ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್‌ನಿಂದ ಪರಾರಿ?

ಮಂಗಳೂರು, ಜೂನ್ 08: ಕುಖ್ಯಾತ ಭೂಗತ ರೌಡಿ ರವಿ ಪೂಜಾರಿ ದಕ್ಷಿಣ ಆಫ್ರಿಕಾದ ಸೆನೆಗಲ್‌ನಿಂದ ಪರಾರಿಯಾಗಿರುವ ಬಗ್ಗೆ ಗುಸುಗುಸು ಚರ್ಚೆ ಆರಂಭವಾಗಿದೆ. ಈ ಕುರಿತು ದಟ್ಟ ವದಂತಿ ಹರಡಿದೆ. ಆದರೆ ಪೊಲೀಸ್ ಉನ್ನತ ಮೂಲಗಳ ಪ್ರಕಾರ ಈ ಬಗ್ಗೆ ಇನ್ನೂ ಈ ಮಾಹಿತಿ ದೃಢಪಟ್ಟಿಲ್ಲ.

ಸೆನೆಗಲ್ ಪೊಲೀಸರ ವಶದಲ್ಲಿದ್ದ ರವಿ ಪೂಜಾರಿ, ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಬೇಲ್ ಪಡೆದು ಬಿಡುಗಡೆಹೊಂದಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭವನ್ನೇ ಬಳಸಿಕೊಂಡು ಆತ ಸೆನೆಗಲ್ ನಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಪೊಲೀಸ್ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

Don Ravi Pujari escape from senegal

ಸೆನೆಗಲ್‌ನ ಸ್ಥಳೀಯ 'ಲೆ ಮೊಂಡೆ' ಪತ್ರಿಕೆ ಹಾಗೂ ರಾಷ್ಟ್ರೀಯ ಹಿಂದಿ ಸುದ್ದಿ ವಾಹಿನಿಯೊಂದು ಪಾತಕಿ ಪರಾರಿಯಾಗಿರುವ ವದಂತಿ ಹರಡಿರುವ ಬಗ್ಗೆ ವರದಿ ಮಾಡಿದೆ. ವದಂತಿಯ ಸತ್ಯಾಸತ್ಯತೆ ತಿಳಿಯಲು ಕೇಂದ್ರ ಸರ್ಕಾರದ ನೆರವು ಕೋರಲಾಗುವುದು. ಬಳಿಕವಷ್ಟೇ ಘಟನೆಯ ಬಗ್ಗೆ ಸ್ಪಷ್ಟ ಚಿತ್ರ ದೊರೆಯಲು ಸಾಧ್ಯ ಎಂದು ರಾಜ್ಯ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+