ಇಡೀ ರಾತ್ರಿ ಮಂಗಳೂರು ನಗರ ಜನರನ್ನು ಕಾಡಿದ ವಿಚಿತ್ರ ವಾಸನೆ!

ಮಂಗಳೂರು, ಫೆಬ್ರವರಿ 18; ರಾಸಯಾನಿಕ ಕೈಗಾರಿಕೆಗಳನ್ನೇ ತನ್ನ ಸುತ್ತ ಒಳಗೊಂಡಿರುವ ಮಂಗಳೂರು ನಗರದಲ್ಲಿ ರಾತ್ರಿ ಗ್ಯಾಸ್ ಲೀಕೇಜ್ ಆದ ವಾಸನೆ ಪಸರಿಸಿದ ಕಾರಣ ಜನ ಆತಂಕ ಗೊಂಡ ಘಟನೆ ನಡೆದಿದೆ. ಮಂಗಳೂರು ನಗರ ವ್ಯಾಪ್ತಿಯ ಬಹುತೇಕ ಪ್ರದೇಶದಲ್ಲಿ ಗ್ಯಾಸ್ ಲೀಕೇಜ್ ವಾಸನೆ ಆವರಿಸಿದ್ದು ಜನರು ಭಯಗೊಂಡರು.

ಮಂಗಳೂರು ನಗರದ ಕದ್ರಿ, ಕುಳೂರು, ಬಿಕರ್ನಕಟ್ಟೆ, ಕಾರ್ ಸ್ಟ್ರೀಟ್, ಮಣ್ಣಗುಡ್ಡ, ಉರ್ವ ಸ್ಟೋರ್, ಮಂದಾರ ಬೈಲು, ಕೊಂಚಾಡಿ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಗ್ಯಾಸ್ ಲಿಕೇಜ್ ವಾಸನೆ ಜನರ ಮೂಗಿಗೆ ಬಡಿದಿದ್ದು ಸಹಜವಾಗಿ ಜನ ಆತಂಕಗೊಂಡಿದ್ದಾರೆ.

ರಾಸಯಾನಿಕ ಕಂಪನಿಗಳಿಂದ ಅನಿಲ ಸೋರಿಕೆಯಾಗಿರಬಹುದು ಅಂತಾ ಭಯಭೀತಗೊಂಡ ಜನರು ಸಾಮಾಜಿಕ ಜಾಲತಾಣದ ಮೂಲಕ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ರಾತ್ರಿ 8 ಗಂಟೆಯಿಂದ ಮಂಗಳೂರಿನ ಹಲವು ಕಡೆಗಳಲ್ಲಿ ಅನಿಲ ಸೋರಿಕೆಯ ವಾಸನೆಯ ಬಗ್ಗೆ ಜನರಿಂದ ಮಾಹಿತಿ ಬಂದಿದೆ. ಕೂಡಲೇ ಹೊಯ್ಸಳ ಮತ್ತು ಹೆದ್ದಾರಿ ಗಸ್ತುಗಳ ಮೂಲಕ ಲೀಕೇಜ್ ಬಗ್ಗೆ ತನಿಖೆ ಮಾಡಲಾಗಿದೆ ಎಂದುರು.

Gas Leakage Smell Creates Panic In Mangaluru City

ಎಂ. ಆರ್. ಪಿ. ಎಲ್, ಎಚ್. ಪಿ. ಸಿ. ಎಲ್. ಟೋಟಲ್ ಗ್ಯಾಸ್, ಎಂ. ಸಿ. ಎಫ್ ಕೈಗಾರಿಕೆಗಳಲ್ಲಿ ತಪಾಸಣೆ ಮಾಡಲಾಗಿದೆ. ಮಂಗಳೂರು ನಗರದ ಗ್ಯಾಸ್ ಪಂಪ್‌ಗಳು, ಹೈವೇ ಬದಿಯ ಗ್ಯಾಸ್ ಟ್ಯಾಂಕರ್ ಗಳನ್ನೂ ಪರಿಶೀಲನೆ ಮಾಡಲಾಗಿದೆ. ಎಲ್ಲೂ ಗ್ಯಾಸ್ ಲೀಕ್ ಆಗಿರೋದು ಕಂಡು ಬಂದಿಲ್ಲ ಎಂದರು.

ಅನಿಲ ವಾಸನೆಯ ಬಗ್ಗೆ ಮಾಹಿತಿ ಹಂಚಿಕೊಂಡ ಬಿಕರ್ನಕಟ್ಟೆ ನಿವಾಸಿ ಆಲ್ಫ್ರೇಡ್, "ಮಂಗಳೂರು ನಗರದ ಕೆಲವಡೆ ಗ್ಯಾಸ್ ಸೋರಿಕೆಯ ವಾಸನೆ ಬಂದಿದೆ. ಮೊದಲು ಮನೆಯ ಗ್ಯಾಸ್ ಲೀಕೇಜ್ ಆಗಿರಬೇಕೆಂದು ಭಾವಿಸಿ ತಪಾಸಣೆ ಮಾಡಿದ್ದೆವು. ಆದರೆ ಬಳಿಕ ಸ್ನೇಹಿತರೂ ಕರೆ ಮಾಡಿ ಗ್ಯಾಸ್ ಸೋರಿಕೆಯ ವಾಸನೆಯ ಬಗ್ಗೆ ಮಾಹಿತಿ ಹೇಳಿದರು. ಅಮೋನಿಯಂ ತರಹದ ವಾಸನೆ ಗಾಢವಾಗಿತ್ತು. ರಾತ್ರಿ ಇಡೀ ಭಯವಾಗಿತ್ತು" ಎಂದು ಹೇಳಿದರು.

ಮಂಗಳೂರು ನಗರದ ಸುತ್ತ ಎಂ. ಆರ್. ಪಿ. ಎಲ್‌ ಸೇರಿದಂತೆ ಹಲವು ರಾಸಯಾನಿಕ ಕಂಪನಿಗಳಿದ್ದು,ಇವುಗಳ ಪೈಪ್ ಲೈನ್‌ನಲ್ಲಿ ಸೋರಿಕೆ ಉಂಟಾಗಿರಬಹುದು ಅಂತಾ ಜನ ಮಾತಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಎಲ್ಲೂ ಗ್ಯಾಸ್ ಸೋರಿಕೆಯಾಗಿಲ್ಲ ಅಂತಾ ಸ್ಪಷ್ಟನೆ ನೀಡಿದ್ದು, ನಿಗೂಢ ವಾಸನೆಯ ಅಸಲಿಯತ್ತು ಬಯಲಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+