ಮಂಗಳೂರು-ಬೆಂಗಳೂರು ನಡುವೆ ಮತ್ತೊಂದು ನೂತನ ವಿಮಾನ ಸೇವೆ

ಮಂಗಳೂರು, ಮಾರ್ಚ್ 19: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಹೌದು, ಮಂಗಳೂರು ಮತ್ತು ಬೆಂಗಳೂರು ನಡುವೆ ಇನ್ನೊಂದು ವಿಮಾನಯಾನ ಸೇವೆ ಸದ್ಯದಲ್ಲೇ ಆರಂಭಗೊಳ್ಳಲಿದೆ. ಇಂಡಿಗೋ ಸಂಸ್ಥೆ ಇದೇ ಬರುವ ಏಪ್ರಿಲ್‌ನಿಂದ ಮಂಗಳೂರು-ಬೆಂಗಳೂರು ನಡುವೆ ವಿಮಾನ ಸೇವೆ ಆರಂಭಿಸಲಿದೆ.

ಭಾರತದ ಆನ್‌-ಟೈಮ್‌ ಪರ್ಫಾರ್ಮರ್ ಇಂಡಿಗೊ, ತನ್ನ ಗ್ರಾಹಕ ಅನುಭವವನ್ನು ತನ್ನ ಜಾಲಕ್ಕೆ 14 ಹೊಸ ವಿಮಾನಗಳನ್ನು ಸೇರ್ಪಡೆ ಮಾಡುತ್ತಿದ್ದು, ಅದರಲ್ಲಿ ಮಂಗಳೂರು- ಬೆಂಗಳೂರು ಮಾರ್ಗವೂ ಸೇರಿದೆ.ಇಂಡಿಗೋ ಚೆನ್ನೈ-ರಾಯಪುರ, ಹೈದರಾಬಾದ್‌-ಗೋರಖ್ ಪುರ ಮತ್ತು ಕೋಲ್ಕತಾ-ಗೋರಖ್ ಪುರಗಳ ನಡುವೆ ತನ್ನ ಮೊದಲ ವಿಮಾನವನ್ನು ಆರಂಭಿಸಲಿದೆ.

ಹೊಸ ವಿಮಾನ ಮುಂಜಾನೆ 7:30ಕ್ಕೆ ಬೆಂಗಳೂರಿನಿಂದ ಹೊರಟು 8:40ಕ್ಕೆ ಮಂಗಳೂರು ತಲುಪಲಿದೆ. ಬಳಿಕ 9:30ಕ್ಕೆ ಮಂಗಳೂರಿನಿಂದ ಹೊರಟು 10:30ಕ್ಕೆ ಬೆಂಗಳೂರು ತಲುಪಲಿದೆ.

IndiGo announced new flight services

ಬೆಂಗಳೂರು ಮಂಗಳೂರು ವಿಮಾನ ಸೇವೆ ಮಾತ್ರವಲ್ಲದೇ, ಪ್ರಸ್ತುತ ಚೆನ್ನೈ- ತಿರುವನಂತಪುರ, ಬೆಂಗಳೂರು- ಉದಯಪುರ ಮತ್ತು ಬೆಂಗಳೂರು- ಚೆನ್ನೈ ಮಾರ್ಗಗಳಿಗೆ ಹೆಚ್ಚು ವಿಮಾನಗಳ ಸೇರ್ಪಡೆ ಮಾಡಲಿದೆ. ಎಲ್ಲ ಹೊಸ ಸೇವೆಗಳು ಏಪ್ರಿಲ್‌ನಿಂದ ಪ್ರಾರಂಭಗೊಳ್ಳಲಿವೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+