ಕೋರ್ಟ್‌ ಆವರಣದಲ್ಲಿ ಸುಭಾಷ್ ಪಡೀಲ್ ಕೊಲೆ ಯತ್ನ

ಮಂಗಳೂರು, ಜೂನ್ 04 : ಪಡೀಲ್ ಹೋಮ್ ಸ್ಟೇ ದಾಳಿಯ ಪ್ರಮುಖ ಆರೋಪಿ ಸುಭಾಷ್ ಪಡೀಲ್ ಹತ್ಯೆ ಯತ್ನ ನಡೆದಿದೆ. ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

2012ರ ಹೋಮ್ ಸ್ಟೇ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್‌ಗೆ ವಿಚಾರಣೆಗೆ ಸುಭಾಷ್ ಪಡೀಲ್ ಬಂದಿದ್ದಾಗ ಈ ಘಟನೆ ನಡೆದಿದೆ. ರಾಜ ಅಲಿಯಸ್ ಜಪಾನ್ ಮಂಗ ಸುಭಾಷ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು, ಅವರನ್ನು ಕೊಲ್ಲಲು ಯತ್ನಿಸಿದ್ದಾನೆ. [ಪಡೀಲ್ ಬಂಧನ ಖಂಡಿಸಿ, ಪ್ರತಿಭಟನೆ]

mangaluru court

ಈ ಸಂದರ್ಭದಲ್ಲಿ ಕೋರ್ಟ್‌ ಆವರಣದಲ್ಲಿ ಜಪಾನ್ ಮಂಗ ಹಾಗೂ ಸುಭಾಷ್ ಸಹಚರರ ನಡುವೆ ಹೊಡೆದಾಟ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ಜಪಾನ್ ಮಂಗನನ್ನು ಬಂಧಿಸಿದ್ದಾರೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. [ಮಂಗಳೂರು :ಬಜರಂಗದಳದಿಂದ ಪಬ್ ಮೇಲೆ ದಾಳಿ]

ಯಾರು ಈ ಜಪಾನ್ ಮಂಗ : ರಾಜ ಅಲಿಯಾಸ್‌ ಜಪಾನ್‌ ಮಂಗ ಎಂಬಾತನು ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ 2012ರಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ, ಉದ್ಯಮಿಯೊಬ್ಬರ ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+