ಆಟೋದಲ್ಲಿ ಹೆಚ್ಚು ದರ ಕೇಳಿದರೆ ಎಸ್‌ಎಂಎಸ್ ಮಾಡಿ
ಮಂಗಳೂರು, ಫೆ. 11 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ಮತ್ತು ಖಾಸಗಿ ಬಸ್ಸುಗಳಲ್ಲಿ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಿದರೆ, ಎಸ್‌ಎಂಎಸ್ ಮೂಲಕ ದೂರು ನೀಡಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಮತ್ತು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸಂಚರಿಸುವ ಆಟೋ ಹಾಗೂ ಖಾಸಗಿ ಬಸ್ಸುಗಳ ಪ್ರಯಾಣ ದರವನ್ನು ಸಾರಿಗೆ ಪ್ರಾಧಿಕಾರವು ಜ.12ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ, ಹೊಸ ದರಪಟ್ಟಿ ಪ್ರಕಟಿಸಿದೆ. ಆದರೆ, ಆಟೋ ಚಾಲಕರು ಮತ್ತು ಖಾಸಗಿ ಬಸ್ಸಿನವರು ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಹಿನ್ನಲೆಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. [ಮಂಗಳೂರು : ಆಟೋ ದರ ಇಳಿಕೆ, ಡಿಸಿ ಸಮರ್ಥನೆ]

ಈಗಾಗಲೇ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಾಧಿಕಾರಕ್ಕೆ ಸಾರ್ವಜನಿಕರು ದೂರು ಸಲ್ಲಿಸುತ್ತಿದ್ದಾರೆ. ಆಟೋ ರಿಕ್ಷಾ ಚಾಲಕರು ಹೆಚ್ಚಿನ ದರ ನೀಡದಿದ್ದರೆ, ಪ್ರಯಾಣಿಕರು ಹೇಳುವ ಸ್ಥಳಗಳಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಸಹಾಯವಾಣಿ ಮತ್ತು ಎಸ್‌ಎಂಎಸ್ ಮೂಲಕ ದೂರು ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. [ಆಟೋ ದರದ ಬಗ್ಗೆ ಮಾಹಿತಿ ಬೇಕೆ?]
ಪ್ರಯಾಣಿಕರೊಂದಿಗೆ ಆಟೋ ಚಾಲರು ಅಸಭ್ಯವಾಗಿ ವರ್ತಿಸಿದರೆ, ಬಸ್ ಮತ್ತು ಆಟೋಗಳಲ್ಲಿ ಹೆಚ್ಚಿನ ದರವನ್ನು ಕೇಳಿದರೆ. ಟೋಲ್ ಫ್ರೀ ಸಂಖ್ಯೆ 1077 ಅಥವಾ ಮೊಬೈಲ್ ಸಂಖ್ಯೆ 9481802019ಗೆ ಎಸ್‌ಎಂಎಸ್ ಕಳಿಸುವ ಮೂಲಕ ಜನರು ದೂರು ನೀಡಬಹುದಾಗಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಜ. 12ರ ಆದೇಶದಂತೆ ಆಟೋ ರಿಕ್ಷಾ ದರಗಳನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಅದರಂತೆ ಆಟೋದಲ್ಲಿ ಕನಿಷ್ಠ ದರದಲ್ಲಿ 5 ರೂ. ಕಡಿಮೆ ಮಾಡಲಾಗಿದೆ. ರೂ.25 ಇದ್ದ ದರವನ್ನು 20 ರೂ.ಗಳಿಗೆ ಇಳಿಕೆ ಮಾಡಲಾಗಿದೆ.












Click it and Unblock the Notifications