ಬಂಟ್ವಾಳದಲ್ಲಿ ಮುಂದುವರೆದ ಕಾಂಗ್ರೆಸ್ ವಿರೋಧಿ ಪೊಸ್ಟರ್ ವಾರ್

ಮಂಗಳೂರು ಏಪ್ರಿಲ್ 28: ರಾಜ್ಯದ ಕರಾವಳಿಯಲ್ಲಿ ಕಾಂಗ್ರೆಸ್ ವಿರುದ್ಧದ ಪೋಸ್ಟರ್ ವಾರ್ ವ್ಯಪಕವಾಗಿ ಮುಂದುವರೆದಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ದ ಮನೆಯೊಳಗೆ ಪ್ರವೇಶ ಇಲ್ಲ ಎಂಬ ಬೋರ್ಡ್ ರಾರಾಜಿಸ ತೊಡಗಿವೆ. ಬಂಟ್ವಾಳದ ಕನ್ಯಾನದಲ್ಲಿ ಆರಂಭ ವಾಗಿದ್ದ ಈ ಪೊಸ್ಟರ್ ವಾರ್ ಇತರೆಡೆಗೂ ವ್ಯಾಪಿಸಿದೆ.

ಕನ್ಯಾನ ದಲ್ಲಿ ನೂರು, ಇನ್ನೂರು ಮನೆಗಳಿಗೆ ಸೀಮಿತವಾಗಿದ್ದ ಈ ಕಾಂಗ್ರೆಸ್ ವಿರೋಧಿ ಪೊಸ್ಟರ್ ವಾರ್ ಈಗ ಇತರೆಡೆಗೂ ಹಬ್ಬಿರುವುದು ಕಾಂಗ್ರೆಸ್ ಗೆ ತಲೆನೋವಾಗಿ ಪರಿಣಮಿಸಿದೆ.

Assembly Elections 2018 : Anti- Congress poster war spreading in Bantwal
ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮನೆಗಳ ಮುಂದೆ ಈ ರೀತಿಯ ಪೊಸ್ಟರ್ ಗಳು ಕಂಡುಬಂದಿವೆ. ಇಂದು ಹಿಂದೂ ಮನೆ .ಬಡ ಮಕ್ಕಳ ಅನ್ನ ಕದ್ದವರಿಗೆ ಮತ್ತು ಅಲ್ಲಾಹುವಿನ ಕೃಪೆಯಿಂದ ಗೆದ್ದ ಕಾಂಗ್ರೆಸ್ ಪಕ್ಷದವರಿಗೆ ಈ ಮನೆಗೆ ಪ್ರವೇಶ ಇಲ್ಲ ಎಂದು‌ ಪೋಸ್ಟರ್ ಹಾಕಲಾಗಿದೆ.

ಈ ಹಿಂದೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕನ್ಯಾನ ಗ್ರಾಮದಲ್ಲಿ ಪೋಸ್ಟರ್ ವಾರ್ ಆರಂಭವಾದಾಗ ಪೋಸ್ಟರ್ ಹಾಕಿದ ಮನೆಯವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ಜನ ಇಡೀ ಬಂಟ್ವಾಳ ತಾಲೂಕಿನ ಹಲವೆಡೆ ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಪೋಸ್ಟರ್ ಅಂಟಿಸಿ ಪೊಲೀಸರಿಗೆ ಮತ್ತು ಸಚಿವ ರಮಾನಾಥ್ ರೈ ವಿರುದ್ದ ಸವಾಲೆಸದಿದ್ದಾರೆ.

ಈ ಹಿಂದೆ ಬಂಟ್ವಾಳದ ಕನ್ಯಾನ ಗ್ರಾಮದ ಅನೇಕರ ಮನೆಗಳಲ್ಲಿ 'ಇದು ಹಿಂದೂಗಳ ಮನೆ, ಕಾಂಗ್ರೆಸ್ಸಿಗರಿಗೆ ದೂರವಿರಿ' ಎಂಬ ಪೋಸ್ಟರ್ ಕಂಡು ಬಂದಿತ್ತು. ಈ ಪೊಸ್ಟರ್ ಅಂಟಿಸುವ ಮೂಲಕ ಬಲವಂತದ ಮತಾಂತರ ಹಾಗೂ ಅದನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+