ಬಂಟ್ವಾಳ ಹೊರವಲಯದಲ್ಲಿ ಗ್ಯಾಂಗ್ ವಾರ್: ಇಬ್ಬರ ಸಾವು

ಮಂಗಳೂರು, ಸೆಪ್ಟೆಂಬರ್ 26: ಮಂಗಳೂರು ಹೊರವಲಯದ ಬಂಟ್ವಾಳದ ಪರಂಗಿಪೇಟೆ ಎಂಬಲ್ಲಿ ರೌಡಿ ಶೀಟರ್ ಗಳಿದ್ದ ಕಾರಿನ ಮೇಲೆ ವಿರೋಧಿ ಪಾಳಯದವರು ನಡೆಸಿದ ಏಕಾಏಕಿ ದಾಳಿಯಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದಾರೆ. ಈ ಘಟನೆ ಫರಂಗಿಪೇಟೆಯ ಗಾರ್ಡನ್ ಹೋಟೆಲ್ ಬಳಿ ಸೆ. 25ರ ರಾತ್ರಿ ನಡೆದಿದೆ.

ಮೃತರನ್ನು ಮಂಗಳೂರು ಹೊರವಲಯದ ಅಡ್ಯಾರ್ ನಿವಾಸಿ ಝಿಯಾ ಹಾಗೂ ಫಯಾಝ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅನಿಸ್, ಮುಶ್ತಾಕ್ , ಫಝಲ್ ಎಂಬವರು ಗಂಭಿರವಾಗಿ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Attack on rowdy sheeters kills 2 in Bantwala

ಕಳೆದ ರಾತ್ರಿ ಝಿಯಾ ಹಾಗು ಫಯಾಝ್ ಸೇರಿದಂತೆ 5 ಜನರ ತಂಡ ಸ್ವಿಫ್ಟ್ ಕಾರಿನಲ್ಲಿ ಪರಂಗಿಪೇಟೆಯ ಗಾರ್ಡನ್ ಹೋಟೆಲ್ ನತ್ತ ಬಂದಿದೆ . ಈ ಕಾರನ್ನು ಹಿಂಬಾಲಿಸಿಕೊಂಡು ಬಂದ ಇನ್ನೋವಾ ಕಾರಿನಲ್ಲಿದ್ದ ದುಷ್ಕರ್ಮಿಗಳ ತಂಡ ಸ್ವಿಫ್ಟ್ ಕಾರಿನಲ್ಲಿದ್ದವರ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ.

Attack on rowdy sheeters kills 2 in Bantwala

ಈ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫಯಾಝ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಝಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಮೃತಪಟ್ಟ ಇಬ್ಬರೂ ಈ ಹಿಂದೆ ಕಣ್ಣೂರಿನಲ್ಲಿ ನಡೆದಿದ್ದ ಹತ್ಯೆಯೊಂದರಲ್ಲಿ ಭಾಗಿಯಾಗಿದ್ದವರೆಂದು ಪೊಲೀಸರು ಅನುಮಾನಿಸಿದ್ದಾರೆ. 2014ರ ಅಕ್ಟೋಬರ್ 31ರಂದು ಕಣ್ಣೂರಿನಲ್ಲಿ ಇಜಾಜ್ ಎಂಬುವರನ್ನು ಈ ಗ್ಯಾಂಗ್ ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿಯೇ ಸೆ. 25ರ ದಾಳಿ ನಡೆದಿದೆ ಎಂದು ಪೊಲೀಸರು ಅನುಮಾನಿಸಿರುವುದಾಗಿ ಕೆಲ ವರದಿಗಳು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+