Breaking; ಮಂಗಳೂರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂನಲ್ಲಿ ಬೆಂಕಿ

ಮಂಗಳೂರು, ಜೂನ್ 23; ಮಂಗಳೂರು ನಗರದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕದ್ರಿ ಅಗ್ನಶಾಮಕ ಅಧಿಕಾರಿ ಮತ್ತು ಸಿಬ್ಬಂದಿಗಳು ಬೆಂಕಿ ನಂದಿಸಿದರು.

ಶುಕ್ರವಾರ ಮುಂಜಾನೆ ನಗರದ ನಾಗುರಿ ಪ್ರದೇಶದ ಓಕಿನವ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತು. ನೆಲ ಮಹಡಿಯಲ್ಲಿ ಬೆಂಕಿ ಮೊದಲು ಪತ್ತೆಯಾಗಿತ್ತು.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಹಾಗೂ ಕದ್ರಿ ಅಗ್ನಶಾಮಕ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Fire broke out e-bike showroom at Naguri in Mangaluru, Fire personnel rushed to spot

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಟ್ವಿಟರ್ ಖಾತೆಯಿಂದ ಘಟನೆ ಕುರಿತು ಮಾಹಿತಿ ನೀಡಲಾಗಿದೆ. ಬೆಂಕಿ ಅನಾಹುತದ ಚಿತ್ರಗಳನ್ನು ಹಾಕಲಾಗಿದೆ.

ಬೆಂಕಿ ಹೊತ್ತಿಕೊಂಡಿರುವ ಶೋ ರೂಂ ಕಟ್ಟಡದ ಮೇಲೆ ಶೋ ರೂಂ ಮಾಲೀಕ ಪ್ರಶಾಂತ್ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ಬಳಿಕ ಇಡೀ ಕಟ್ಟಡದಲ್ಲಿ ಹೊಗೆ ತುಂಬಿಕೊಂಡಿತ್ತು. ಬೆಂಕಿ ಆಕಸ್ಮಿಕದಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ಬಗ್ಗೆ ಮಾತನಾಡಿದ ಸಿರಾಜ್, "ಈ ಕಟ್ಟಡವನ್ನು ನನ್ನ ತಂದೆ ಹಮೀದ್ ಪ್ರಶಾಂತ್ ಎಂಬುವವರಿಗೆ ಕಳೆದ 4 ವರ್ಷಗಳ ಹಿಂದೆ ಲೀಸ್‌ಗೆ ನೀಡಿದ್ದಾರೆ" ಎಂದರು.

ಒಕಿನವ ಶೋ ರೂಂನಲ್ಲಿನ ಐದಕ್ಕೂ ಅಧಿಕ ವಾಹನಗಳು ಸಂಪೂರ್ಣ ಸುಟ್ಟು ಹೋಗಿವೆ. ಉಳಿದ ವಾಹನಗಳಿಗೆ ಹಾನಿಯಾಗಿದೆ. ಕಚೇರಿಯ ಕಡತ, ಕುರ್ಚಿ, ಟೇಬಲ್ ಸೇರಿದಂತೆ ಪಿಠೋಪಕರಣಳೂ ಸುಟ್ಟು ಹೋಗಿದ್ದು ಹಾನಿಯ ಅಂದಾಜು ಸಿಕ್ಕಿಲ್ಲ.

ಬೆಂಕಿಯಿಂದಾಗಿ ಶೋ ರೂಂ ಮೇಲ್ಭಾಗದಲ್ಲಿದ್ದ ಮನೆಗೂ ಹಾನಿಯಾಗಿದೆ. ಮನೆಯಲ್ಲಿನ ಪೀಠೋಪಕರಣ, ಗೃಹ ಬಳಕೆಯ ವಸ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+