ಅಪಾರ್ಟ್ ಮೆಂಟ್ ನ 8ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಬಾಲಕಿ

ಮಂಗಳೂರು ಮೇ 31: ಅಪಾರ್ಟ್ ಮೆಂಟ್ ನ 8ನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ. ವಿಲ್ಸನ್ ಹಾಗು ಆಲಿತಾ ದಂಪತಿಯ ಪುತ್ರಿ ಶಾನೆಲ್ ಜೆನಿಶೀಯಾ ಡಿಸೋಜಾ (5 ವರ್ಷ) ಘಟನೆಯಲ್ಲಿ ಮೃತಪಟ್ಟ ಬಾಲಕಿ.

ವಿಲ್ಸನ್ ಸೆಬಾಸ್ಟಿಯನ್ ಡಿಸೋಜಾ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ಅಲಿತಾ ಡಿಸೋಜಾ ಹಾಗು ಪುತ್ರಿ ಶಾನೆಲ್ ಜೆನಿಶೀಯಾ ಡಿಸೋಜಾ ನಗರದ ಶಕ್ತಿನಗರದಲ್ಲಿರುವ ಬಹುಮಹಡಿ ಕ್ಲಾಸಿಕ್ ಸಫಾಯರ್ ಅಪಾರ್ಟ್ ಮೆಂಟ್ ನ 8 ನೇ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಹಾ ಮಳೆಯ ಕಾರಣ ಶಾಲಾ ಕಾಲೇಜುಗಳಿಗೆ 2 ದಿನ ರಜೆ ಇದ್ದ ಕಾರಣ ಶಾನೆಲ್ ಮನೆಯಲ್ಲಿಯೇ ಆಟವಾಡಿಕೊಂಡಿದ್ದಳು.

ಈ ಸಂದರ್ಭ ಶಾನೆಲ್ ಫ್ಲಾಟ್ ನ ಬೆಡ್ ರೂಂ ಗೆ ತಾಗಿ ಕೊಂಡಿರುವ ವೆರಾಂಡದ ಗ್ರಿಲ್ಸ್ ಮೇಲೆ ಹತ್ತಿ ಸ್ಲೈಡರ್ ಕಿಟಕಿಯ ಮೂಲಕ ಕೆಳಕ್ಕೆ ಇಣುಕಲು ಯತ್ನಿಸುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಶಾನೆಲ್ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

Five year old child dies after falling from 8th floor

ಆದರೆ ತಲೆ ಹಾಗು ಎದೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಶಾನೆಲ್ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.

ಘಟನೆಯ ಕುರಿತು ನಗರದ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಬೆಡ್ ರೂಂ ನ ಕಿಟಕಿಗೆ ಸರಳುಗಳನ್ನು ಅಳವಡಿಸದಿರುವುದೇ ಘಟನೆಗೆ ಕಾರಣವಾಗಿದ್ದು, ಫ್ಲಾಟ್ ನ ಮಾಲೀಕರಾದ ವೀಣಾ ಎಲಿಸಾ ಸಲ್ಡಾನಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+