ಮಂಗಳೂರು ಜೈಲಿನೊಳಗೆ ಗಾಂಜಾ, ಮೊಬೈಲ್ ಪೂರೈಕೆ ನಿಂತಿಲ್ಲ

ಮಂಗಳೂರು, ಮಾರ್ಚ್. 06 : ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರೂ ಜೈಲಿನೊಳಗಿರುವ ಕೈದಿಗಳ ಬಳಿ ಗಾಂಜಾ, ಮೊಬೈಲ್ ಮತ್ತು ಇತರೆ ವಸ್ತುಗಳು ಪತ್ತೆಯಾಗಿವೆ.

ಜೈಲಿನಲ್ಲಿರುವ ಕೈದಿಗಳಿಗೆ ಮೊಬೈಲ್, ಗಾಂಜಾ ಮತ್ತು ಇತರ ವಸ್ತುಗಳು ಪೂರೈಕೆಯಾಗುತ್ತಿರುವುದು ಎಲ್ಲಿಂದ? ಯಾರು ಇವುಗಳನ್ನು ಸಾಗಿಸುತ್ತಿದ್ದಾರೆ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ. ಇದರಲ್ಲಿ ಜೈಲ್ ಅಧಿಕಾರಿಗಳೇ ಶಾಮೀಲಾಗಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತಿವೆ.

ಜೈಲಿನ ಗೋಡೆ ಹಾರಿ ಬರುತ್ತಿವೆ ಗಾಂಜಾ, ಮೊಬೈಲ್‌ಗಳು ಈ ಬಗ್ಗೆ ಪೊಲೀಸ್ ಅಧಿಕಾರಿಗಳು ವಿಶೇಷ ಗಮನ ಹರಿಸಿ ತನಿಖೆ ನಡೆಸಿದಾಗ ಸತ್ಯಾಸತ್ಯತೆಯ ವಿಷಯ ಬಯಲಾಗಿದೆ.

Drugs and mobile phones still entering mangaluru Jail amidst tight security

ಜೈಲಿನ 3 ದಿಕ್ಕಿನಿಂದ ಗಾಂಜಾ ಸಾಗಾಟ ನಡೆಯುತ್ತಿದೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಬೆಳಗ್ಗೆ ಮತ್ತು ಸಂಜೆ ಕೈದಿಗಳು ಜೈಲಿನ ಒಳಾಂಗಣದಲ್ಲಿ ಎತ್ತರವಾದ ಕಂಪೌಂಡ್ ಗಳ ಮುಖೇನ ಗಾಂಜಾ ಹಾಗೂ ಮೊಬೈಲ್ ಗಳನ್ನು ಕಂಪೌಂಡ್ ನ ಒಳಗಡೆ ಬೀಸಾಡಲಾಗುತ್ತದೆ.

ಕಾಲೇಜು ಗ್ರೌಂಡ್ ನಿಂದ, ಡಯಟ್ ಸೇರಿದಂತೆ 3 ಕಡೆಯಿಂದ ಜೈಲಿನ ಒಳಭಾಗಕ್ಕೆ ಗಾಂಜಾ, ಮೊಬೈಲ್‌ ನ್ನು ಬೀಸಾಡಲಾಗುತ್ತದೆ ಎಂದು ಭದ್ರತಾ ಸಿಬ್ಬಂದಿಗಳೇ ಒಪ್ಪಿಕೊಳ್ಳುತ್ತಾರೆ. ಹಲವು ಬಾರಿ ಇಂತಹವರನ್ನು ಬೆನ್ನಟ್ಟಲಾಗಿದೆ ಎಂದಿದ್ದಾರೆ.

ಇದಲ್ಲದೆ ಜೈಲಿನ ಭದ್ರತಾ ಸಿಬ್ಬಂದಿಗಳು ಜೈಲಿನೊಳಗೆ ಹೋಗುವ ಖೈದಿಗಳ ಸಂಬಂಧಿಕರು, ಅನುಯಾಯಿ ಹೀಗೆ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿದ ವೇಳೆ ಶೂಗಳ ಒಳಗೆ, ಪರ್ಸ್, ಟಿಫಿನ್, ಬುರ್ಖಾದೊಳಗೆ ಹೀಗೆ ನಾನಾ ರೀತಿಯಲ್ಲಿ ಕೈದಿಗಳಿಗೆ ಗಾಂಜಾ ಸಾಗಾಟ ಮಾಡುವುದು ಪತ್ತೆಯಾಗಿದೆ.

ಮಹಿಳಾ ಸಿಬ್ಬಂದಿ ಕೊರತೆ: ನಗರದ ಜೈಲಿನ ಪ್ರಧಾನ ಗೇಟ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದು, ಆದರೆ ಮಹಿಳಾ ಸಿಬ್ಬಂದಿಯೇ ಇಲ್ಲ. ಇದರಿಂದ ಮಹಿಳೆಯರನ್ನು ತಪಾಸಣೆ ಮಾಡುವುದು ಕಷ್ಟವಾಗಿದೆ.

ಒಳಪ್ರವೇಶ ಮಾಡುವ ವೇಳೆ ಮಹಿಳಾ ಹೊಂಗಾರ್ಡ್ ಗಳು ತಪಾಸಣೆ ಮಾಡಿದರೂ ಅವರು ವಿಶೇಷ ತರಬೇತಿ ಪಡೆದವರಲ್ಲದ ಕಾರಣ ನುಣುಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಈ ರೀತಿಯಾಗಿ ನಾನಾ ಕಡೆಗಳಿಂದ ಖೈದಿಗಳಿಗೆ ಗಾಂಜಾ, ಮೊಬೈಲ್ ಸಾಗಾಟ ನಡೆಯುತ್ತಿದೆ ಎನ್ನುವ ಮಾಹಿತಿ ಇದೀಗ ಪೊಲೀಸರಿಗೆ ಲಭಿಸಿದೆ.

ಇದಕ್ಕೆ ಸೂಕ್ತವಾದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+