ಸಸಿಹಿತ್ಲು ಬೀಚ್ ನಲ್ಲಿ ಮೇ 26ರಿಂದ ಇಂಡಿಯನ್ ಓಪನ್ ಸರ್ಫಿಂಗ್
ಮಂಗಳೂರು, ಏಪ್ರಿಲ್ 11 : ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕೆನರಾ ಸರ್ಫಿಂಗ್ ಮತ್ತು ಜಲಕ್ರೀಡೆ ಉತ್ತೇಜನಾ ಕೌನ್ಸಿಲ್ ಸಹಯೋಗದಲ್ಲಿ ಮಂಗಳೂರು ಹೊರವಲಯದ ಸಸಿಹಿತ್ಲು ಬೀಚ್ ನಲ್ಲಿ ಮೇ 26 ರಿಂದ 28ರ ವರೆಗೆ ಇಂಡಿಯನ್ ಓಪನ್ ಸರ್ಫಿಂಗ್ -2017 ಕ್ರೀಡಾಕೂಟ ನಡೆಯಲಿದೆ.
ಈ ಬಗ್ಗೆ ಒನ್ ಇಂಡಿಯಾ ಕನ್ನಡಕ್ಕೆ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಕುಮಾರ್, ಪಂದ್ಯಾಟಕ್ಕೆ ಸ್ಪರ್ಧಾಳುಗಳ ನೊಂದಣಿ ಆರಂಭವಾಗಿದ್ದು, ಈ ವರ್ಷ ಹೆಚ್ಚು ಕ್ರೀಡಾಳುಗಳನ್ನು ಸರ್ಫಿಂಗ್ ಕ್ರೀಡೆಗೆ ಆಕರ್ಷಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಸರ್ಫಿಂಗ್ ಕ್ರೀಡಾಕೂಟದ ಯಶಸ್ಸಿಗಾಗಿ ಜಿಲ್ಲಾ ಮಟ್ಟದ ಅಧಿಕಾರಿಯನ್ನೊಳಗೊಂಡ ವಿವಿಧ ಕ್ಷೇತ್ರಗಳ ಗಣ್ಯರ ಸುಮಾರು 12 ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರೂಪಿತವಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications