ಕುಚೋದ್ಯ ಕರೆಗೆ ಬಲಿಯಾದ ಜೆಸಿಂತಾಗೆ ದೇಣಿಗೆ

ಮೆಲ್ಬೋರ್ನ್, ಸೆ.13: ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ದಾನಾರಿಗೆ ಕುಚೋದ್ಯ ಕರೆಯೊಂದನ್ನು ಮಾಡಿ ಅವರ ಸಾವಿಗೆ ಕಾರಣವಾಗಿರುವ ಆಸ್ಟ್ರೇಲಿಯದ ರೇಡಿಯೊ ಕೇಂದ್ರವೊಂದು ಇದೀಗ 5,00,000 ಅಮೆರಿಕನ್ ಡಾಲರ್ ಮೊತ್ತವನ್ನು ಜೆಸಿಂತಾ ಸಲ್ದಾನಾ ಕುಟುಂಬಕ್ಕೆ ದೇಣಿಗೆಯಾಗಿ ನೀಡಿದೆ.

ಲಂಡನ್ನಿನ ಕಿಂಗ್ ಎಡ್ವರ್ಡ್VII ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿರ್ವ ಮೂಲದ ಜೆಸಿಂತಾ ದುರಂತ ಅಂತ್ಯಕ್ಕೆ ಇಡೀ ತುಳುನಾಡು ಕಂಬನಿಗೆರೆದಿತ್ತು. 46 ವರ್ಷದ ಜೆಸಿಂತಾ ಎಡ್ನಾ ನೋರೊನ್ನಾ ಸಲ್ಡಾನಾ ಅವರ ಸಾವಿನ ನಿಗೂಢತೆ ಇನ್ನೂ ಮುಂದುವರೆದಿದೆ.

ಕೇಂಬ್ರಿಜ್‌ನ ರಾಣಿ ಕೇಟ್ ಮಿಡ್ಲ್‌ಟನ್ ಗರ್ಭಿಣಿ(ಮೊದಲ ಮಗು)ಯಾಗಿ ಲಂಡನ್‌ನ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ರಾಜಕುಟುಂಬದ ಸದಸ್ಯರ ಸೋಗಿನಲ್ಲಿ ಆಸ್ಪತ್ರೆಗೆ ಕುಚೋದ್ಯ ಕರೆ ಮಾಡಿದ್ದ ಆಸ್ಟೇಲಿಯದ ರೇಡಿಯೊ ಕೇಂದ್ರದ ನಿರೂಪಕರಾದ ಗ್ರೆಗ್ ಹಾಗೂ ಮೈಕೆಲ್ ಕ್ರಿಶ್ಚಿಯನ್, ಜೆಸಿಂತಾ ಸಲ್ದಾನಾ ಮೂಲಕ ಮಾಹಿತಿ ಪಡೆದು ಅದನ್ನು ಪ್ರಸಾರ ಮಾಡಿದ್ದು, ಇದರಿಂದ ಮನನೊಂದಿದ್ದ ಜೆಸಿಂತಾ ಸಲ್ದಾನಾ ಆತ್ಮಹತ್ಯೆಗೆ ಶರಣಾಗಿದ್ದರು. [ಆಮ್ಲಜನಕ ಕೊರತೆಯಿಂದ ಜೆಸಿಂತಾ ಸಾವು]

Jacintha Saldanha inquest: Australian radio station donates $500,000 to family

"ನಾವು ನೀಡುತ್ತಿರುವ ದೇಣಿಗೆ ಮೊತ್ತವು ಸಲ್ದಾನಾ ಕುಟುಂಬಕ್ಕೆ ಆಗಿರುವ ನಷ್ಟವನ್ನು ಭರಿಸಲಾರದು ಎಂಬುದು ನಮಗೆ ತಿಳಿದಿದೆ. ಆದರೆ ಈ ಹಣವು ಅವರಿಗೆ ಕಿಂಚಿತ್ತಾದರೂ ನೆರವಾಗಬಹುದೆಂಬುದು ನಮ್ಮ ಆಶಯವಾಗಿದೆ"ಎಂದು ದೇಣಿಗೆ ನೀಡಿರುವ ಆಸ್ಟ್ರೇಲಿಯನ್ ರೇಡಿಯೊ ಕೇಂದ್ರದ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದರು.

ಜೆಸಿಂತಾ ಸಲ್ದಾನಾ ಕರ್ನಾಟಕದ ಮಂಗಳೂರು ಮೂಲದವರಾಗಿದ್ದು, ರೇಡಿಯೊ ನಿರೂಪಕರ ಕುಚೋದ್ಯ ಕರೆಗೆ ಒಳಗಾಗಿದ್ದ ಅವರ ಮೃತದೇಹವು ಕೆಲವೇ ದಿನಗಳಲ್ಲಿ ಆಸ್ಪತ್ರೆಯ ದಾದಿಯರ ನಿವಾಸದಲ್ಲಿ ಪತ್ತೆಯಾಗಿತ್ತು. ಬ್ರಿಟನ್‌ನ ರಾಣಿ ಎರಡನೆಯ ಎಲಿಜಬೆತ್ ಹಾಗೂ ರಾಜಕುಮಾರ ಚಾರ್ಲ್ಸ್ ಹೆಸರಿನಲ್ಲಿ 2012ರ ಡಿಸೆಂಬರ್‌ನಲ್ಲಿ ರೇಡಿಯೊ ನಿರೂಪಕರು ಕುಚೋದ್ಯ ಕರೆ ಮಾಡಿ ಕೇಟ್ ಮಿಡ್ಲ್‌ಟನ್‌ರ ಬಗ್ಗೆ ಮಾಹಿತಿ ಸಂಗ್ರಹಿಸಿ ಬಿತ್ತರಿಸಿದ್ದರು. ಆಸ್ಪತ್ರೆಗೆ ಬಂದಿದ್ದ ದೂರವಾಣಿ ಕರೆಯನ್ನು 46ರ ಹರೆಯದ ಜೆಸಿಂತಾ ಸಲ್ದಾನಾ ಆ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಇನ್ನೋರ್ವ ನರ್ಸ್‌ಗೆ ವರ್ಗಾಯಿಸಿದ್ದರೆನ್ನಲಾಗಿತ್ತು.

ರೇಡಿಯೋ ಜಾಕಿಗಳ ಕರೆ ನಂತರ ಆಸ್ಪತ್ರೆ ಸಿಬ್ಬಂದಿಗಳ ಕಿರುಕುಳಕ್ಕೆ ಜೆಸಿಂತಾ ಒಳಗಾಗಿರುವ ಸಾಧ್ಯತೆಯಿದೆ. ಹೀಗಾಗಿ ಘಟನೆ ನಡೆದ 72 ಗಂಟೆಗಳಲ್ಲಿ ಜೆಸಿಂತಾ ಮುರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆಯಿದೆ. 3 ಸೂಸೈಡ್ ನೋಟ್ ಸಿಕ್ಕಿರುವುದು ಇದನ್ನು ಪುಷ್ಟೀಕರಿಸುತ್ತದೆ ಎಂದು ಜೆಸಿಂತಾ ಕುಟುಂಬ ವರ್ಗ ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+