ಜೋಮ್ಯಾಟೋ ವಿತರಕಿಗೆ ಕಾಂಗ್ರೆಸ್ ಕೊಟ್ಟಿತಲ್ಲ ಮಹಾನಗರ ಪಾಲಿಕೆ ಟಿಕೆಟ್!

ಮಂಗಳೂರು, ನವೆಂಬರ್ 10: ಚುನಾವಣೆ ಅಂದರೆ ಹಣ, ಹಣ ಇದ್ದೋರಿಗಷ್ಟೇ ರಾಜಕಾರಣ ಅನ್ನೋ ಮಾತಿದೆ. ಆದರೆ, ಈಗ ಟ್ರೆಂಡ್ ಚೇಂಜ್ ಆಗಿದೆ. ಮಂಗಳೂರಿನಲ್ಲಿ ಹೊಸ ಸಂಪ್ರದಾಯಕ್ಕೆ ಕಾಂಗ್ರೆಸ್ ನಾಂದಿ ಹಾಡಿದೆ. ಒಂದು ಕಾಲದಲ್ಲಿ ಪಾಲಿಕೆ ತಪ್ಪಿನಿಂದ ಕಷ್ಟಕ್ಕೆ ತುತ್ತಾಗಿದ್ದ ಮಹಿಳೆಗೆ ಇದೀಗ ಪಾಲಿಕೆ ಚುನಾವಣೆಯ ಟಿಕೆಟ್ ಸಿಕ್ಕಿದೆ.

ವಿಧಾನಸಭೆ ಚುನಾವಣೆ ಅಷ್ಟೇ ಅಲ್ಲ. ನಗರಸಭೆ ಯಾಕೆ, ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರೀಯ ಪಕ್ಷಗಳ ಟಿಕೆಟ್ ಬೇಕಾದ್ರೂ ಕೂಡಾ ಹಣ ನೀಡಬೇಕು ಎನ್ನುವ ನಂಬಿಕೆ ಜನರಲ್ಲಿದೆ. ಆದರೆ, ಇದ್ಯಾವುದೂ ಕೂಡಾ ಮಂಗಳೂರಿನಲ್ಲಿ ಲೆಕ್ಕಕ್ಕೆ ಇಲ್ಲ. ಕಾಂಗ್ರೆಸ್ ಅಂಥದೊಂದು ಹೊಸ ಸಂಪ್ರದಾಯವನ್ನು ಬೆಳೆಸಿದೆ.

ಜನಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಒಬ್ಬ ಮಹಿಳೆಗೆ ಇಂದು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವ ಅವಕಾಶ ದಕ್ಕಿದೆ. ಹೊಟ್ಟೆಯ ಚೀಲ ತುಂಬಿಸಿಕೊಳ್ಳಲು ನಿತ್ಯ ಬೀದಿ ಬೀದಿ ಅಲೆಯುತ್ತಾ ಕೆಲಸ ಮಾಡುತ್ತಿದ್ದ ಮಹಿಳೆ ಇಂದು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುತ್ತಿರುವ ಸ್ಪರ್ಧಿಯಾಗಿದ್ದಾರೆ.

ಜೋಮ್ಯಾಟೋ ವಿತರಕಿಗೆ ಕಾಂಗ್ರೆಸ್ ಟಿಕೆಟ್

ಜೋಮ್ಯಾಟೋ ವಿತರಕಿಗೆ ಕಾಂಗ್ರೆಸ್ ಟಿಕೆಟ್

ಜೋಮ್ಯಾಟೋ ಆಹಾರ ವಿತರಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೇಘನಾ ಎಂಬ ಮಹಿಳೆಗೆ ಇದೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವತಃ ಕಾಂಗ್ರೆಸ್ ನಾಯಕರೇ ಮೇಘನಾರಿಗೆ ಟಿಕೆಟ್ ಕೊಟ್ಟಿದ್ದಾರೆ.

ರಸ್ತೆ ಗುಂಡಿಗೆ ಬಿದ್ದ ಮಹಿಳೆ 'ಕೈ'ಗೆ ಸಿಗುತ್ತಾ ಅಧಿಕಾರ?

ರಸ್ತೆ ಗುಂಡಿಗೆ ಬಿದ್ದ ಮಹಿಳೆ 'ಕೈ'ಗೆ ಸಿಗುತ್ತಾ ಅಧಿಕಾರ?

ಬೆಂಗಳೂರಿನಲ್ಲಿ ರಸ್ತೆಗಳು ಅದೆಂಥಾ ಸ್ಥಿತಿಯಲ್ಲಿವೆ ಅಂತಾ ಎಲ್ಲರಿಗೂ ಗೊತ್ತಿದೆ. ಕರಾವಳಿ ಭಾಗದ ಮುಖ್ಯ ನಗರ ಎನಿಸಿರುವ ಮಂಗಳೂರಿನಲ್ಲೂ ರಸ್ತೆಗಳದ್ದೇ ಸೇಮ್ ಟು ಸೇಮ್ ಅದೇ ಕಥೆ. ಹೀಗೆ ಹದಗೆಟ್ಟ ರಸ್ತೆಗಳಿಂದ ಒಂದು ಕಾಲದಲ್ಲಿ ಇದೇ ಮೇಘನಾ ಆಸ್ಪತ್ರೆ ಸೇರುವಂತೆ ಆಗಿತ್ತು.

ಕಾಂಗ್ರೆಸ್ ಆಫರ್ ತಿರಸ್ಕರಿಸಲು ಮನಸ್ಸಾಗಲಿಲ್ಲ

ಕಾಂಗ್ರೆಸ್ ಆಫರ್ ತಿರಸ್ಕರಿಸಲು ಮನಸ್ಸಾಗಲಿಲ್ಲ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಆಫರ್ ಕೊಟ್ಟಿದೆ. ಒಂದು ರಾಷ್ಟ್ರೀಯ ಪಕ್ಷದಿಂದ ನನಗೆ ಟಿಕೆಟ್ ಸಿಗುತ್ತೆ ಎಂದು ನಾನು ಊಹಿಸಿರಲೇ ಇಲ್ಲ ಎಂದು ಮೇಘನಾ ತಿಳಿಸಿದರು. ಕಾಂಗ್ರೆಸ್ ನೀಡಿರುವ ಆಫರ್ ನನ್ನು ಬೇಡ ಎನ್ನಲು ನನಗೆ ಮನಸ್ಸು ಆಗಲೇ ಇಲ್ಲ.

ವಾರ್ಡ್ ನಂಬರ್ 28; ಸಮಸ್ಯೆಗಳು 108

ವಾರ್ಡ್ ನಂಬರ್ 28; ಸಮಸ್ಯೆಗಳು 108

ಮಂಗಳೂರಿನ 28ನೇ ವಾರ್ಡ್ ನಿಂದ ಸ್ಪರ್ಧಿಸಲು ಕಾಂಗ್ರೆಸ್ ಮೇಘನಾ ಅವರಿಗೆ ಟಿಕೆಟ್ ನೀಡಿದೆ. ಈ ಬಗ್ಗೆ ಮಾತನಾಡಿರುವ ಮೇಘನಾ, ತಾವು ಸ್ಪರ್ಧಿಸಿರುವ ವಾರ್ಡ್ ನಲ್ಲಿ ಸಮಸ್ಯೆಗಳು ಸಾಕಷ್ಟಿವೆ ಎಂದಿರುವ ಮೇಘನಾ, ತಾವು ಗೆದ್ದಲ್ಲಿ ಅವುಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+