲ್ಯದ ಚಿನ್ನವನ್ನು ಸಾಗಿಸುವ ವೇಳೆ ಕಂದಾಯ ಗುಪ್ತಚರ ನಿರ್ದೇಶಾನಲಯ (ಡಿಎಆರ್)ದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

Jet Airways maintenance staff nabbed for gold smuggling at Mangalore Airport

ಲಾಲ್‌ಬೀನ್ ಜೀನ್ ಚಿನ್ನವನ್ನು ಏಜೆಂಟರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಇದ್ದ ಅಧಿಕಾರಿಗಳು ಜುಲೈ 25ರಂದು ಕಾರ್ಯಾಚರಣೆ ನಡೆಸಿ ದುಬೈನಿಂದ ಬಂದ ಜೆಟ್ ಏರ್‌ವೇಸ್ ವಿಮಾನದಿಂದ ಈ ಚಿನ್ನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ಲಾಲ್‌ಬೀನ್ ಜೀನ್ ತನ್ನ ಕೆಲಸಕ್ಕೆ 20 ಸಾವಿರ ಸಂಭಾವನೆ ಪಡೆಯುತ್ತಿದ್ದ ಎಂದು ಡಿಎಆರ್ ಉಪ ನಿರ್ದೇಶಕ ವಿನಾಯಕ ಭಟ್ ತಿಳಿಸಿದ್ದಾರೆ.

ಆರೋಪಿಯು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಚಿನ್ನವನ್ನು ಸಂಜೆ ವೇಳೆ ಸಿಟಿ ಸೆಂಟರ್‌ನಲ್ಲಿ ಏಜೆಂಟ್ನೊಬ್ಬನಿಗೆ ಒಪ್ಪಿಸಬೇಕಿತ್ತು. ಇದೀಗೆ ಆರೋಪಿಯನ್ನು ಬಂಧಿಸಿ ನ್ಯಾಯಾಧೀಶ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+