ಮಂಗಳೂರಿನಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆ

ಮಂಗಳೂರು, ಮಾರ್ಚ್ 24: ಮಂಗಳೂರಿನಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಮಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು ಐದಕ್ಕೆ ಏರಿದೆ.

ಕೊರೊನಾ ಸೋಂಕಿರುವ ಈ ನಾಲ್ವರು ಕೇರಳ ಮೂಲದವರು ಎಂದು ತಿಳಿದುಬಂದಿದೆ. ಮೂವರು ದುಬೈನಿಂದ ಬಂದಿದ್ದು, ಒಬ್ಬರು ಸೌದಿಯಿಂದ ಬಂದವರಾಗಿದ್ದಾರೆ.

32 ವರ್ಷದ ವ್ಯಕ್ತಿ ಕಾಸರಗೋಡು ಮೂಲದವರಾಗಿದ್ದು, ಸ್ಪೈಸ್ ಜೆಟ್ ಮೂಲಕ ದುಬೈನಿಂದ ಮಾರ್ಚ್ 20ರಂದು ಮಂಗಳೂರಿಗೆ ಬಂದಿದ್ದರು. 42 ವರ್ಷದ ವ್ಯಕ್ತಿ ಮಾರ್ಚ್ 19ಕ್ಕೆ ಮಂಗಳೂರಿಗೆ ಬಂದಿದ್ದರು. ಮೂವರನ್ನು ನಗರದ ವೆನ್ ‌ಲಾಕ್‌ ಆಸ್ಪತ್ರೆಯಲ್ಲಿ ಹಾಗೂ ಒಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Four More Corona Cases Confirmed In Mangaluru

ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಯಲು ಜಿಲ್ಲಾಧಿಕಾರಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮತ್ತು ಸ್ಪೈಸ್ ಜೆಟ್ ನಲ್ಲಿ ಬಂದಿದ್ದವರನ್ನು ತಪಾಸಣೆಗೆ ಒಳಪಡಿಸಿದ್ದರು. ಇದೀಗ ಈ ನಾಲ್ವರಲ್ಲಿ ಕೊರೊನಾ ಸೋಂಕು ಇರುವುದು ತಿಳಿದುಬಂದಿದೆ. ಮಾರ್ಚ್ 22ರಂದು ಕೊರೊನಾ ಪಾಸಿಟಿವ್ ಬಂದಿದ್ದ ವ್ಯಕ್ತಿ ಪಯಣಿಸಿದ್ದ ವಿಮಾನದಲ್ಲೇ ಈ ನಾಲ್ವರು ಪಯಣಿಸಿದ್ದರು ಎಂಬುದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+