ಕೋವಿಡ್ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಿದ ಮಹಿಳೆಯರು!
ಮಂಗಳೂರು, ಏಪ್ರಿಲ್ 26; ಕೋವಿಡ್ ಎಂಬ ಮಾರಕ ವೈರಸ್ ಇಡೀ ಮನುಜ ಕುಲವನ್ನು ಭೀಕರವಾಗಿ ಕಾಡುತ್ತಿದೆ. ಕಣ್ಣಿಗೆ ಕಾಣದ ವೈರಸ್ನಿಂದ ಮನುಷ್ಯ, ಮನುಷ್ಯ ನಡುವೆ ದೈಹಿಕ ಅಂತರ ಜೊತೆಗೆ ಮಾನಸಿಕವಾಗಿಯೂ ಅಂತರವಿರುವಂತೆ ಮಾಡಿದೆ.
ಕೊರೊನಾ ಎಂಬ ಹೆಮ್ಮಾರಿ ಜನರನ್ನು ಭಯಭೀತಿಗೊಳಿಸಿದರೂ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಮಹಿಳಾ ತಂಡ ಕೊರೊನಾ ಆತಂಕದ ನಡುವೆಯೂ ಸಾಮಾಜಿಕ ಬದ್ಧತೆ ಮೆರೆದಿದೆ. ನ್ಯಾಷನಲ್ ವಿಮೆನ್ ಫ್ರಂಟ್ ಸಂಘಟನೆಯ ಮಹಿಳಾ ತಂಡ ಕೊರೊನಾದಿಂದ ಮೃತಪಟ್ಟ ಮುಸ್ಲಿಂ ಮಹಿಳೆಯರ ಅಂತಿಮ ವಿಧಿ ವಿಧಾನ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ.
ಕೋವಿಡ್ನಿಂದ ಮೃತಪಟ್ಟ ಮಹಿಳೆಯರ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ಮಾಡುವ ಕಾರ್ಯದಲ್ಲಿ ಈ ಸಂಘಟನೆ ತೊಡಗಿದೆ. ಕೊರೊನಾದಿಂದ ಮೃತಪಟ್ಟವರ ಶವದ ಸಮೀಪಕ್ಕೆ ಬರಲು ಮನೆಯವರೇ ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಈ ಮಹಿಳೆಯರ ತಂಡವೇ ಅಂತಿಮ ಕಾರ್ಯವನ್ನು ಮಾಡುತ್ತದೆ.

ಕೋವಿಡ್ ಒಂದನೇ ಅಲೆಯ ಸಂದರ್ಭದಲ್ಲೂ ಈ ತಂಡ ಕೋವಿಡ್ ಮತ್ತು ಕೋವಿಡ್ ಅಲ್ಲದೆ ಮೃತಪಟ್ಟ 200ಕ್ಕೂ ಅಧಿಕ ಮುಸ್ಲಿಂ ಮಹಿಳೆಯರ ಅಂತಿಮ ವಿಧಿ ವಿಧಾನವನ್ನು ಮುಸ್ಲಿಂ ಸಂಪ್ರದಾಯದಂತೆ ಮಾಡಿತ್ತು.
ಈ ಬಾರಿಯೂ ಆ ಸೇವೆಯನ್ನು ಸಂಘಟನೆ ಮುಂದುವರಿಸುತ್ತಿದೆ. ಮೃತಪಟ್ಟ ಕೋವಿಡ್ ರೋಗಿಗಳ ಅಂತಿಮ ವಿಧಿ ವಿಧಾನವನ್ನೂ ಈ ತಂಡ ಮಾಡುತ್ತಿದ್ದು, ಬಜ್ಪೆ, ಬಂಟ್ವಾಳ, ಉಪ್ಪಿನಂಗಡಿ, ಮಂಗಳೂರು ಪರಿಸರದ ಕೋವಿಡ್ ಮೃತರ ಅಂತ್ಯಕ್ರಿಯೆಗಳನ್ನು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈ ತಂಡಗಳಿದ್ದು, ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಕೊರೊನಾ ರೋಗಿ ಮೃತಪಟ್ಟ ಸಂದರ್ಭದಲ್ಲಿ ಸರ್ಕಾರದ ನಿಯಮದ ಪ್ರಕಾರ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನಡೆಸುತ್ತಾರೆ.
"ಪುರುಷ ಮೃತಪಟ್ಟರೆ ಪುರಷರೇ ಅಂತ್ಯಕ್ರಿಯೆ ಗಳನ್ನು ಮಾಡುತ್ತಾರೆ. ಆದರೆ ಮುಸ್ಲಿಂ ಸಂಪ್ರದಾಯದ ಪ್ರಕಾರ ಮುಸ್ಲಿಂ ಮಹಿಳೆ ಮೃತಪಟ್ಟರೆ ಮಹಿಳೆಯರೇ ಶವದ ಸ್ನಾನ ಇನ್ನಿತರ ಕ್ರಿಯೆಗಳನ್ನು ಮಾಡಬೇಕು. ಆದರೆ ಕೊರೊನಾ ಕಾರಣದಿಂದ ಮಹಿಳೆಯರು ಈ ಕ್ರಿಯೆ ಮಾಡಲು ಮುಂದೆ ಬರಲು ಒಪ್ಪಲಿಲ್ಲ. ಹೀಗಾಗಿ ಸಂಘಟನೆಯಿಂದಲೇ ಮಹಿಳಾ ತಂಡವನ್ನು ರಚಿಸಲಾಗಿದೆ" ಎಂದು ನ್ಯಾಷನಲ್ ವಿಮೆನ್ ಫ್ರಂಟ್ ಸಂಘಟನೆಯ ರಾಜ್ಯ ಸದಸ್ಯೆ ಫಾತಿಮಾ ಹೇಳಿದ್ದಾರೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications