ವೈರಲ್ ವಿಡಿಯೋ : ಪುತ್ತೂರಿನಲ್ಲಿ ಒಮ್ನಿಗೆ ಜೀಪ್ ಡಿಕ್ಕಿ, ಓರ್ವ ಸಾವು
ಮಂಗಳೂರು, ಜನವರಿ 22 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಒಮ್ನಿ ಕಾರು ಹಾಗೂ ಪಿಕಪ್ ಜೀಪ್ ನಡುವೆ ಸಂಭವಿಸಿದ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುತ್ತೂರಿನ ಮುಕ್ವೆ ಎಂಬಲ್ಲಿ ಒಮ್ನಿ ಕಾರು ಹಾಗೂ ಪಿಕಪ್ ಜೀಪ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಮ್ನಿ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬೈಕ್ ಒಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬಂದ ಒಮ್ನಿ ಕಾರ್ ಗೆ ಪಿಕಪ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕೃಷ್ಣ ಭಟ್ ಎಂಬವವರು ಸಾವನ್ನಪ್ಪಿದ್ದು , ಕೃಷ್ಣ ಭಟ್ ಮಗ ಅವಿನಾಶ್ ಭಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯ ಗೊಂಡ ಅವಿನಾಶ್ ಭಟ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು ಸಂಚಾರಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ವಾಹನಗಳ ನಡುವೆ ನಡೆದ ಅಪಘಾತದ ದೃಶ್ಯ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ಗಂಭೀರತೆಯನ್ನು ತಿಳಿಸುತ್ತಿದೆ. ಅಪಘಾತದ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.












Click it and Unblock the Notifications