ಜೀವನ ಕಟ್ಟಿಕೊಟ್ಟ ಜೆಸಿಬಿಯೇ ಈ ನವಜೋಡಿಯ ಮದುವೆ ದಿಬ್ಬಣ!

Recommended Video

      ಮಂಗಳೂರಿನ ಈ ವಧು ವರರಿಗೆ ಜೆಸಿಬಿಯೇ ಮಾಡುವೆ ದಿಬ್ಬಣ

      ಮಂಗಳೂರು ಜೂನ್ 18: ಮದುವೆ ಎಂಬುದು ಪ್ರತಿಯೊಬ್ಬರ ಜೀವನ ಪಯಣದ ಪ್ರಮುಖ ಘಟ್ಟ. 'ಮದುವೆ ' ಎಂಬ ಈ ಮೂರಕ್ಷರದ ಪದದ ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಪರಿಕಲ್ಪನೆಗಳಿರುತ್ತವೆ. ತಮ್ಮದೇ ಚಿಂತನೆ, ಕನಸುಗಳಿರುತ್ತವೆ. ಜೀವನದ ಈ ಪ್ರಮುಖ ಘಟ್ಟವನ್ನು ಹೇಗೆ ಪ್ರವೇಶಿಸಬೇಕು ಎಂಬುದರ ಬಗ್ಗೆ ಮನಸ್ಸೆಂಬ ಪುಟ್ಟ ಗೂಡಲ್ಲಿ ಕನಸೊಂದು ಅರಳಿರುತ್ತದೆ. ಆದರೆ ಕೆಲವರಿಗೆ ಮಾತ್ರ ತಾವು ಕಂಡ ಕನಸಂತೆ ಮದುವೆಯಾಗಲು ಸಾಧ್ಯವಾಗುತ್ತದೆ.

      ಪ್ರಪಂಚದಲ್ಲಿ ಚಿತ್ರವಿಚಿತ್ರ ರೀತಿಯಲ್ಲಿ ಮದುವೆಯಾದ, ಮದುವೆಯ ದಿಬ್ಬಣ ಹೊರಟ ನಿದರ್ಶನಗಳು ನಮ್ಮ ಮುಂದಿವೆ. ಆದರೆ ಜೆಸಿಬಿ ಮೇಲೆ ದಿಬ್ಬಣ ಹೊರಟಿದ್ದು ಕಂಡಿದ್ದಿರಾ? ಇಂತಹದೊಂದು ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

      Crazy wedding in Puttur, married couple appear in JCB for wedding

      ಮದುವೆ ಎಂಬ ಸಂತೋಷದ ಶುಭ ಘಳಿಗೆಯಲ್ಲಿ ತನಗೆ ಬದುಕು ಕಟ್ಟಿ ಕೊಟ್ಟವರನ್ನು ನೆನಪಿಸೋದು ಸಾಮಾನ್ಯವೇ. ಆದರೆ ಪುತ್ತೂರಿನಲ್ಲೊಬ್ಬರು ಮದುವೆ ಎಂಬ ಜೀವನದ ಪ್ರಮುಖ ಘಟ್ಟ ಪ್ರವೇಶಿಸುವಾಗ ತನಗೆ ಬದುಕು ಕಟ್ಟಿ ಕೊಟ್ಟ ವಾಹನವನ್ನು ಮರೆಯಲೇ ಇಲ್ಲ.

      ಇವರು ತನಗೆ ಜೀವನಕ್ಕೆ ಆಧಾರವಾದ ಜೆಸಿಬಿ ಯಂತ್ರವನ್ನು ತನ್ನ ಮದುವೆಯ ದಿಬ್ಬಣದ ವಾಹನವನ್ನಾಗಿ ಆಯ್ದುಕೊಂಡಿದ್ದರು. ಕಳೆದ ಹಲವು ವರ್ಷಗಳಿಂದ ಇದೇ ಜೆಸಿಬಿಯಲ್ಲಿ ದುಡಿದ ಗಳಿಕೆಯಲ್ಲೇ ಜೀವನ ನಿರ್ವಹಿಸುತ್ತಿದ್ದ ಪುತ್ತೂರಿನ ಸಂಟ್ಯಾರು ನಿವಾಸಿ ಚೇತನ್ ಈ ರೀತಿ ಜೆಸಿಬಿಯಲ್ಲಿ ದಿಬ್ಬಣ ಹತ್ತಿದವರಾಗಿದ್ದಾರೆ.

      Crazy wedding in Puttur, married couple appear in JCB for wedding

      ತಿಂಗಳಾಡಿ ಸಮೀಪದ ಬೋಳೋಡಿಯ ಯುವತಿ ಮಮತಾ ಅವರೊಂದಿಗೆ ಇಂದು ಹಸಮಣೆಗೆ ಏರಿದ ಚೇತನ್ ಮದುವೆ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ಸೀದಾ ತನ್ನ ಮದುಮಗಳೊಂದಿಗೆ ಜೆಸಿಬಿ ಹತ್ತಿದ್ದಾರೆ.

      ಹಿತರೆಲ್ಲಾ ಸೇರಿ ಜೆಸಿಬಿಯನ್ನು ಹೂ ಹಾಗೂ ಇತರ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿದ್ದರು. ಜೆಸಿಬಿ ಹತ್ತಿ ಬಂದ ವಧು ವರರನ್ನು‌ ದಾರಿ ಯುದ್ದಕ್ಕೂ ಜನ ನಿಬ್ಬೆರಗಾಗಿ ನೋಡಿದ್ದೇ ನೋಡಿದ್ದು. ಆದರೆ ಚೇತನ್ ಗೆ ಮಾತ್ರ ಬದುಕು ಕಟ್ಟಿಕೊಟ್ಟ ಈ ಜೆಸಿಬಿ ಯಾವುದೇ ಐಷಾರಾಮಿ‌ ಕಾರಿಗೆ ಕಡಿಮೆ ಎಂದು ಅನಿಸಲೇ ಇಲ್ಲ. ಅವರ ಪಾಲಿಗೆ ಅದೇ ಐಷಾರಾಮಿ ಕಾರಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+