ಮಂಗಳೂರು: ನಾಪತ್ತೆಯಾಗಿದ್ದ ಮಹಿಳೆ ಸುಟ್ಟ ಶವವಾಗಿ ಪತ್ತೆ
ಮಂಗಳೂರು, ಡಿಸೆಂಬರ್.19 : ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೋರ್ವಳ ಶವ ಸುಟ್ಟ ರೀತಿಯಲ್ಲಿ ಮಂಗಳೂರಿನ ಬಜಪೆಯ ಎಕ್ಕಾರು ಸಮೀಪ ಪತ್ತೆಯಾಗಿದೆ. ಈ ಪ್ರಕರಣ ಸುತ್ತ ಹಲವಾರು ಸಂಶಯಗಳು ಹುಟ್ಟಿಕೊಂಡಿದ್ದು, ಸರಿಯಾದ ಕಾರಣ ತಿಳಿದು ಬಂದಿಲ್ಲ.
ಮೃತ ಮಹಿಳೆ ಉಷಾ ಶೆಟ್ಟಿ ಮಂಗಳೂರು ಜಪ್ಪಿನ ಮೊಗರು ನಿವಾಸಿಯಾಗಿದ್ದು, ಈಕೆ ಮಂಗಳೂರಿನ ಮಂಡೊವಿ ಶೋರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.[ನಿಂದಿಸಿದ ಮಾಜಿ ಪತ್ನಿಗೆ ಚಾಕುವಿನಿಂದ ಇರಿದ ಪತಿರಾಯ]

ಉಷಾ ಶೆಟ್ಟಿಯವರು ಡಿಸೆಂಬರ್ 17ರ ಗುರುವಾರ ಸುಮಾರು 3ಗಂಟೆಗೆ ಮಧ್ಯಾಹ್ನ ಕಟೀಲು ಕಡೆಯಿಂದ ಬಂದು ಎಕ್ಕಾರಿನ ಅಂಗಡಿಯೊಂದರಲ್ಲಿ ಚಕ್ಕುಲಿ ಬೆಲೆ ಕೇಳಿ ವಾಪಾಸ್ ಹೋಗಿದ್ದಾರೆ. ಎಷ್ಟೇ ಹೊತ್ತಾದರೂ ಮನೆಗೆ ಬಾರದ ಪತ್ನಿಯ ಬಗ್ಗೆ ಹೆದರಿದ ಪತಿ ಅಶ್ವಿನ್ ಶೆಟ್ಟಿಯವರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.[ಪತ್ನಿ, ಪುತ್ರಿ ಬಾವಿಗೆ ತಳ್ಳಿ ಅರ್ಚಕ ಆತ್ಮಹತ್ಯೆ]
ದೂರು ದಾಖಲಿಸಿಕೊಂಡ ಪೊಲೀಸರು ಟವರ್ ಲೊಕೇಶನ್ ಎಕ್ಕಾರಿನಲ್ಲಿ ಸಾರ್ವಜನಿಕರು ಮತ್ತು ಎಕ್ಕಾರಿನ ಸ್ಥಳೀಯರ ಜೊತೆ ಸೇರಿ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ. ಗುರುವಾರ ಮಧ್ಯಾಹ್ನ ಹುಡುಕಿದರೂ ಮಹಿಳೆ ಬಗ್ಗೆ ಮಾಹಿತಿ ದೊರಕದ ಕಾರಣ ಪತಿ ಅಶ್ವಿನ್ ಶೆಟ್ಟಿ ವಾಪಾಸ್ ಮನೆಗೆ ತೆರಳಿದ್ದರು.
ಆದರೆ ಉಷಾಳ ಶವ ಶುಕ್ರವಾರ ಸಂಜೆ ಎಕ್ಕಾರು ಕೊಡಮಣಿತ್ತಾಯ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಜೊತೆಗೆ ಶವದ ಹತ್ತಿರ ಪೆಟ್ರೋಲ್ ಬಾಟಲ್, ಬ್ಯಾಗ್, ಮದ್ದಿನ ಚೀಟಿ ಸಿಕ್ಕಿದೆ. ಈ ಸಂಬಂಧ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Click it and Unblock the Notifications
