ದಕ್ಷಿಣ ಕನ್ನಡ ವಿಶೇಷ; ಕಾಡೇ ಕೋಳಿಗಳ ಸಾಕಿ ಯಶಸ್ವಿಯಾದ ಕೃಷಿಕ

ಮಂಗಳೂರು, ಡಿಸೆಂಬರ್ 26; ಉದ್ಯಮ ಹಲವು ಮಂದಿಯ ಕನಸಿನ ಕೂಸಾದರೆ ಇನ್ನೂ ಹಲವು ಮಂದಿಗೆ ಆಕಸ್ಮಿಕವಾಗಿ ಒದಗಿದ ಅವಕಾಶ. ಮಗಳ ಆರೋಗ್ಯಕ್ಕಾಗಿ ಕಾಡೇ ಕೋಳಿ ಅಂದರೆ ಕವಜಗಳನ್ನು ಸಾಕಿದ ಕೃಷಿಕ ಈಗ ಸುತ್ತಮುತ್ತಲಿನ ಗ್ರಾಮಗಳಿಗೆ ಆರೋಗ್ಯಕರ ಕಾಡೇ ಕೋಳಿಯ ಪೂರೈಕೆ ಮಾಡುವ ಯಶಸ್ವಿ ಉದ್ಯಮಿಯಾಗಿ ಬೆಳೆದುನಿಂತ ಸ್ಫೂರ್ತಿದಾಯಕ ಸನ್ನಿವೇಶಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಸಾಕ್ಷಿಯಾಗಿದೆ.

ಈ ಯಶಸ್ವಿ ಉದ್ಯಮಿ, ಕೃಷಿಕನ ಹೆಸರು ಬಿಜು ಪರಪಳ್ಳಿ. ಕೇರಳದ ಮೂಲದ ಬಿಜು ಬೆಳ್ತಂಗಡಿ ತಾಲೂಕಿನ ದೇವಗಿರಿಯ ಅಂಬಟೆಮಲೆಯಲ್ಲಿ ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದ ಮಗಳ ಆರೋಗ್ಯಕ್ಕಾಗಿ ಕೇರಳದಿಂದ ಕಾಡೇ ಕೋಳಿಗಳನ್ನು ಮೊದಲು ಬಿಜು ಮನೆಗೆ ತಂದಿದ್ದರು.

ಈ ಕೋಳಿಗಳ ಮೊಟ್ಟೆ ಸೇವಿಸಿದ ಬಳಿಕ ಮಗಳ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿತ್ತು. ಆ ಬಳಿಕ ಈ ಕೋಳಿಯದ್ದೇ ಯಾಕೆ ಉದ್ಯಮ ಮಾಡಬಾರದು? ಅಂತಾ ಬಿಜು 400 ಕಾಡೇ ಕೋಳಿಗಳನ್ನು ತಂದು ಉದ್ಯಮ ಆರಂಭಿಸಿದ್ದಾರೆ. ಸಣ್ಣ ಗಾತ್ರದ ಈ ಕೋಳಿಗಳ ಮೊಟ್ಟೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು, ಹಲವು ರೋಗಗಳಿಗೆ ರಾಮಬಾಣವಾಗಿದೆ‌.

ಬಿಜು ತನ್ನ ಮನೆಯ ಬಳಿಯೇ ಈ ಕಾಡೇ ಕೋಳಿಗಳ ವಿಶಾಲ ಫಾರ್ಮ್ ನಿರ್ಮಿಸಿದ್ದಾರೆ. ಈ ಫಾರ್ಮ್ ನಲ್ಲಿ 400 ಕಾಡೇ ಕೋಳಿಗಳನ್ನು ಬಿಜು ಸಾಕುತ್ತಿದ್ದಾರೆ. ಕೇವಲ ಒಂದೇ ವಾರದಲ್ಲಿ ಮೊಟ್ಟೆಗಳನ್ನು ಹಾಕುವ ಈ ಕಾಡೇ ಕೋಳಿಗಳು ಪ್ರತಿನಿತ್ಯ ಮೊಟ್ಟೆ ನೀಡುತ್ತದೆ. ಕಪ್ಪು ಬಿಳುಪಿನ ಈ ಮೊಟ್ಟೆಗಳು ಅಲರ್ಜಿ, ಅಸ್ತಮಾ, ಹೃದಯ ಸಂಬಂಧಿ ಖಾಯಿಲೆ, ಶುಗರ್ ಹೀಗೆ ಹಲವಾರು ಕಾಯಿಲೆಗಳನ್ನು ನಿವಾರಣೆ ಮಾಡುತ್ತದೆ.

330 ರಿಂದ 350 ಮೊಟ್ಟೆ

330 ರಿಂದ 350 ಮೊಟ್ಟೆ

ಪ್ರತಿನಿತ್ಯ ಮೊಟ್ಟೆಯನ್ನು ನೀಡುವ ಈ ಕಾಡೇ ಕೋಳಿಗಳಿಂದ ಬಿಜು ಪರಪ್ಪಳ್ಳಿ ಪ್ರತಿನಿತ್ಯ ಸುಮಾರು 330 ರಿಂದ 350 ಮೊಟ್ಟೆಗಳನ್ನು ಪಡೆಯುತ್ತಾರೆ. ಈ ಕಾಡೇ ಕೋಳಿಗಳ ಆಹಾರ ಹುಲ್ಲು, ಎಲೆ, ಫೀಡ್ ಜೊತೆಗೆ ಹಲವಾರು ವಿಧದ ವಿಟಮಿನ್ ಯುಕ್ತ ಸಸ್ಯಗಳನ್ನು ಆಹಾರವಾಗಿ ನೀಡಲಾಗುತ್ತದೆ.

ಕಾಡೇ ಕೋಳಿಗಳ ಸಾಕಾಣಿಕೆ

ಕಾಡೇ ಕೋಳಿಗಳ ಸಾಕಾಣಿಕೆ

ಈ ಕಾಡೇ ಕೋಳಿಗಳ ಮೊಟ್ಟೆಗಾಗಿ ಸ್ಥಳೀಯ ಗ್ರಾಮಗಳಿಂದ ಜನರು ಬಿಜು ಮನೆಗೆ ಬರುತ್ತಾರೆ. ಈ ಕಾಡೇ ಕೋಳಿಗಳ ಸಾಕಾಣೆಯನ್ನೇ ಉದ್ಯಮವನ್ನಾಗಿಸಿದ ಬಿಜು ಇವುಗಳ ಮೊಟ್ಟೆಯನ್ನು ಸ್ಥಳೀಯ ಊರುಗಳಾದ ಸೋಮಂದಡ್ಕ, ಅಣಿಯೂರು, ಕಕ್ಕಿಂಜೆ, ಕಾರ್ಯತಡ್ಕದ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಒಂದು ಮೊಟ್ಟೆಯ ಬೆಲೆ ಕೇವಲ 3 ರೂಪಾಯಿ ಆಗಿದೆ.

60 ರಿಂದ 70 ರೂ. ದರವಿದೆ

60 ರಿಂದ 70 ರೂ. ದರವಿದೆ

ಕೇವಲ ಮೊಟ್ಟೆಗಳು ಮಾತ್ರವಲ್ಲದೆ ಕಾಡೇ ಕೋಳಿಗಳನ್ನೂ ಬಿಜು ಮಾರಾಟ ಮಾಡುತ್ತಿದ್ದಾರೆ. ಒಂದು ಕೋಳಿಗೆ 60 ರಿಂದ 70 ರೂಪಾಯಿ ದರವನ್ನು ಹಾಕುತ್ತಾರೆ. ಈ ಕೋಳಿ ಮತ್ತು ಮೊಟ್ಟೆಗೆ ಭಾರೀ ಬೇಡಿಕೆ ಕಂಡುಬರುತ್ತಿದ್ದು ಕೇರಳದಿಂದ ಮತ್ತಷ್ಟು ಕೋಳಿಗಳನ್ನು ತರುವ ಯೋಚನೆ ಬಿಜು ಪರಪ್ಪಳ್ಳಿ ಅವರಲ್ಲಿದೆ.

ಉದ್ಯಮದ ಬಗ್ಗೆ ಬಿಪು ಪರಪ್ಪಳ್ಳಿ ಮಾತು

ಉದ್ಯಮದ ಬಗ್ಗೆ ಬಿಪು ಪರಪ್ಪಳ್ಳಿ ಮಾತು

ತನ್ನ ಈ ಉದ್ಯಮದ ಬಗ್ಗೆ ಮಾತನಾಡಿದ ಬಿಜು ಪರಪ್ಪಳ್ಳಿ, "ಈ ಕಾಡೇ ಕೋಳಿ ಉದ್ಯಮ ಮಾಡುವ ಉದ್ದೇಶ ಮೊದಲು ಇರಲಿಲ್ಲ. ಮಗಳ ಆರೋಗ್ಯ ಸಮಸ್ಯೆಯ ಹಿನ್ನಲೆಯಲ್ಲಿ ಈ ಕೋಳಿಯ ಮೊಟ್ಟೆಗಳನ್ನು ನೀಡಲು ಆರಂಭಿಸಿದೆ. ಅಸ್ತಮಾ ನಿಯಂತ್ರಣಕ್ಕೆ ಬಂದ ಅನುಭವವಾಯಿತು. ಶ್ವಾಸದ ಸಮಸ್ಯೆ, ದಮ್ಮು ಕಟ್ಟುವುದು ನಿಯಂತ್ರಣವಾಯಿತು. ಆ ಬಳಿಕ ಇದನ್ನೇ ಯಾಕೆ ಉದ್ಯಮವನ್ನಾಗಿ ಮಾಡಬಾರದು? ಅಂತಾ ಯೋಚನೆ ಮಾಡಿದೆ. ಕೇರಳದಿಂದ 400 ಕೋಳಿಗಳನ್ನು ತಂದು ಫಾರ್ಮ್ ಮಾಡಿದೆ. ಸದ್ಯ ಪ್ರತಿನಿತ್ಯ ಸುಮಾರು 350 ಮೊಟ್ಟೆಗಳು ಲಭ್ಯವಾಗುತ್ತಿದೆ" ಎಂದರು.

ಸಣ್ಣಗಾತ್ರದ ಮೊಟ್ಟೆಗಳು

ಸಣ್ಣಗಾತ್ರದ ಮೊಟ್ಟೆಗಳು

"ಈ ಮೊಟ್ಟೆಗಳು ಕಪ್ಪು ಬಿಳುಪುನಿಂದ ಕೂಡಿದ್ದು, ಸಣ್ಣ ಗಾತ್ರವನ್ನು ಹೊಂದಿರುತ್ತದೆ. ಈ ಮೊಟ್ಟೆ ಹಲವು ರೋಗಗಳಿಗೆ ಔಷಧ ವಾಗುವುದರ ಜೊತೆಗೆ ಚಿಕ್ಕ ಮಕ್ಕಳಿಗೆ ಪೌಷ್ಠಿಕಾಂಶವನ್ನೂ ಒದಗಿಸುತ್ತದೆ. ಮನೆಗೆ ಬಂದು ಜನರು ಈ ಮೊಟ್ಟೆಗಳನ್ನು ಖರೀದಿ ಮಾಡುತ್ತಾರೆ" ಅಂತಾ ಬಿಜು ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+