ಅಮೆರಿಕದಲ್ಲಿ ಸುರತ್ಕಲ್‌ ಸೋದರಿಯರ ಸಾಧನೆ

ಮಂಗಳೂರು, ಆ, 19 : ಅಮೆರಿಕದ ಗ್ವಾಟೆಮಾಲಾದಲ್ಲಿ ನಡೆದ 'ಪಾನ್‌ ಅಮೆರಿಕ ಬ್ಯಾಡ್ಮಿಂಟನ್‌ ಪಂದ್ಯಾವಳಿ'ಯಲ್ಲಿ ಸುರತ್ಕಲ್ ಮೂಲದ ಸಹೋದರಿಯರು ನಾಲ್ಕು ಪದಕಗಳನ್ನು ಬಾಚಿಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾ ನಿವಾಸಿಗಳಾಗಿರುವ ನೇಹಾ ಶೆಟ್ಟಿ(11) ಮತ್ತು ನೇತ್ರಾ ಶೆಟ್ಟಿ(10) ಸಹೋದರಿಯರು ಉತ್ತಮ ಆಟ ಪ್ರದರ್ಶಿಸಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

durtkal girls

11 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ನೇತ್ರಾ ಶೆಟ್ಟಿ ಚಿನ್ನದ ಪದಕ, ಮಿಕ್ಸೆಡ್ ಡಬಲ್ಸ್‌ನಲ್ಲಿ ಚಿನ್ನದ ಪದಕ ಮತ್ತು ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಪಂದ್ಯಾವಳಿಯಲ್ಲಿ ಕೆನಡಾ, ಬ್ರೆಝಿಲ್, ಮೆಕ್ಸಿಕೋ, ಅರ್ಜೆಂಟೀನಾ, ಚಿಲೆ, ಜಮೈಕಾ ಮತ್ತಿತರ ದೇಶಗಳಿಂದ ಒಟ್ಟು 17 ಮಂದಿ ಸ್ಪರ್ಧೆ ಮಾಡಿದ್ದರು.

ನೇಹಾ ಮತ್ತು ನೇತ್ರಾ ಡಾ. ಅನುಪಮಾ ಮತ್ತು ಹರೀಶ್ ಶೆಟ್ಟಿ ಅವರ ಪುತ್ರಿಯರಾಗಿದ್ದು ಆಶಾ ಮತ್ತು ಡಾ ಟಿ. ರಾಮನಾಥ ಶೆಟ್ಟಿ, ಡಾ ಕೆ. ಸದಾಶಿವ ನ್ಯಾಕ್ ಅವರ ಮೊಮ್ಮಕ್ಕಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+