ಮಂಗಳೂರು : ಎಂಆರ್‌ಪಿಎಲ್‌ನಲ್ಲಿ ವಿವಿಧ ಹುದ್ದೆಗಳು ಖಾಲಿ
ಮಂಗಳೂರು, ಜ. 20 : ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಕಂಪೆನಿ (ಎಂಆರ್‌ಪಿಎಲ್) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 11.
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 22ರಿಂದ ಫೆಬ್ರವರಿ 11ರ ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪತ್ರಗಳನ್ನು ಅಭ್ಯರ್ಥಿಗಳು ಅಂಚೆ ಮೂಲಕ ಕಳಿಸಬೇಕಾಗುತ್ತದೆ. [ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ]

ಖಾಲಿ ಇರುವ ಹುದ್ದೆಗಳು : ವರ್ಕ್‌ಮೆನ್ (ಕೆಮಿಕಲ್) : 92 ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು. 11,900ರಿಂದ 32,000 ರೂ.ವರೆಗೆ ವೇತನ ಶ್ರೇಣಿ ಇದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್‌ಸಿ (ಪಿಸಿಎಂ) ಅಥವ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮೋ ಪಡೆದಿರಬೇಕು. 2 ವರ್ಷದ ಅನುಭವ ಕಡ್ಡಾಯ. [ಇಂಗ್ಲಿಶ್ ನಲ್ಲಿ ಓದಿ]
ಸಹಾಯಕರು (ಮೆಟಿರಿಯಲ್ಸ್ ) : 4 ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು. 11,900 ರಿಂದ 32,000 ರೂ.ವರೆಗೆ ವೇತನ ಶ್ರೇಣಿ ಇದೆ. ವಿಜ್ಞಾನ, ವಾಣಿಜ್ಯ ವಿಷಯದಲ್ಲಿ ಮೊದಲ ಶ್ರೇಣಿಯಲ್ಲಿ ಪದವಿ ಪಡೆದವರು, ಎಲೆಕ್ಟ್ರಿಕಲ್, ಮ್ಯಾಕಾನಿಕಲ್ ಡಿಪ್ಲೊಮೋ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. 2 ವರ್ಷಗಳ ಅನುಭವ ಕಡ್ಡಾಯ. [ನೇಮಕಾತಿಯ ವಿವರ ಇಲ್ಲಿದೆ]
ಅರ್ಜಿ ಶುಲ್ಕ : ಅರ್ಜಿ ಸಲ್ಲಿಸುವ ಸಾಮಾನ್ಯ, ಓಬಿಸಿ ಅಭ್ಯರ್ಥಿಗಳಿಗೆ 350 ರೂ. ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ "STATE BANK COLLECT" ಮೂಲಕ ಪಾವತಿ ಮಾಡಬೇಕು.
ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಿದ ನಂತರ ಅಭ್ಯರ್ಥಿಗಳು ಸ್ವೀಕೃತಿ ಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಅರ್ಜಿ ಶುಲ್ಕ ತುಂಬಿದಕ್ಕೆ ಸ್ವೀಕೃತಿ ಪತ್ರ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಅನುಭವದ ಪ್ರಮಾಣ ಪತ್ರಗಳನ್ನು ಅಂಚೆ ಮೂಲಕ ಕಳಿಸಬೇಕು.
ಅರ್ಜಿ ಸಲ್ಲಿಸಲು ವಿಳಾಸ : ಮ್ಯಾನೇಜರ್ (ನೇಮಕಾತಿ ವಿಭಾಗ), ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿ., ಕುತ್ತೆತ್ತೂರು (ಅಂಚೆ), ಕಾಟಿಪಾಳ್ಯ, ಮಂಗಳೂರು -575030 ವಿಳಾಸಕ್ಕೆ ಅಂಚೆ ಅಥವ ಕೋರಿಯರ್ ಮೂಲಕ ಮಾತ್ರ ಫೆಬ್ರವರಿ 18ರೊಳಗೆ ಸಲ್ಲಿಸಬೇಕು.












Click it and Unblock the Notifications