'ಕಿರಿಕ್ ಪಾರ್ಟಿ' ರಕ್ಷಿತ್ ಶೆಟ್ಟಿಯಿಂದ ವಿದ್ಯಾರ್ಥಿಗಳಿಗೆ ಫಿಲ್ಮ್ ಮೇಕಿಂಗ್ ಪಾಠ

ನಟ ರಕ್ಷಿತ್ ಶೆಟ್ಟಿ ಮಂಗಳೂರು ವಿದ್ಯಾರ್ಥಿಗಳಿಗೆ ಸಿನಿಮಾ ನಿರ್ಮಾಣದ ಕುರಿತು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಇಲ್ಲಿನ ದೇರಳಕಟ್ಟೆಯ ನಿಟ್ಟೆ ವಿದ್ಯಾರ್ಥಿಗಳಿಗೆ 'ಕ್ರಾಫ್ಟ್ ಆಫ್ ಫಿಲ್ಮ್ ಮೇಕಿಂಗ್' ವಿಷಯದ ಕುರಿತ ಉಪನ್ಯಾಸ ನೀಡಿಲಿದ್ದಾರೆ.

ಮಂಗಳೂರು, ಮಾರ್ಚ್ 13: ಕಿರಿಕ್ ಪಾರ್ಟಿ ನಟ ರಕ್ಷಿತ್ ಶೆಟ್ಟಿ ಮಂಗಳೂರು ವಿದ್ಯಾರ್ಥಿಗಳಿಗೆ ಸಿನಿಮಾ ನಿರ್ಮಾಣದ ಕುರಿತು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಇಲ್ಲಿನ ದೇರಳಕಟ್ಟೆಯ ಪನ್ನೀರ್ ಕ್ಯಾಂಪಸಿನಲ್ಲಿರುವ ನಿಟ್ಟೆ ವಿದ್ಯಾರ್ಥಿಗಳಿಗೆ 'ಕ್ರಾಫ್ಟ್ ಆಫ್ ಫಿಲ್ಮ್ ಮೇಕಿಂಗ್' ವಿಷಯದ ಕುರಿತು ಉಪನ್ಯಾಸ ನೀಡಿಲಿದ್ದಾರೆ.

ನಾಳೆ ಅಂದರೆ ಮಾರ್ಚ್ 14ರಂದು ಬೆಳಿಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ಆಯೋಜನೆಯಾಗಿದೆ. ವಿದ್ಯಾರ್ಥಿಳಲ್ಲದೆ ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳೂ ಭಾಗವಹಿಸಿ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಜತೆ ಸಂವಾದವನ್ನೂ ಮಾಡಬಹುದು.[ತುಂಬೆ ಡ್ಯಾಂನಲ್ಲಿ ನೀರು ಇಳಿಕೆ: ಕರಾವಳಿಯಲ್ಲೂ ಜಲಕ್ಷಾಮ..?]

 actor-director Rakshit Shetty’s Film Making class ti Nitte students

ನಿಟ್ಟೆ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ ಈ ಕಾರ್ಯಕ್ರಮ ಆಯೋಜಿಸಿದೆ. ಈ ಹಿಂದೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಮತ್ತು ಮಾಧ್ಯಮ ಉತ್ಸವಗಳನ್ನೂ ಆಯೋಜಿಸಿದ್ದ ಕಾಲೇಜು ಇದೀಗ ವಿದ್ಯಾರ್ಥಿಗಳಿಗೆ ಸಿನಿಮಾ ನಿರ್ದೇಶಕರಿಂದಲೇ ಸಿನಿಮಾ ನಿರ್ಮಾಣದ ಅನುಭವಗಳನ್ನು ಕಲಿತುಕೊಳ್ಳುವ ಅವಕಾಶ ಕಲ್ಪಿಸಿದೆ.[ಪುತ್ತೂರು ಬಳಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾರು ಅಪಘಾತ]

"ಜನಪ್ರಿಯ ಸಿನಿಮಾ ನಿರ್ದೇಶಕ ಮತ್ತು ಭಿನ್ನ ಹಾದಿಯ ನಟ ರಕ್ಷಿತ್ ಶೆಟ್ಟಿ ನಮ್ಮ ಜತೆಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸಿನಿಮಾ ಮತ್ತು ಮನನರಂಜನಾ ಉದ್ಯಮದ ಅಂತರಾಳವನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ," ಎಂದು ವಿಭಾಗದ ಮುಖ್ಯಸ್ಥರಾದ ಫ್ರೊ ರವಿರಾಜ್ ಕಿಣಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+