ಮಂಗಳೂರು : ವಿದೇಶಿ ಯುವತಿಗೆ ಅಪ್ತಾಪ್ತನಿಂದ ಲೈಂಗಿಕ ಕಿರುಕುಳ

ಮಂಗಳೂರು, ಸೆಪ್ಟೆಂಬರ್ 24 : ಅಧ್ಯಯನಕ್ಕೆ ಬಂದಿದ್ದ ವಿದೇಶಿ ಯುವತಿಗೆ ಅಪ್ರಾಪ್ತ ಬಾಲಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ವಿದೇಶಿ ವಿದ್ಯಾರ್ಥಿಗಳಿಗೆ ಭದ್ರತೆಯನ್ನು ಒದಗಿಸಲು ಗೃಹ ಸಚಿವರು ಪೊಲೀಸರಿಗೆ ಸೂಚನೆ ನೀಡಿದ್ದರು.

ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ಪಾಣೀರು ಎಂಬಲ್ಲಿರುವ ಆಶ್ರಮವೊಂದಕ್ಕೆ ಜರ್ಮನ್ ಮೂಲದ ಯುವತಿ ಅಧ್ಯಯನಕ್ಕೆ ಬಂದಿದ್ದರು. ಯುವತಿ ಅಧ್ಯಯನ ಮುಗಿಸಿ ಹಿಂತಿರುಗುತ್ತಿದ್ದಾಗ ಕಿರುಕುಳ ನಡೆದಿದ್ದು, ಘಟನೆ ಬಗ್ಗೆ ದೂರು ದಾಖಲಾಗಿಲ್ಲ.

 Germany student sexually assulated in Mangaluru

ದೇರಳಕಟ್ಟೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಎದುರು ಏಕಾಏಕಿ ಅಪ್ರಾಪ್ತ ವಯಸ್ಸಿನ ಬಾಲಕನ ಪ್ರತ್ಯಕ್ಷನಾಗಿ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಗಾಬರಿಗೊಂಡ ಯುವತಿ ಸಹಾಯಕ್ಕೆ ಕೂಗಿದ್ದಾಳೆ. ಯುವತಿಯ ಧ್ವನಿ ಕೇಳಿ ಸ್ಥಳೀಯರು ಆಗಮಿಸಿ, ಬಾಲಕನನ್ನು ಹಿಡಿದು ಥಳಿಸಿದ್ದಾರೆ.

ರಸ್ತೆಯಲ್ಲಿಯೇ ವಿದೇಶಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಅಪ್ರಾಪ್ತ ಬಾಲಕನನ್ನು ಸ್ಥಳೀಯರು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಕುರಿತು ಕೊಣಾಜೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ವಿದೇಶಿ ಯುವತಿ ಸ್ಥಳದಿಂದ ತೆರಳಿದ್ದು ಆಕೆ ದೂರು ನೀಡಿಲ್ಲ.

ಮೊನ್ನೆಯಷ್ಟೇ ಮಂಗಳೂರಿಗೆ ಭೇಟಿ ನೀಡಿದ್ದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಅಧ್ಯಯನಕ್ಕೆ ಬಂದ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲು ಪೊಲೀಸರಿಗೆ ಸೂಚಿಸಿದ್ದರು. ಆದರೆ, ಈ ನಡುವೆಯೇ ಈ ಘಟನೆ ನಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+