ಬಂಟ್ವಾಳ ತಾಲೂಕಿನಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಮಳೆ
ಮಂಗಳೂರು, ಮಾರ್ಚ್. 21 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಾದ್ಯಂತ ಮಂಗಳವಾರ ಸಂಜೆ ಗಾಳಿ, ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಇದರಿಂದ ಬಿರು ಬಿಸಿಲಿಗೆ ಬಳಲಿದ್ದ ಜನರಿಗೆ ಮಳೆ ಕೊಂಚ ತಂಪು ನೀಡಿತು.
ಬಂಟ್ವಾಳ ತಾಲೂಕಿನ ಮಾಣಿ, ಕಡೇಶ್ವಲ್ಯ, ಪೆರ್ನೆ, ಗಡಿಯಾರ, ಬುಡೋಳಿ, ಸೂರಿಕುಮೇರಿನಲ್ಲಿ ಗಾಳಿ, ಗುಡುಗು ಮತ್ತು ಸಿಡಿಲು ಸಹಿತ ಭಾರೀ ಮಳೆಯಾದರೆ ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡಿನಲ್ಲಿ ತುಂತುರು ಮಳೆಯಾಗಿದೆ.

ಮಂಗಳವಾರ ಎಂದಿನಂತೆ ಬೆಳಗ್ಗೆಯಿಂದ ಬಿಸಿಲು ಇತ್ತಾದರೂ, ಸಂಜೆ ವೇಳೆಗೆ ಮೋಡ ಆವರಿಸಿದಂತಾಗಿ ಗುಡುಗು ಮತ್ತು ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ.












Click it and Unblock the Notifications