ಉದ್ಘಾಟನೆಗೆ ಸಜ್ಜಾದ ಪಿಲಿಕುಳದ 3ಡಿ ತಾರಾಲಯ

ಮಂಗಳೂರು, ಡಿಸೆಂಬರ್ 01 : ಪಿಲಿಕುಳದ ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಶೀಘ್ರದಲ್ಲಿಯೇ 3ಡಿ ತಾರಾಲಯ ಉದ್ಘಾಟನೆಗೊಳ್ಳಲಿದೆ. ದೇಶದಲ್ಲಿಯೇ 3ಡಿ ತಾರಾಲಯ ಹೊಂದಿರುವ ಮೊದಲ ನಗರ ಎಂಬ ಕೀರ್ತಿಗೆ ಮಂಗಳೂರು ಪಾತ್ರವಾಗಲಿದೆ.

2013ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 3ಡಿ ತಾರಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು 24.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ತಾರಾಲಯ 2016ರ ಮೇ ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗುವ ಸಾಧ್ಯತೆ ಇದೆ. [ಕರಾವಳಿಯ ಕಲಾಧ್ಯಯನಕ್ಕೆ ಸಂಶೋಧನಾ ಕೇಂದ್ರದ ಅಗತ್ಯ]

Pilikula

ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯ ಸವಿನೆನಪಿಗಾಗಿ ತಾರಾಲಯಕ್ಕೆ ವಿವೇಕಾನಂದರ ಹೆಸರನ್ನು ಇಡಲಾಗಿದೆ. ತಾರಾಲಯದಲ್ಲಿ 3ಡಿ ತಂತ್ರಜ್ಞಾನದೊಂದಿಗೆ ಆಧುನಿಕ ಸಂಶೋಧನೆಗಳಿಗೆ ಅವಕಾಶವಿದೆ. ವಿಧ್ಯಾರ್ಥಿಗಳಿಗೆ ಮತ್ತು ವಿಜ್ಞಾನ ಆಸಕ್ತರಿಗೆ ತಾರಾಲಯ ಉತ್ತಮ ಕಲಿಕೆಯ ಅನುಭವನನ್ನು ನೀಡಲಿದೆ. [ಚಿತ್ರಗಳು : ಮಂಗಳೂರಿನ ಪಿಲಿಕುಳದಲ್ಲಿ ಮೀನು ಮೇಳ]

ವಿದೇಶದಿಂದ ಉಪಕರಣ ತರಿಸಲಾಗಿದೆ : ವಿವೇಕಾನಂದ 3ಡಿ ತಾರಾಲಯಕ್ಕೆ ಉಪಕರಣಗಳನ್ನು ವಿದೇಶದಿಂದ ತರಿಸಲಾಗಿದೆ. ತಾರಾಲಯದ ನಿರ್ಮಾಣ ಕಾರ್ಯ ಶೇ 70ರಷ್ಟು ಪೂರ್ಣಗೊಂಡಿದ್ದು, ಮೇ ವೇಳೆಗೆ ಉದ್ಘಾಟನೆಗೊಳ್ಳುವುದು ಖಚಿತವಾಗಿದೆ.

'ಗ್ಲೋಬಲ್ ಇ ಟೆಂಡರಿಂಗ್‌ ಮೂಲಕ ತಾರಾಲಯಕ್ಕೆ ಉಪಕರಣಗಳನ್ನು ಜಪಾನ್, ಫ್ರಾನ್ಸ್, ಅಮೆರಿಕ, ಜರ್ಮನಿ ಮುಂತಾದ ದೇಶಗಳಿಂದ ತರಿಸಲಾಗಿದೆ' ಎಂದು ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಕೆ.ವಿ.ರಾವ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+