ಸಾಲಬಾಧೆ ತಾಳದೆ ಮಂಗಳೂರಲ್ಲಿ ಸಾಮೂಹಿಕ ಆತ್ಮಹತ್ಯೆ

ಮಂಗಳೂರು, ಆ.14 : ಫೈನಾನ್ಸ್ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಕುಟುಂಬದೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರಣ ಘಟನೆ ಮಂಗಳೂರಿನ ಹೊಯಿಗೆಬೈಲಿನಲ್ಲಿ ಬೆಳಕಿಗೆ ಬಂದಿದೆ. ಫೈನಾನ್ಸ್ ವ್ಯವಹಾರದಲ್ಲಿ ಉಂಟಾದ ನಷ್ಟವೇ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತಪಟ್ಟವರನ್ನು ಶೈಲೇಶ್ (38), ಸವಿತಾ (32), ವಿದ್ಯಾಲಕ್ಷ್ಮೀ (10) ಎಂದು ಗುರುತಿಸಲಾಗಿದೆ. ಹೊಯಿಗೆಬೈಲಿನಲ್ಲಿರುವ ಫಲ್ಗುಣಿ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿರುವ ಶೈಲೇಶ್ ಮನೆಯಲ್ಲಿ ಗುರುವಾರ ಮಧ್ಯಾಹ್ನ ಮೃತದೇಹಗಳು ಪತ್ತೆಯಾಗಿವೆ.

ಶೈಲೇಶ್ ಚಿಲಿಂಬಿಯಲ್ಲಿ ಅಕ್ಷಯ ಫೈನಾನ್ಸ್‌ ಹೊಂದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಪತ್ನಿ ಮತ್ತು ಮಗಳಿಗೆ ವಿಷವುಣಿಸಿರುವ ಶೈಲೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಊರ್ವಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಶೈಲೇಶ್ ಮನೆಯ ಸುತ್ತಕಂಡು ಬಂದ ದೃಶ್ಯಗಳು

ತಡವಾಗಿ ಬೆಳಕಿಗೆ ಬಂದ ಪ್ರಕರಣ

ತಡವಾಗಿ ಬೆಳಕಿಗೆ ಬಂದ ಪ್ರಕರಣ

ಶೈಲೇಶ್, ಸವಿತಾ, ವಿದ್ಯಾಲಕ್ಷ್ಮೀ ಶವಗಳು ಊದಿಕೊಂಡಿದ್ದು ಕೆಟ್ಟ ವಾಸನೆ ಬರುತ್ತಿದೆ. ಎಲ್ಲರೂ ಸಾವನ್ನಪ್ಪಿ ಎರಡು ದಿನಗಳು ಕಳೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹಣಕಾಸಿನ ತೊಂದರೆ ಕಾರಣ

ಹಣಕಾಸಿನ ತೊಂದರೆ ಕಾರಣ

ಶೈಲೇಶ್ ಕುಟುಂಬದ ಸಾವಿಗೆ ಫೈನಾನ್ಸ್‌ ವ್ಯವಹಾರದಲ್ಲಿ ಆದ ನಷ್ಟವೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಉದ್ಯಮದಲ್ಲಿ ತೀವ್ರನಷ್ಟ ಅನುಭವಿಸಿದ್ದ ಶೈಲೇಶ್‌ ಅವರು ಹಲವರಿಂದ ಸಾಲ ಪಡೆದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಶೈಲೇಶ್ ವಿರುದ್ಧ ದೂರು

ಶೈಲೇಶ್ ವಿರುದ್ಧ ದೂರು

ಉದ್ಯಮದಲ್ಲಿ ಉಂಟಾದ ನಷ್ಟವನ್ನು ಕಡಿಮೆ ತುಂಬಿಕೊಳ್ಳಲು ಹಲವರಿಂದ ಸಾಲ ಪಡೆದಿದ್ದ ಶೈಲೇಶ್ ಅದನ್ನು ಮರಳಿಸಿರಲಿಲ್ಲ. ಈ ಕುರಿತು ಸಾಲ ನೀಡಿದವರು ಬರ್ಕೆ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಶೈಲೇಶ್ ರಿಂದ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ.

ಮೂರು ಡೆತ್ ನೋಟ್

ಮೂರು ಡೆತ್ ನೋಟ್

ಫಲ್ಗುಣಿ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿರುವ ಶೈಲೇಶ್ ಮನೆಯಲ್ಲಿ ಮೂರು ಡೆತ್‌ನೋಟ್‌ಗಳು ಪತ್ತೆಯಾಗಿವೆ. ಅವುಗಳಲ್ಲಿ ಹಣಕಾಸಿನ ತೊಂದರೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರು ಬರೆದಿಟ್ಟಿದ್ದಾರೆ.

ಡೆತ್‌ನೋಟಿನಲ್ಲೇನಿದೆ?

ಡೆತ್‌ನೋಟಿನಲ್ಲೇನಿದೆ?

ಶೈಲೇಶ್ ಅವರು ಬರೆದಿರುವ ಒಂದು ಡೆತ್‌ನೋಟ್‌ನಲ್ಲಿ ಹಣಕಾಸಿನ ಸಂಕಷ್ಟ ಮತ್ತು ಆಗುತ್ತಿರುವ ಅವಮಾನದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+