ಅಕ್ರಮ ಸಂಬಂಧದ ಶಂಕೆ, ಪತ್ನಿಯನ್ನು ಕತ್ತಿಯಿಂದ ಕಡಿದು ಕೊಂದ ಪತಿ
ಮಂಗಳೂರು, ಆಗಸ್ಟ್ 19: ಪತ್ನಿಗೆ ಅಕ್ರಮ ಸಂಬಂಧ ಇದೆ ಎಂಬ ಸಂಶಯದ ಮೇಲೆ ಪತಿಯೇ ಆಕೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳೂರಿನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ .
ನಗರದ ಕೊಟ್ಟಾರ ಚೌಕಿ ಎಂಬಲ್ಲಿ ಈ ಘಟನೆ ನಡೆದಿದ್ದು, ಇಲ್ಲಿಯ ಜೆ.ಬಿ. ಲೋಬೋ ರೋಡ್ ನಲ್ಲಿ ವಾಸವಿದ್ದ ವಿಲಿಯಂ ಲೋಬೋ ಹಾಗೂ ಬ್ಲೊಸಂ ಲೋಬೋ ದಂಪತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಶುಕ್ರವಾರ ರಾತ್ರಿ ಜಗಳ ನಡೆದಿದೆ. ಆ ಜಗಳವೇ ವಿಕೋಪಕ್ಕೆ ತಿರುಗಿದೆ.

ಈ ಸಂದರ್ಭದಲ್ಲಿ ಪತಿ ವಿಲಿಯಂ ಲೋಬೋ ಕೋಪಗೊಂಡು ಪತ್ನಿ ಬ್ಲೊಸಂ ಲೋಬೋಗೆ ಅಕ್ರಮ ಸಂಬಂಧವಿದೆ ಎಂದು ಸಂಶಯ ವ್ಯಕ್ತಪಡಿಸಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಪತ್ನಿ ಬ್ಲೊಸಂ ಲೋಬೋ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ಮಾಹಿತಿ ಪಡೆದ ಉರ್ವಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಪತಿ ವಿಲಿಯಂ ಲೋಬೋನನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ .












Click it and Unblock the Notifications